ಅಡುಗೆಮನೆಯಲ್ಲಿರೊ ಈ 3 ವಸ್ತು ಡೇಂಜರ್ ಅಂತೆ, ಈಗ್ಲೇ ಎಸಿರಿ ಎಂದ ಲಿವರ್ ಸ್ಪೆಷಲಿಸ್ಟ್
ಈ ವಸ್ತುಗಳನ್ನು ನಿಮ್ಮ ಅಡುಗೆಮನೆಯಲ್ಲಿ ಇಡಬಾರದು. ಒಂದು ವೇಳೆ ಇದ್ದರೆ ಅವುಗಳನ್ನು ಅಲ್ಲಿಂದ ತೆಗೆದುಹಾಕುವುದು ಒಳ್ಳೆಯದು ಎಂದು ಡಾ. ಸೇಥಿ ಹೇಳಿದ್ದು, ಆ ವಸ್ತುಗಳು ಯಾವುವು ಎಂದು ನೋಡೋಣ...

3 ವಸ್ತು ಟಾಕ್ಸಿಕ್
ಅಡುಗೆಮನೆಯನ್ನು ಸಾಮಾನ್ಯವಾಗಿ 'ನಿಧಿ ಇರುವ ಜಾಗ' ಎಂದು ಕರೆಯಲಾಗುತ್ತದೆ. ಏಕೆಂದರೆ ಆ ಸ್ಥಳದಲ್ಲಿರುವುದು ನಮ್ಮ ಆರೋಗ್ಯವನ್ನು ಹೆಚ್ಚಿಸಿ, ಕಾಯಿಲೆಯಿಂದ ದೂರವಿಡುವ ಪದಾರ್ಥಗಳು ಮಾತ್ರ. ಆದರೆ ಅಡುಗೆಮನೆಯಲ್ಲಿ ಆರೋಗ್ಯಕ್ಕೆ ಹಾನಿ ಮಾಡುವ ವಸ್ತುಗಳೂ ಸಹ ಇವೆ. ಇವುಗಳ ಪೈಕಿ ಅಡುಗೆಮನೆಯಲ್ಲಿ ಬಳಸುವ ಉಪಕರಣಗಳು ಅಥವಾ ಆಹಾರ ಸಂಗ್ರಹಿಸಲು ಬಳಸುವ ಪಾತ್ರೆಗಳು ಸೇರಿವೆ. ಡಾ. ಸೇಥಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಕುರಿತಾಗಿ ವಿಡಿಯೋ ಶೇರ್ ಮಾಡಿದ್ದು, ಇದರಲ್ಲಿ ಅವರು ಅಡುಗೆಮನೆಯಲ್ಲಿರುವ 3 ವಸ್ತುಗಳು ಟಾಕ್ಸಿಕ್ ಎಂದು ವಿವರಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ಈ ವಸ್ತುಗಳನ್ನು ನಿಮ್ಮ ಅಡುಗೆಮನೆಯಲ್ಲಿ ಇಡಬಾರದು. ಒಂದು ವೇಳೆ ಅಡುಗೆಮನೆಯಲ್ಲಿದ್ದರೆ ಅವುಗಳನ್ನು ಅಲ್ಲಿಂದ ತೆಗೆದುಹಾಕುವುದು ಗುಡ್ ಐಡಿಯಾ ಎಂದು ಡಾ. ಸೇಥಿ ಹೇಳಿದ್ದು, ಆ ವಸ್ತುಗಳು ಯಾವುವು ಎಂದು ನೋಡೋಣ…
ಪ್ಲಾಸ್ಟಿಕ್ ವಸ್ತುಗಳು
ಪ್ಲಾಸ್ಟಿಕ್ ಐಟಂ ಕಾಲಾನಂತರದಲ್ಲಿ ಹಾಳಾಗಲು ಪ್ರಾರಂಭಿಸುತ್ತವೆ. ವಿಶೇಷವಾಗಿ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ BPA ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಇದೇ ಕಾರಣದಿಂದಾಗಿ ಅವುಗಳನ್ನು ಅಡುಗೆಮನೆಯಲ್ಲಿ ಇಡಬಾರದು ಎಂದು ವೈದ್ಯರು ಹೇಳುತ್ತಾರೆ. ಅದಕ್ಕಾಗಿಯೇ ಚಮಚ ಸೇರಿದಂತೆ ಯಾವುದೇ ಅಡುಗೆಮನೆಯ ಪಾತ್ರೆ ಆರಿಸುವಾಗ ಆರೋಗ್ಯಕ್ಕೆ ಸುರಕ್ಷಿತವಾದ ವಸ್ತು ಆರಿಸಬೇಕು. ಅಂದರೆ ಸ್ಟೇನ್‌ಲೆಸ್ ಸ್ಟೀಲ್, ಸಿಲಿಕೋನ್ ಅಥವಾ ಬಿದಿರು ಅಡುಗೆ ಪಾತ್ರೆ ಉತ್ತಮ ಆಯ್ಕೆಗಳಾಗಿವೆ.
ಪ್ಲಾಸ್ಟಿಕ್ ಕಟಿಂಗ್ ಬೋರ್ಡ್
ಪ್ಲಾಸ್ಟಿಕ್ ಕಟಿಂಗ್ ಬೋರ್ಡ್‌ಗಳು ಕಾಲಾನಂತರದಲ್ಲಿ ಹಾಳಾಗಲು ಪ್ರಾರಂಭಿಸುತ್ತವೆ ಮತ್ತು ಆಹಾರದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಮರ ಅಥವಾ ಗಾಜಿನಿಂದ ಮಾಡಿದ ಚಾಪಿಂಗ್ ಬೋರ್ಡ್‌ಗಳನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಗೀಚಿದ ನಾನ್‌ಸ್ಟಿಕ್ ಪ್ಯಾನ್
ಅಡುಗೆಮನೆಯಲ್ಲಿ ಗೀರು ಬಿದ್ದ ಅಥವಾ ಮುರಿದ ನಾನ್-ಸ್ಟಿಕ್ ಪ್ಯಾನ್‌ಗಳಿದ್ದರೆ ಅವುಗಳನ್ನು ಬಳಸಬಾರದು. ಈ ನಾನ್-ಸ್ಟಿಕ್ ಪ್ಯಾನ್‌ಗಳಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ PFA ಗಳು ಇರಬಹುದು. ಅವು ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಸಮಸ್ಯೆಗಳು ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳನ್ನು ಉಂಟುಮಾಡಬಹುದು.
ವಿಷಕಾರಿ ಕಣ ಬಿಡುಗಡೆ
ಅಷ್ಟೇ ಅಲ್ಲ, ಹಾನಿಗೊಳಗಾದ ನಾನ್-ಸ್ಟಿಕ್ ಪ್ಯಾನ್‌ಗಳು ನಿಮ್ಮ ಆಹಾರಕ್ಕೆ ವಿಷಕಾರಿ ಕಣಗಳನ್ನು ಬಿಡುಗಡೆ ಮಾಡಬಹುದು. ಈ ಪ್ಯಾನ್‌ಗಳನ್ನು ಖರೀದಿಸುವಾಗ ಸ್ಟೇನ್‌ಲೆಸ್ ಸ್ಟೀಲ್ ಅಥವಾ ಎರಕಹೊಯ್ದ ಕಬ್ಬಿಣ ಅಥವಾ ಸಂಪೂರ್ಣವಾಗಿ ಸೆರಾಮಿಕ್ ಪ್ಯಾನ್ ಆಯ್ಕೆ ಮಾಡಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.