Blood Cancer: ರಕ್ತದ ಕ್ಯಾನ್ಸರ್‌ನ ಈ 7 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
ರಕ್ತದ ಕ್ಯಾನ್ಸರ್ ಅಂದ್ರೆ ಬ್ಲಡ್ ಕ್ಯಾನ್ಸರ್, ಇದು ಮೂಳೆಗಳೊಳಗಿನ ಮಜ್ಜೆಯಲ್ಲಿ ಶುರುವಾಗಿ ರಕ್ತ ಕಣಗಳ ಮೇಲೆ ಪರಿಣಾಮ ಬೀರುವ ಕಾಯಿಲೆ. ಇದು ರಕ್ತ ಕಣಗಳು, ಮೂಳೆ ಮಜ್ಜೆ ಮತ್ತು ದುಗ್ಧರಸ ವ್ಯವಸ್ಥೆಯ (lymphatic system) ಉತ್ಪಾದನೆ ಹಾಗೂ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.

ಬ್ಲಡ್ ಕ್ಯಾನ್ಸರ್ ; ಈ ಏಳು ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಭಾರತದಲ್ಲಿ ಹೆಚ್ಚಾಗಿ ಕಂಡು ಬರುವ ಬ್ಲಡ್ ಕ್ಯಾನ್ಸರ್‌ಗಳು ಯಾವುವು
ಭಾರತದಲ್ಲಿ ಲ್ಯುಕೇಮಿಯಾ, ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾದಂತಹ ರಕ್ತದ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಇವು ಬೇರೆ ಕ್ಯಾನ್ಸರ್‌ಗಳಂತೆ ಹೊರಗೆ ಕಾಣುವ ಗಡ್ಡೆಗಳನ್ನು ಉಂಟುಮಾಡುವುದಿಲ್ಲ. ಬದಲಾಗಿ, ರಕ್ತ, ಮೂಳೆ ಮಜ್ಜೆ ಅಥವಾ ದುಗ್ಧರಸ ವ್ಯವಸ್ಥೆಯೊಳಗೆ ಬೆಳೆಯುತ್ತವೆ. ಹಾಗಾಗಿ ಇದರ ಲಕ್ಷಣಗಳು ಅಸ್ಪಷ್ಟವಾಗಿದ್ದು, ಸುಲಭವಾಗಿ ನಿರ್ಲಕ್ಷಕ್ಕೆ ಒಳಗಾಗುತ್ತವೆ.
ಬ್ಲಡ್ ಕ್ಯಾನ್ಸರ್ ಲಕ್ಷಣಗಳು
ಆಯಾಸ, ಪದೇ ಪದೇ ಸಣ್ಣ ಜ್ವರ ಬಂದರೆ ನಿರ್ಲಕ್ಷಿಸಬೇಡಿ
ಬೇಗ ಪತ್ತೆಹಚ್ಚಲು ಇರುವ ದೊಡ್ಡ ಅಡ್ಡಿಯೇನು?
ಬೇಗ ಪತ್ತೆಹಚ್ಚಲು ಇರುವ ದೊಡ್ಡ ಅಡ್ಡಿಯೆಂದರೆ, ಇದರ ಲಕ್ಷಣಗಳು ಬೇರೆ ರೋಗಗಳ ಲಕ್ಷಣಗಳೊಂದಿಗೆ ಹೋಲುತ್ತವೆ. ನಿರಂತರ ಜ್ವರ, ತೂಕ ಇಳಿಕೆ, ರಾತ್ರಿ ಬೆವರುವಿಕೆ ಅಥವಾ ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆಯನ್ನು ಆರಂಭದಲ್ಲಿ ಕ್ಷಯ, ವೈರಲ್ ಸೋಂಕು ಅಥವಾ ದೀರ್ಘಕಾಲದ ಉರಿಯೂತ ಎಂದು ತಪ್ಪಾಗಿ ಭಾವಿಸಬಹುದು.
ರಾತ್ರಿಯಲ್ಲಿ ಅತಿಯಾಗಿ ಬೆವರುವುದು ಕೂಡ ರಕ್ತದ ಕ್ಯಾನ್ಸರ್‌ನ ಒಂದು ಲಕ್ಷಣ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಜ್ವರ ಬರುವುದು ಮತ್ತು ರಾತ್ರಿ ಬೆವರುವುದು ಹಾಡ್ಗ್‌ಕಿನ್ ಲಿಂಫೋಮಾ ಮತ್ತು ನಾನ್-ಹಾಡ್ಗ್‌ಕಿನ್ ಲಿಂಫೋಮಾದಲ್ಲಿ ಅಪಾಯಕಾರಿ. ಇದು ಲ್ಯುಕೇಮಿಯಾದಲ್ಲೂ ಕಾಣಿಸಿಕೊಳ್ಳಬಹುದು.
ಲಿಂಫೋಮಾದ ಆರಂಭಿಕ ಲಕ್ಷಣ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

