MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • PCOD ಸೇರಿದಂತೆ ಹಾರ್ಮೋನ್ ಸಮಸ್ಯೆ ಕಾಡ್ತಿದ್ರೆ ಈಗ್ಲೇ ಮನೆಯಿಂದ ಈ ವಸ್ತು ಹೊರ ಹಾಕಿ

PCOD ಸೇರಿದಂತೆ ಹಾರ್ಮೋನ್ ಸಮಸ್ಯೆ ಕಾಡ್ತಿದ್ರೆ ಈಗ್ಲೇ ಮನೆಯಿಂದ ಈ ವಸ್ತು ಹೊರ ಹಾಕಿ

ಪಿಸಿಒಡಿ, ಥೈರಾಯ್ಡ್, ಫರ್ಟಿಲಿಟಿ ಪ್ರಾಬ್ಲಂ, ಪಿರಿಯಡ್ ಪ್ರಾಬ್ಲಂ ಅಂತ ನಾನಾ ಹಾರ್ಮೋನ್ ಗೆ ಸಂಬಂಧಿಸಿದ ಸಮಸ್ಯೆ ಈಗ ಹೆಚ್ಚಾಗಿದೆ. ಹಾಮೋರ್ನ್ ಏರುಪೇರಾಗೋಕೆ ಬರೀ ನೀವು ಸೇವನೆ ಮಾಡೊ ಆಹಾರ ಮಾತ್ರವಲ್ಲ ನಿಮ್ಮ ಮನೆಯಲ್ಲಿರುವ ಕೆಲ ವಸ್ತುಗಳೂ ಕಾರಣ. 

2 Min read
Author : Roopa Hegde
Published : Feb 12 2026, 02:16 PM IST
Share this Photo Gallery
  • FB
  • TW
  • Linkdin
  • Whatsapp
16
ಪರ್ಫ್ಯೂಮ್, ಬಾಡಿ ಸ್ಪ್ರೇ
Image Credit : Asianet News

ಪರ್ಫ್ಯೂಮ್, ಬಾಡಿ ಸ್ಪ್ರೇ

ಹಾರ್ಮೋನ್ ಏರುಪೇರು ಈಗ ಸಾಮಾನ್ಯ ಎನ್ನುವಂತಾಗಿದೆ. ಆದ್ರೆ ಅದಕ್ಕೆ ನಾವು ಬಳಸುವ ವಸ್ತುಗಳೇ ಮೂಲ ಕಾರಣ. ಪ್ರತಿಯೊಬ್ಬರ ಮನೆಯಲ್ಲಿ ಪರ್ಫ್ಯೂಮ್, ಬಾಡಿ ಸ್ಪ್ರೇ ರಾಶಿ ರಾಶಿ ಬಿದ್ದಿರುತ್ತೆ. ಜನರು ದಿನಕ್ಕೊಂದು ಪರ್ಫ್ಯೂಮ್ ಬಳಕೆ ಮಾಡ್ತಾರೆ. ಆದ್ರೆ ಈ ಪರ್ಫ್ಯೂಮ್ ನಲ್ಲಿ ಸಿಂಥೆಟಿಕ್ ಫ್ರ್ಯಾಗ್ನೆನ್ಸ್ ಹಾಗೂ ಥಾಲೇಟ್ಗಳನ್ನು ಬಳಸಲಾಗುತ್ತೆ. ಪರ್ಫ್ಯೂಮ್ ವಾಸನೆ ಚೆನ್ನಾಗಿ ಬರ್ಲಿ, ತುಂಬಾ ಟೈ ಬರಲಿ ಅಂತ ನಾವು ಅದನ್ನು ಬಳಸ್ತೇವೆ. ಆದ್ರೆ ಅದ್ರಲ್ಲಿರುವ ಥಾಲೇಟ್ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಹಾರ್ಮೋನ್ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಇದು ಅಡ್ಡಿಯುಂಟು ಮಾಡುತ್ತೆ. ಸಂತಾನೋತ್ಪತ್ತಿ ಸಮಸ್ಯೆ, ಒಸಿಒಡಿ ಇರುವವರು ಪರ್ಫ್ಯೂಮ್ ನಿಂದ ದೂರ ಇರೋದು ಒಳ್ಳೆಯದು.

26
ಸುಹಾಸನೆಯುಳ್ಳ ಕ್ಯಾಂಡಲ್
Image Credit : Asianet News

ಸುಹಾಸನೆಯುಳ್ಳ ಕ್ಯಾಂಡಲ್

ಹಬ್ಬ ಅದ್ರಲ್ಲೂ ದೀಪಾವಳಿ, ಕ್ರಿಸ್ಮಸ್ ಸಂದರ್ಭದಲ್ಲಿ ಮನೆಯಲ್ಲಿ ಸುಹಾಸನೆಯುಳ್ಳ ಕ್ಯಾಂಡಲನ್ನು ಬಳಕೆ ಮಾಡೋದು ಹೆಚ್ಚು. ಸುಹಾಸಿತ ಕ್ಯಾಂಡಲ್ ನೋಡಲು ಸುಂದರವಾಗಿರೋದಲ್ದೆ ಮನೆ, ಮನಸ್ಸನ್ನು ಫ್ರೆಶ್ ಆಗಿರುವ ಸುಹಾಸನೆ ಹೊಂದಿರುತ್ತದೆ. ಆದ್ರೆ ಇದು ಹಾರ್ಮೋನ್ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಸುಹಾಸಿತ ಕ್ಯಾಂಡಲ್ ಹಚ್ಚಿದಾಗ ಬೆಂಜೀನ್ ಮತ್ತು ಟೊಲುಯೆನ್ ಬಿಡುಗಡೆಯಾಗುತ್ತದೆ. ಇದು ನಿಮ್ಮ ಲಿವರ್ ಗೆ ಹಾನಿಕರ. ನಿಮಗೆ ಹೆವಿ ಪಿರಿಯಡ್ಸ್ ಆಗ್ತಿದ್ದರೆ ಸುಹಾಸನೆಯುಳ್ಳು ಕ್ಯಾಂಡಲ್ ಗಳನ್ನು ಮನೆಯಲ್ಲಿ ಹಚ್ಚಬೇಡಿ.

Related Articles

Related image1
ಡಯಾಬಿಟೀಸ್‌ಗೆ HbA1c ಟೆಸ್ಟ್‌ ಮಾಡಿಸ್ತಿದ್ದೀರಾ? ಇದರ ರಿಸಲ್ಟ್‌ ಸುಳ್ಳಾಗಿರಬಹುದು ಎಂದ Lancet!
Related image2
Immunity Boosting Spices: ಆಸ್ಪತ್ರೆಗೆ ಅಲೆಯುವ ಬದಲು ಅಡುಗೆಮನೆಗೆ ಹೋಗಿ! ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಮಸಾಲೆ ಪದಾರ್ಥ ತಪ್ಪದೇ ತಿನ್ನಿ!
36
ರೂಮ್ ಸ್ಪ್ರೇ - ಏರ್ ಫ್ರೆಶ್ನರ್
Image Credit : Asianet News

ರೂಮ್ ಸ್ಪ್ರೇ - ಏರ್ ಫ್ರೆಶ್ನರ್

ಬಹುತೇಕ ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬಳಕೆ ಮಾಡಲಾಗುತ್ತೆ. ಆದ್ರೆ ಇದ್ರಲ್ಲಿ ಅತ್ಯಂತ ಅಪಾಯಕಾರಿ ರಾಸಾಯನಿಕಗಳಿವೆ. ವಿಒಸಿ, ಫಾರ್ಮಲ್ಡಿಹೈಡ್ ಮತ್ತು ಮಿಮಿಕ್ ಈಸ್ಟ್ರೋಜೆನ್ ಇದ್ರಲ್ಲಿರುತ್ತದೆ. ಎಂಡೊಮೆಟ್ರಿಯೊಸಿಸ್ ನಿಂದ ಬಳಲುತ್ತಿರುವವರು ರೂಮ್ ಸ್ಪ್ರೇ ಹಾಗೂ ಏರ್ ಫ್ರೆಶ್ನರ್ ನಿಂದ ದೂರ ಇರಬೇಕು. ಎಂಡೋಮೆಟ್ರಿಯೊಸಿಸ್ ಅಂದ್ರೆ ಗರ್ಭಾಶಯದ ಒಳಪದರ ಅಥವಾ ಎಂಡೊಮೆಟ್ರಿಯಂನಂತೆಯೇ ಇರುವ ಕೋಶಗಳು ಗರ್ಭಾಶಯದ ಹೊರಗೆ ಬೆಳೆಯುವ ಸ್ಥಿತಿ. ಎಂಡೊಮೆಟ್ರಿಯೊಸಿಸ್ ಹೆಚ್ಚಾಗಿ ಶ್ರೋಣಿಯ ಅಂಗಾಂಶವನ್ನು ಒಳಗೊಂಡಿರುತ್ತದೆ. ಇದು ಕರುಳು ಮತ್ತು ಮೂತ್ರಕೋಶ ಸೇರಿದಂತೆ ಹತ್ತಿರದ ಅಂಗಗಳ ಮೇಲೆ ಪರಿಣಾಮ ಬೀರಬಹುದು.

46
ಫ್ಯಾಬ್ರಿಕ್ ಕಂಡಿಷನರ್ – ಸೆಂಟೆಡ್ ಡಿಟರ್ಜೆಂಟ್
Image Credit : Asianet News

ಫ್ಯಾಬ್ರಿಕ್ ಕಂಡಿಷನರ್ – ಸೆಂಟೆಡ್ ಡಿಟರ್ಜೆಂಟ್

ಪ್ರತಿಯೊಬ್ಬರ ಮನೆಯಲ್ಲಿ ಬಳಸುವ ಅಗತ್ಯ ವಸ್ತುಗಳಲ್ಲಿ ಇದೂ ಒಂದು. ಆದ್ರೆ ಪ್ರತಿ ನಿತ್ಯ ನಾವು ಬಳಸುವ ಈ ವಸ್ತು ನಮ್ಮ ಹಾರ್ಮೋನ್ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರ್ತಿದೆ. ಫ್ಯಾಬ್ರಿಕ್ ಕಂಡಿಷನರ್ ಸೆಂಟೆಡ್ ಡಿಟರ್ಜೆಂಟ್ ನಲ್ಲಿರುವ ಕ್ವಾರ್ಟ್ಜ್ ಮತ್ತು ಥಾಲೇಟ್ಗಳು, ನೀವು ಉಸಿರಾಡಿದಾಗ ಹಾಗೂ ನಿಮ್ಮ ಚರ್ಮದ ಮೂಲಕ ನಿಮ್ಮ ದೇಹವನ್ನು ಸೇರುತ್ತವೆ. ಇದು ಆಂಡ್ರೋಜೆನ್ ಮತ್ತು ಎಸ್ಟ್ರೋಜೆನ್ ಮೇಲೆ ಪರಿಣಾಮ ಬೀರುತ್ತದೆ.

56
ಸುಹಾಸಿತ ಅಗರಬತ್ತಿ
Image Credit : Asianet News

ಸುಹಾಸಿತ ಅಗರಬತ್ತಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಲ್ಲಿ ಸುಹಾಸಿತ ಅಗರಬತ್ತಿ ಸೇರಿದೆ. ಪ್ರತಿ ದಿನ ಬೆಳಿಗ್ಗೆ, ಸಂಜೆ ಅಗರಬತ್ತಿ ಬೆಳಗಲೇಬೇಕು. ಇದು ತಪ್ಪಲ್ಲ. ಆದ್ರೆ ಅದಕ್ಕೆ ನೀವು ಸುಹಾಸಿತ ಅಗರಬತ್ತಿ ಬಳಸೋದು ಅಪಾಯಕಾರಿ. ಇದಕ್ಕೆ ಇದ್ದಿಲು ಧೂಳು ಹಾಗೂ ಕೆಮಿಕಲ್ ಗಳನ್ನು ಸೇರಿಸೋದ್ರಿಂದ ಉಸಿರಾಟದ ಮೂಲಕ ಅವು ದೇಹವನ್ನು ಸೇರುತ್ತವೆ. ಇದು ನಿಮ್ಮ ಇಡೀ ಹಾರ್ಮೋನ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹಾರ್ಮೋನ್ ಏರುಪೇರಿಗೆ ಮುಖ್ಯ ಕಾರಣವಾಗ್ತಿದೆ.

66
ಏನು ಮಾಡ್ಬೇಕು?
Image Credit : Asianet News

ಏನು ಮಾಡ್ಬೇಕು?

ಅತಿ ಸ್ಟ್ರಾಂಗ್ ಹಾಗೂ ಅತೀ ಸುಹಾಸನೆಯಿರುವ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ. ಯಾವಾಗ್ಲೂ ಹೆಚ್ಚು ಬಾಳಿಕೆ ಬರುವ ಹಾಗೂ ಹೆಚ್ಚು ಸುಹಾಸನೆಯಿರುವ ವಸ್ತುಗಳಲ್ಲಿ ಕೆಮಿಕಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದರ ಬದಲು ನ್ಯಾಚ್ಯುರಲ್ ಎಸೆನ್ಶಿಯಲ್ ಆಯಿಲ್ ರೋಲ್ ಆನ್ ಬಳಕೆ ಮಾಡ್ಬಹುದು. ಸುವಾಸನೆ ಇಲ್ಲದ ಜೇನುಮೇಣ ಅಥವಾ ಸೋಯಾ ಮೇಣದಬತ್ತಿ ಬಳಕೆ ಮಾಡಿ. ಬಟ್ಟೆ ವಾಶ್ ಮಾಡುವಾದ ವಿನೆಗರ್ ಮತ್ತು ಅಡಿಗೆ ಸೋಡಾ ಬಳಸಿ. ಬಿಸಿಲಿನಲ್ಲಿ ಬಟ್ಟೆ ಒಣಗಿಸಿದ್ರೆ ವಾಸನೆ ಬರೋದಿಲ್ಲ. ಗಿಡಮೂಲಿಕೆ, ಸಾಂಬ್ರಾಣಿ ರಾಳದಿಂದ ತಯಾರಿಸಿದ ಧೂಪವನ್ನು ಸೀಮಿತವಾಗಿ ಬಳಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
ಗಂಡ ಹೆಂಡತಿ ಸಕ್ರಿಯ ಲೈಂಗಿಕತೆ ಕ್ಯಾನ್ಸರ್ ಸೇರಿ ಹಲವು ಅಪಾಯಕ್ಕೆ ಔಷಧಿ, ಮಿಲನದ ಆರೋಗ್ಯ ಗುಟ್ಟು
Recommended image2
ಶೇಂಗಾ ಚಟ್ನಿ ಮಾಡುವಾಗ ನೀವು ಇದೊಂದನ್ನು ಮಾಡಿದ್ರೆ ಸಿಗೋ ರುಚಿಯೇ ಬೇರೆ; ಈ ಸೀಕ್ರೆಟ್ ಗೊತ್ತಾ?
Recommended image3
Immunity Boosting Spices: ಆಸ್ಪತ್ರೆಗೆ ಅಲೆಯುವ ಬದಲು ಅಡುಗೆಮನೆಗೆ ಹೋಗಿ! ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಮಸಾಲೆ ಪದಾರ್ಥ ತಪ್ಪದೇ ತಿನ್ನಿ!
Related Stories
Recommended image1
ಡಯಾಬಿಟೀಸ್‌ಗೆ HbA1c ಟೆಸ್ಟ್‌ ಮಾಡಿಸ್ತಿದ್ದೀರಾ? ಇದರ ರಿಸಲ್ಟ್‌ ಸುಳ್ಳಾಗಿರಬಹುದು ಎಂದ Lancet!
Recommended image2
Immunity Boosting Spices: ಆಸ್ಪತ್ರೆಗೆ ಅಲೆಯುವ ಬದಲು ಅಡುಗೆಮನೆಗೆ ಹೋಗಿ! ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಮಸಾಲೆ ಪದಾರ್ಥ ತಪ್ಪದೇ ತಿನ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved