ಥ್ರೆಡ್ಡಿಂಗ್ ಮಾಡಿಸಲು ಪಾರ್ಲರ್‌ಗೆ ಹೋದ ಯುವತಿ ಬರುವಾಗ ಲಿವರ್ ಫೇಲ್ಯೂರ್ ಮಾಡ್ಕೊಂಡು ಬರೋದಾ!
ಇತ್ತೀಚೆಗೆ ವೈರಲ್ ಆದ ವೀಡಿಯೊದಲ್ಲಿ ಡಾಕ್ಟರ್ ಆದಿತಿಜ್ ಧಮಿಜಾ ಶಾಕಿಂಗ್ ನ್ಯೂಸ್ ಶೇರ್ ಮಾಡಿದ್ದು, 28 ವರ್ಷದ ಯುವತಿ ಹುಬ್ಬು ಥ್ರೆಡಿಂಗ್ ಮಾಡಿಸಲು ಪಾರ್ಲರ್‌ಗೆ ಹೋದಳು. ಆದರೆ ಬರುವಾಗ…

Expert On Threading Health Risks: ನೀವು ಐಬ್ರೋ ಥ್ರೆಡ್ಡಿಂಗ್ ಮಾಡಿಸಿಕೊಳ್ಳಲು ಅಥವಾ ನಿಮ್ಮ ಮುಖವನ್ನು ಆಗಾಗ್ಗೆ ಕ್ಲೀನಿಂಗ್ ಮಾಡಿಸಲು ನಿಮ್ಮ ಏರಿಯಾದಲ್ಲಿರುವ ಬ್ಯೂಟಿ ಪಾರ್ಲರ್‌ಗೆ ಹೋದರೆ ಜಾಗರೂಕರಾಗಿರಿ. ಇತ್ತೀಚೆಗೆ ವೈರಲ್ ಆದ ವೀಡಿಯೊದಲ್ಲಿ ಡಾಕ್ಟರ್ ಆದಿತಿಜ್ ಧಮಿಜಾ (drdhamija)ಶಾಕಿಂಗ್ ನ್ಯೂಸ್ ಶೇರ್ ಮಾಡಿದ್ದು, 28 ವರ್ಷದ ಯುವತಿ ಹುಬ್ಬು ಥ್ರೆಡಿಂಗ್ ಮಾಡಿಸಲು ಪಾರ್ಲರ್‌ಗೆ ಹೋದಳು. ಆದರೆ ಬರುವಾಗ ಲಿವರ್ ಫೇಲ್ಯೂರ್ ಮಾಡ್ಕೊಂಡು ಹಿಂತಿರುಗಿ ಬಂದಳು.
ಹೌದು, ಯುವತಿಗೆ ಐಬ್ರೋ ಥ್ರೆಡ್ಡಿಂಗ್ ನಂತರ ಆಯಾಸ, ವಾಕರಿಕೆ ಮತ್ತು ಕಣ್ಣುಗಳಲ್ಲಿ ಹಳದಿ ಬಣ್ಣ ಮುಂತಾದ ಲಕ್ಷಣಗಳು ಕಂಡುಬಂದಿವೆ ಎಂದು ವೈದ್ಯರು ಹೇಳಿದ್ದಾರೆ. ಆಗ ಪರೀಕ್ಷೆ ಮಾಡಿಸಿದಾಗ, ಆಕೆಗೆ ಲಿವರ್ ಫೇಲ್ಯೂರ್ ಆಗಿರುವುದು ಕಂಡುಬಂದಿದೆ.
ಇದಾಗಿದ್ದು, ಯಾವುದೋ ಔಷಧಿ ಅಥವಾ ಮದ್ಯಪಾನದಿಂದಲ್ಲ, ಪಾರ್ಲರ್‌ನ ನಿರ್ಲಕ್ಷ್ಯದಿಂದ ಸಂಭವಿಸಿದೆ. ಹಾಗಾದರೆ ಲಿವರ್ ಫೇಲ್ಯೂರ್‌ಗೂ, ನಿಮ್ಮ ಹುಬ್ಬನ್ನ ಥ್ರೆಡಿಂಗ್ ಮಾಡಿಸುವುದಕ್ಕೂ ಏನು ಸಂಬಂಧವಿದೆ ಎಂದು ನೋಡೋಣ ಬನ್ನಿ...
ನೆನಪಿಡಿ, ಥ್ರೆಡ್ಡಿಂಗ್ ನಮಗೆ ಹಾನಿಕಾರಕವಲ್ಲ, ಆದರೆ ಅದನ್ನು ಮಾಡಿಸುವಾಗ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡದಿದ್ದರೆ ಅದು ನಮಗೆ ಅಪಾಯಕಾರಿ. ಥ್ರೆಡ್ಡಿಂಗ್ ಸಮಯದಲ್ಲಿ ಹಳೆಯ ದಾರವನ್ನು ಬಳಸಿದರೆ ಅಥವಾ ಪಾರ್ಲರ್‌ನಲ್ಲಿ ಕೆಲಸಗಾರರ ಕೈಗಳು ಸ್ವಚ್ಛವಾಗಿಲ್ಲದಿದ್ದರೆ, ಹೆಪಟೈಟಿಸ್ ಬಿ ಅಥವಾ ಸಿ ನಂತಹ ಅಪಾಯಕಾರಿ ವೈರಸ್‌ಗಳು ಸಣ್ಣ ಗಾಯಗಳ ಮೂಲಕ ನಿಮ್ಮ ರಕ್ತವನ್ನು ಪ್ರವೇಶಿಸಬಹುದು. ಈ ವೈರಸ್‌ಗಳು ರಕ್ತದ ಮೂಲಕ ನಮ್ಮ ದೇಹದಲ್ಲಿ ಹರಡಿ ನಿಧಾನವಾಗಿ ಯಕೃತ್ತನ್ನು ಹಾನಿಗೊಳಿಸುತ್ತವೆ.
ಈ ವಿಷಯ ನೆನಪಿನಲ್ಲಿಟ್ಟುಕೊಳ್ಳಿ..
ಯಾವಾಗಲೂ ಹೊಸ, ಯುಸ್ ಆಂಡ್ ಥ್ರೋ ದಾರವನ್ನು ಬಳಸಿ.
ಥ್ರೆಡ್ಡಿಂಗ್ ಮಾಡುವ ಮೊದಲು ಮತ್ತು ನಂತರ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು.
ಪಾರ್ಲರ್ ಕೆಲಸಗಾರರು ತನ್ನ ಕೈಗಳನ್ನು ತೊಳೆದು ಸ್ಯಾನಿಟೈಸ್ ಮಾಡಿದ ನಂತರ ಕೆಲಸ ಮಾಡುವುದು ಮುಖ್ಯ.
ಚರ್ಮದ ಮೇಲೆ ಯಾವುದೇ ಗಾಯ, ಸುಟ್ಟ ಗಾಯ ಅಥವಾ ಮೊಡವೆ ಇದ್ದರೆ, ಥ್ರೆಡ್ಡಿಂಗ್ ಮಾಡಬೇಡಿ ಅಥವಾ ಮಾಡಿಸಬೇಡಿ.
ಅಗ್ಗದ ಪಾರ್ಲರ್‌ಗಳಲ್ಲಿ ಅಥವಾ ತರಬೇತಿ ಪಡೆಯದ ಜನರಿಂದ ಥ್ರೆಡ್ಡಿಂಗ್ ಮಾಡಿಸಿಕೊಳ್ಳುವುದನ್ನು ತಪ್ಪಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
