ಭಾರತದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ ಜಿಲೇಬಿಗೆ ಇಂಗ್ಲಿಷ್‌ನಲ್ಲಿ ಏನು ಎಂದು ಕರೆಯುತ್ತಾರೆ?
ಭಾರತದ ಅತ್ಯಂತ ಪ್ರಸಿದ್ಧ ಸಿಹಿತಿಂಡಿಗಳಲ್ಲಿ ಒಂದಾದ ಜಿಲೇಬಿಗೆ ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತಾರೆ. ಮಧ್ಯಪ್ರಾಚ್ಯದಲ್ಲಿ 'ಜುಲಾಬಿಯಾ' ಎಂಬ ಹೆಸರಿನಿಂದ ಹುಟ್ಟಿದ ಈ ಸಿಹಿ ತಿನಿಸು, ಭಾರತಕ್ಕೆ ಬಂದು ತನ್ನದೇ ಆದ ವಿಶಿಷ್ಟ ರುಚಿಯಿಂದ ಜನಪ್ರಿಯವಾಗಿದೆ.

ಭಾರತದ ಅತ್ಯಂತ ಪ್ರಸಿದ್ಧ ಸಿಹಿತಿಂಡಿ
ಭಾರತದಲ್ಲಿ ಯಾವುದೇ ಶುಭ ಸಂದರ್ಭಗಳಿರಲಿ ಅಲ್ಲಿ ಜಿಲೇಬಿ ಇದ್ದೇ ಇರುತ್ತದೆ. ಜಿಲೇಬಿ ಎಂಬ ಸಿಹಿ ತಿನಿಸು ವಿಶೇಷ ಕ್ಷಣಗಳನ್ನು ಮತ್ತಷ್ಟು ವಿಶೇಷವನ್ನಾಗಿಸುತ್ತದೆ. ಜಿಲೇಬಿ ಭಾರತದ ಅತ್ಯಂತ ಪ್ರಸಿದ್ಧ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಆದ್ರೆ ಜಿಲೇಬಿಗೆ ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತಾರೆ ಅಂತಾ ಬಹುತೇಕರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಜಿಲೇಬಿ ಅಥವಾ ಜಹಾಂಗೀರ ಅಂತಾನೂ ಈ ಸಿಹಿ ಪಾಕವನ್ನು ಕರೆಯಲಾಗುತ್ತದೆ.
ಇಂಗ್ಲಿಷ್‌ನಲ್ಲಿ ಏನು ಅಂತಾರೆ?
ಜಿಲೇಬಿಯನ್ನು ಇಂಗ್ಲಿಷ್‌ನಲ್ಲಿ 'ಸ್ವೀಟ್ ಪ್ರೆಟ್ಜೆಲ್' ಅಥವಾ 'ಕಾಯಿಲ್ಡ್ ಫನಲ್ ಕೇಕ್' ಎಂದು ಕರೆಯಲಾಗುತ್ತದೆ. ಕೆಲವರು ಇದನ್ನು 'ಇಂಡಿಯನ್ ಸಿರಪ್-ಕೋಟೆಡ್ ಡೆಸರ್ಟ್' ಎಂದೂ ಕರೆಯುತ್ತಾರೆ. ಇದು ಹೊರಗೆ ಕುರುಕಲು ಮತ್ತು ಒಳಗೆ ರಸಭರಿತವಾಗಿರುತ್ತದೆ. ಇದು ಜಿಲೇಬಿಯನ್ನು ಇತರ ಸಿಹಿತಿಂಡಿಗಳಿಗಿಂತ ವಿಭಿನ್ನ ಮತ್ತು ವಿಶೇಷವಾಗಿಸುತ್ತದೆ.
ಜಿಲೇಬಿ ಮಾಡುವ ವಿಧಾನ
ಜಿಲೇಬಿ ತಯಾರಿಸಲು ಮೈದಾ ಹಿಟ್ಟಿನ ಮಿಶ್ರಣವನ್ನು ತಯಾರಿಸಲಾಗುತ್ತದೆ. ಇದನ್ನು ಮೊಸರಿನೊಂದಿಗೆ ಹುದುಗಿಸಲಾಗುತ್ತದೆ. ನಂತರ ಈ ಮಿಶ್ರಣವನ್ನು ಬಟ್ಟೆಯಲ್ಲಿ ತುಂಬಿಸಿ ಬಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಫ್ರೈ ಮಾಡಲಾಗುತ್ತದೆ. ಜಿಲೇಬಿ ಬಂಗಾರದ ಬಣ್ಣಕ್ಕೆ ತಿರುಗಿ ಗರಿಗರಿಯಾದಾಗ, ಅದನ್ನು ಬಿಸಿ ಸಕ್ಕರೆ ಪಾಕದಲ್ಲಿ ಅದ್ದಿ ಇಡಲಾಗುತ್ತದೆ.
ಜಿಲೇಬಿ
ಜಿಲೇಬಿ ಹೊರಗೆ ಕುರುಕಲು ಮತ್ತು ಒಳಗೆ ರಸಭರಿತವಾಗಿರುತ್ತದೆ. ನೀವು ಅದನ್ನು ನಿಮ್ಮ ಬಾಯಿಗೆ ಹಾಕಿದ ತಕ್ಷಣ, ಒಳಗಿನ ಸಿಹಿ ಕ್ಯಾರಮೆಲ್ ನಿಮ್ಮ ನಾಲಿಗೆಗೆ ತಗುಲಿ ನಿಮ್ಮನ್ನು ಜುಮ್ಮೆನಿಸುವಂತೆ ಮಾಡುತ್ತದೆ. ಬಿಸಿ ಜಿಲೇಬಿ ರುಚಿ ತುಂಬಾ ಚೆನ್ನಾಗಿರುತ್ತದೆ. ಜಿಲೇಬಿಯನ್ನು ರಬಿಡಿ ಅಥವಾ ಐಸ್‌ಕ್ರೀಂನೊಂದಿಗೆ ಕೆಲವರು ತಿನ್ನುತ್ತಾರೆ. ಎಲ್ಲಾ ವಯಸ್ಸಿನವರಿಗೂ ಜಿಲೇಬಿ ಇಷ್ಟವಾಗುತ್ತದೆ.
ಇದನ್ನೂ ಓದಿ: ₹1000 ರೂಪಾಯಿ ಬೆಲೆಯ ಬಟರ್ ಕುಕೀಸ್ ಈಗ 300ಕ್ಕೆ, ಮನೆಯಲ್ಲೇ ತಯಾರಿಸಿ, ರೆಸಿಪಿ ಇಲ್ಲಿದೆ!
ಜಿಲೇಬಿಯ ಮೂಲ ಹೆಸರು
ಜಿಲೇಬಿಯ ಮೂಲ ಹೆಸರು 'ಜುಲಾಬಿಯಾ' ಅಥವಾ 'ಜಲಾಬಿಯಾ'. ಇದನ್ನು ಮಧ್ಯಪ್ರಾಚ್ಯದಲ್ಲಿ ತಯಾರಿಸಲಾಗುತ್ತಿತ್ತು. ನಂತರ, ಈ ಸಿಹಿ ಭಾರತಕ್ಕೆ ಬಂದು ಇನ್ನಷ್ಟು ವಿಶೇಷವಾಗಿದೆ. ಭಾರತ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಆಫ್ರಿಕನ್ ದೇಶಗಳಲ್ಲಿಯೂ ಬಹಳ ಜನಪ್ರಿಯವಾಗಿದೆ. ಪ್ರತಿ ವರ್ಷ ಜುಲೈ 30 ರಂದು ವಿಶ್ವ ಜಿಲೇಬಿ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ತವಾಗೆ ಸ್ವಲ್ಪನೂ ಅಂಟಿಕೊಳ್ಳದೆ ಗರಿಗರಿಯಾದ, ರೌಂಡಾಗಿ ದೋಸೆ ಬರಲು ಸುಲಭವಾದ ಟ್ರಿಕ್ಸ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

