Ramadan 2026: ಇಡೀ ದಿನ ಹಸಿವು ಆಗದಿರಲು ಸೆಹ್ರಿಗೆ ಇದನ್ನೆಲ್ಲಾ ತನ್ನಿ; ಇವುಗಳನ್ನು ಮುಟ್ಟಲೂಬೇಡಿ
ರಂಜಾನ್ ಉಪವಾಸದ ಸಮಯದಲ್ಲಿ, ದಿನವಿಡೀ ಚೈತನ್ಯದಿಂದಿರಲು ಬೆಳಗಿನ ಜಾವದ ಸೆಹ್ರಿ ಆಹಾರ ಬಹಳ ಮುಖ್ಯ. ಆರೋಗ್ಯಕರ ಸೆಹ್ರಿಗಾಗಿ ಪ್ರೋಟೀನ್, ಫೈಬರ್, ಮತ್ತು ಕಾರ್ಬೋಹೈಡ್ರೇಟ್ಯುಕ್ತ ಆಹಾರಗಳನ್ನು ಸೇವಿಸಿ ಹಾಗೂ ಎಣ್ಣೆಯುಕ್ತ, ಸಕ್ಕರೆಭರಿತ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.

ಆಹಾರ
ರಂಜಾನ್ ಆರಂಭವಾಗಿದ್ದು, ಈ ತಿಂಗಳಲ್ಲಿ ಮುಸ್ಲಿಮರು ಉಪವಾಸ (ರೋಜಾ) ವ್ರತ ಆಚರಣೆ ಮಾಡುತ್ತಾರೆ. ಸೂರ್ಯೋದಯಕ್ಕೂ ಮುನ್ನ ಮತ್ತು ಸೂರ್ಯಾಸ್ತದ ನಂತರ ಮಾತ್ರವೇ ನೀರು ಸೇರಿದಂತೆ ಆಹಾರ ಸೇವಿಸಲು ಅವಕಾಶವಿರುತ್ತದೆ. ಹಾಗಾಗಿ ಬೆಳಗಿನ ಜಾವ ಸೇವಿಸುವ ಆಹಾರ ಅತ್ಯಂತ ಪ್ರಮುಖವಾಗಿರುತ್ತದೆ. ಈ ಆಹಾರ ಇಡೀ ದಿನ ನಿಮ್ಮನ್ನು ಆಕ್ಟಿವ್ ಆಗಿರುವಂತೆ ಮಾಡಬೇಕಾಗುತ್ತದೆ.
ಸೆಹ್ರಿಗೆ ಆರೋಗ್ಯಕರ ಆಹಾರ
ಬೆಳಗಿನ ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಬೇಕು. ಇದರಿಂದ ಇಡೀ ದಿನ ನಿಮಗೆ ಹಸಿವಿನ ಅನುಭವ ಆಗಲ್ಲ ಮತ್ತು ದಣಿವು ಆಗಲ್ಲ. ಹಾಗಾದ್ರೆ ಬೆಳಗ್ಗೆ ಯಾವೆಲ್ಲಾ ಆಹಾರ ಸೇವಿಸಬೇಕು ಮತ್ತು ಸೇವಿಸಬಾರದು ಎಂಬುದರ ಮಾಹಿತಿಯನ್ನು ಆರೋಗ್ಯ ತಜ್ಞರೊಬ್ಬರು ನೀಡಿದ್ದಾರೆ.
ಯಾವೆಲ್ಲಾ ಆಹಾರ ಸೇವಿಸಬೇಕು?
1.ಪ್ರೋಟಿನ್: ಬೆಳಗ್ಗೆ ಸೇವಿಸುವ ಪ್ರೋಟಿನ್ ನಿಮ್ಮನ್ನು ಇಡೀ ದಿನ ಫ್ರೆಶ್ ಆಗಿಡುತ್ತದೆ. ದೀರ್ಘಸಮಯದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಪ್ರೋಟಿನ್ಗಾಗಿ ಆಹಾರದಲ್ಲಿ ಬೇಯಿಸಿದ ಮೊಟ್ಟೆ, ಕಡಿಮೆ ಆಯಿಲ್ ಹಾಕಿರೋ ಆಮ್ಲೆಟ್, ಮೊಸರು, ಹೆಸರುಬೇಳೆ, ಪನೀರ್, ಬೇಳೆಕಾಳುಗಳನ್ನು ಸೇವಿಸಬಹುದು.
ಯಾವೆಲ್ಲಾ ಆಹಾರ ಸೇವಿಸಬೇಕು?
2.ಆಹಾರದಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ನಿಧಾನವಾಗಿಸುತ್ತದೆ. ಇಡೀ ದಿನ ಉಪವಾಸವಿರೋದರಿಂದ ಆಹಾರದಲ್ಲಿ ಫೈಬರ್ ಅಂಶವಿರುವಂತೆ ನೋಡಿಕೊಳ್ಳಿ. ಫೈಬರ್ಗಾಗಿ ಕ್ಯಾರಟ್, ಸವತೆಕಾಯಿ, ಬೀನ್ಸ್, ಬೆಂಡೆಕಾಯಿ, ಚಿಯಾಸೀಡ್ಸ್, ಸೋರೆಕಾಯಿ ಅಂತಹ ತರಕಾರಿಗಳನ್ನು ಸೇರಿಸಿಕೊಳ್ಳಬಹುದು.
3.ಮೂರನೇಯದಾಗಿ ಕಾರ್ಬೋಹೈಡ್ರೇಟ್. ಇದಕ್ಕಾಗಿ ಚಪಾತಿ, ರೊಟ್ಟಿ, ಬ್ರೌನ್ ರೈಸ್, ಓಟ್ಸ್ ತಿನ್ನಬಹುದು. ಆದ್ರೆ ರಿಫೈನ್ಸ್ ಕಾರ್ಬೋಹೈಡ್ರೇಟ್ ಆಹಾರ ಸೇವಿಸಬೇಡಿ. ಈ ಎಲ್ಲಾ ಆಹಾರದ ಜೊತೆ ಒಂದೆರಡು ಗೋಡಂಬಿ, ಬಾದಾಮಿ ತಿನ್ನಿ. ಆಹಾರದಲ್ಲಿ ತುಪ್ಪ, ಪಿನಟ್ ಬಟರ್ ಸಹ ಬಳಸಿ.
ಇದನ್ನೂ ಓದಿ: ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ
ಯಾವೆಲ್ಲಾ ಆಹಾರ ಸೇವಿಸಬಾರದು?
ಸೆಹ್ರಿಗೆ ಬೇಕರಿ ಆಹಾರಗಳನ್ನು ಸಂಪೂರ್ಣವಾಗಿ ಅವೈಡ್ ಮಾಡಿ. ಹಾಗೆಯೇ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿರುವ ಆಹಾರ ಮತ್ತು ಹೆಚ್ಚು ಸಕ್ಕರೆ ಮತ್ತು ಉಪ್ಪಿನಂಶಗಳಿರುವ ಆಹಾರಗಳನ್ನು ತಿನ್ನಬೇಡಿ.
ಇವುಗಳ ಜೊತೆಯಲ್ಲಿ ಇನ್ಸ್ಟಂಟ್ ಫುಡ್ ಸೇರಿದಂತೆ ಮ್ಯಾಗಿ ಅಂತಹ ಆಹಾರದಿಂದಲೂ ದೂರವಿರಿ. ಇನ್ನು ಕೋಲ್ಡ್ಡ್ರಿಂಕ್ಸ್, ಟೀ, ಕಾಫಿ ಸೇವನೆಯೂ ಬೇಡ. ಟೀ/ಕಾಫಿ ಪ್ರಿಯರು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: Ramdan 2026: ಭಾರತದಲ್ಲಿ ರಂಜಾನ್ ಆರಂಭ ಯಾವಾಗ? ಈದ್-ಉಲ್-ಫಿತರ್ ಆಚರಣೆಯ ದಿನಾಂಕ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

