15 ಕೆಜಿ ದೇಹದ ತೂಕ ಇಳಿಸಿಕೊಂಡ ಪರಿಣಿತಿ ಚೋಪ್ರಾ, ಅದು ಜಿಮ್‌ನಿಂದಲೋ, ಮಾರ್ಷಲ್ ಆರ್ಟ್ಸ್‌ನಿಂದಲೋ?
ಅಮನ್ಜೋತ್ ಕೌರ್ ಪಾತ್ರದಲ್ಲಿ ನಟಿ ಪರಿಣಿತಿ ಚೋಪ್ರಾ ಅಭಿನಯ ನಮ್ಮೆಲ್ಲರಿಗೂ ಮೆಚ್ಚುಗೆಯಾದರೂ ಆ ಚಿತ್ರದ ನಂತರ ಅವರ ರೂಪಾಂತರ ನಿಜವಾಗಿಯೂ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಆನ್‌ಸ್ಕ್ರೀನ್ ಆಗಿರಬಹುದು, ಆಫ್‌ಸ್ಕ್ರೀನ್ ಆಗಿರಬಹುದು ನಟಿ ಪರಿಣಿತಿ ಚೋಪ್ರಾ 'ಸ್ಟಾರ್' ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅವರ ನಟನಾ ಕೌಶಲ್ಯವಾಗಲಿ, ಫಿಟ್ನೆಸ್ ಪ್ರಯಾಣವಾಗಲಿ ಯಾವಾಗಲೂ ಎಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಿಲ್ಜಿತ್ ದೋಸಾಂಜ್ ಜೊತೆ ನಟಿಸಿದ ಅಮರ್ ಸಿಂಗ್ ಚಮ್ಕಿಲಾ (Amar Singh Chamkila) ಚಿತ್ರಕ್ಕಾಗಿ ಪರಿಣಿತಿ ಬರೋಬ್ಬರಿ 15 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಅಮನ್ಜೋತ್ ಕೌರ್ ಪಾತ್ರದಲ್ಲಿ ಅವರ ಅಭಿನಯ ನಮ್ಮೆಲ್ಲರಿಗೂ ಮೆಚ್ಚುಗೆಯಾದರೂ ಆ ಚಿತ್ರದ ನಂತರ ಅವರ ರೂಪಾಂತರ ನಿಜವಾಗಿಯೂ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು, ಪರಿಣಿತಿ ಹೆಚ್ಚಿನ ತೂಕವನ್ನು ಕಳೆದುಕೊಂಡು ಹೀಗೂ ಫಿಟ್ ಆಗಿರಬಹುದು ಎಂಬುದನ್ನು ನಮಗೆಲ್ಲಾ ಈಗ ತೋರಿಸಿದ್ದಾರೆ. ಹಾಗಾದ್ರೆ ಬನ್ನಿ, ಪರಿಣಿತಿ ತೂಕ ಇಳಿಸಿಕೊಂಡ ಜರ್ನಿಯ ವಿವರಗಳನ್ನು ತಿಳಿದುಕೊಳ್ಳುವ ಮೊದಲು ಅವರು ಈಗ ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ನೋಡೋಣ.
ಪರಿಣಿತಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಜಿಮ್ ದಿನಚರಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಶೀರ್ಷಿಕೆಯಲ್ಲಿ ಪಾತ್ರಕ್ಕಾಗಿ ತಮ್ಮ ತೂಕ ಹೆಚ್ಚಿಸಿಕೊಂಡ ಬಗ್ಗೆ ಮಾತನಾಡಿದ್ದಾರೆ. ಅವರೇ ಬರೆದಿರುವ ಪ್ರಕಾರ, "ಚಮ್ಕಿಲಾಗಾಗಿ 15 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಸಾಧ್ಯವಾದಷ್ಟು ಜಂಕ್ ತಿಂದು ಮನೆಗೆ ಹಿಂತಿರುಗುತ್ತಿದ್ದೆ" ಎಂದಿದ್ದಾರೆ.
ತಮ್ಮ ವ್ಯಾಯಾಮದ ಬಗ್ಗೆಯೂ ಮಾತನಾಡಿರುವ ಪರಿಣಿತಿ, " ಚಿತ್ರೀಕರಣದ ಸಮಯದಲ್ಲಿ ಸಂಗೀತ ಮತ್ತು ಆಹಾರ. ಅದು ನನ್ನ ದಿನಚರಿಯಾಗಿತ್ತು. ಈಗ ಚಿತ್ರ ಮುಗಿದ ನಂತರ ಕಥೆ ಇದಕ್ಕೆ ವಿರುದ್ಧವಾಗಿದೆ. ನಾನು ಸ್ಟುಡಿಯೋವನ್ನು ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ಜಿಮ್‌ನಲ್ಲಿ ಮತ್ತೆ ನನ್ನಂತೆ ಕಾಣಲು ಪ್ರಯತ್ನಿಸುತ್ತಿದ್ದೇನೆ. ಅದು ಅಮನ್ಜೋತ್ ಅವರಂತೆ ಅಲ್ಲ! ಇದು ಕಷ್ಟಕರವಾಗಿತ್ತು" ಎಂದು ಬರೆದುಕೊಂಡಿದ್ದಾರೆ.
ಆದರೆ ಪರಿಣಿತಿ ತೂಕ ಇಳಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲವಾದರೂ ಸದ್ಯ ಇದು ಅಭಿಮಾನಿಗಳಿಗೆ ಹೆಚ್ಚಿನ ಸ್ಫೂರ್ತಿ ನೀಡಿದೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ಕೆಲವು ವರ್ಷಗಳ ಹಿಂದೆ ಅವರು ಶುದ್ಧ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ 28 ಕೆಜಿ ತೂಕ ಇಳಿಸಿಕೊಂಡಿದ್ದರು.
ಈಗ ಪರಿಣಿತಿ ಫಿಟ್ನೆಸ್ ಯೋಜನೆಯ ಭಾಗವಾಗಿ ಕೇರಳದ ಸಾಂಪ್ರದಾಯಿಕ ಜನಪ್ರಿಯ ಸಮರ ಕಲೆಯಾದ ಕಲರಿಪಯಟ್ಟು(Kalaripayattu) ಅನ್ನು ಕೈಗೆತ್ತಿಕೊಂಡರು. ಏಕೆಂದರೆ ಕಲರಿಪಯಟ್ಟು ನಿಮ್ಮ ಇಡೀ ದೇಹಕ್ಕೆ ವ್ಯಾಯಾಮ ಒದಗಿಸುತ್ತದೆ. ಜಿಗಿಯುವುದು, ಹಿಗ್ಗಿಸುವುದು, ಬ್ಯಾಲೆನ್ಸ್ ಮಾಡುವುದು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ತರಬೇತಿ ಕೂಡ ಇದೆ. ಇದು ಶಕ್ತಿಯನ್ನು ನಿರ್ಮಿಸುತ್ತದೆ, ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಚಲನೆಗಳು ವೇಗವಾಗಿ ಮತ್ತು ತೀಕ್ಷ್ಣವಾಗಿರುತ್ತವೆ, ಇದು ತ್ರಾಣ ಮತ್ತು ಗಮನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪರಿಣಿತಿ ಚೋಪ್ರಾ ತನ್ನ ರೂಪಾಂತರದ ಮೇಲೆ ಕೆಲಸ ಮಾಡುವಾಗ ಇದನ್ನು ಕಲಿತರು. ಅದು ಸ್ಪಷ್ಟವಾಗಿ ಫಲ ನೀಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.