ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ
ಮದುವೆ ನಡೆಯಬೇಕಾದ್ರೆ ಕನಿಷ್ಠ ಅಂದ್ರೂ 7 ರಿಂದ 8 ಲಕ್ಷ ರೂಪಾಯಿ ಬೇಕಾಗುತ್ತದೆ. ಆದ್ರೆ ಸರ್ಕಾರದ ಯೋಜನೆ ಬಗ್ಗೆ ಸುಮಾರು ಜನರಿಗೆ ಗೊತ್ತಿಲ್ಲ. ಈ ಯೋಜನೆಯನ್ನು 2013 ರಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ್ದು, ಇಂದಿಗೂ ಚಾಲ್ತಿಯಲ್ಲಿದೆ.

ಮದುವೆಯಾದ್ರೆ ಸಿಗುತ್ತೆ ಹಣ
ದೇಶದಲ್ಲಿ ಪ್ರತಿದಿನ ಲಕ್ಷಾಂತರ ಮದುವೆಗಳು ನಡೆಯುತ್ತಿರುತ್ತವೆ. ದಿನಾಂಕ ನಿಗದಿಯಾಗುತ್ತಿದ್ದಂತೆ ಕಲ್ಯಾಣಮಂಟಪ ಬುಕ್ಕಿಂಗ್ ಸೇರಿದಂತೆ ಹಲವು ಕೆಲಸಗಳು ಆರಂಭವಾಗುತ್ತವೆ. ಇಂದು ಮದುವೆ ನಡೆಯಬೇಕಾದ್ರೆ ಕನಿಷ್ಠ ಅಂದ್ರೂ 7 ರಿಂದ 8 ಲಕ್ಷ ರೂಪಾಯಿ ಬೇಕಾಗುತ್ತದೆ. ಆದ್ರೆ ಮದುವೆಯಾಗುವ ಜೋಡಿಗೆ 2.5 ಲಕ್ಷ ರೂಪಾಯಿ ನೀಡುತ್ತದೆ. ಯೋಜನೆ ಬಗ್ಗೆ ಸುಮಾರು ಜನರಿಗೆ ಗೊತ್ತಿಲ್ಲ. ಈ ಯೋಜನೆಯನ್ನು 2013 ರಲ್ಲಿ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ್ದು, ಇಂದಿಗೂ ಚಾಲ್ತಿಯಲ್ಲಿದೆ.
ಏನಿದು 2.5 ಲಕ್ಷ ರೂಪಾಯಿ ಯೋಜನೆ?
ಈ ಯೋಜನೆಯನ್ನು Dr. Ambedkar Scheme for Social Integration through Inter-Caste Marriages ಎಂದು ಕರೆಯಲಾಗುತ್ತದೆ. ಡಾ. ಅಂಬೇಡ್ಕರ್ ಫೌಂಡೇಶನ್ ಯೋಜನೆ ನಡೆಸುತ್ತಿದ್ದು, ದಲಿತ ಸಮುದಾಯಕ್ಕೆ ಸೇರದ ಯುವಕ ಅಥವಾ ಮಹಿಳೆ ದಲಿತ ಸಮುದಾಯದಿಂದ ಯಾರನ್ನಾದರೂ ಮದುವೆಯಾದರೆ, ಆ ದಂಪತಿಗೆ ₹ 2.5 ಲಕ್ಷ ಆರ್ಥಿಕ ನೆರವು ಸಿಗುತ್ತದೆ.
ಅರ್ಹತೆ
ಈ ಯೋಜನೆಯ ಲಾಭ ಪಡೆದುಕೊಳ್ಳಬೇಕಾದ್ರೆ ಒಬ್ಬ ಸಂಗಾತಿ ದಲಿತ ಸಮುದಾಯಕ್ಕೆ ಸೇರಿರಬೇಕು. ಜೋಡಿ ತಮ್ಮ ಮದುವೆಯನ್ನು ಹಿಂದೂ ವಿವಾಹ ಕಾಯ್ದೆ 1955 ರ ಅಡಿಯಲ್ಲಿ ನೋಂದಾಯಿಸಬೇಕು. ಇಬ್ಬರಿಗೂ ಇದು ಮೊದಲ ಮದುವೆಯಾಗಿರಬೇಕು. ಮದುವೆಯಾದ ಒಂದು ವರ್ಷದೊಳಗೆ ಡಾ. ಅಂಬೇಡ್ಕರ್ ಪ್ರತಿಷ್ಠಾನಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಹಣ ಸಿಗೋದು ಹೇಗೆ?
ಮದುವೆಯಾಗಿರುವ ಜೋಡಿ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಈಗಾಗಲೇ ಆರ್ಥಿಕ ನೆರವು ಪಡೆದಿದ್ದರೆ ಮೊತ್ತವನ್ನು 2.5 ಲಕ್ಷದಿಂದ 1.5 ಲಕ್ಷಕ್ಕೆ ಕಡಿತಗೊಳಿಸಲಾಗುತ್ತದೆ. ದಂಪತಿಯ ಜಂಟಿ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಮೊತ್ತದಲ್ಲಿ 1 ಲಕ್ಷ ರೂ. ಹಣವನ್ನು ಎಫ್‌ಡಿ ಮಾಡಲಾಗುತ್ತದೆ. 3 ವರ್ಷದ ನಂತರ ಈ ಹಣವನ್ನು ಬಡ್ಡಿ ಸಮೇತ ಪಡೆದುಕೊಳ್ಳುತ್ತಾರೆ.
ಅರ್ಜಿ ಸಲ್ಲಿಕೆ
ನೀವು ಅಂತರ್ಜಾತಿ ವಿವಾಹವಾಗಿದ್ದರೆ , ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು . ಅರ್ಜಿದಾರರು ತಮ್ಮ ಅರ್ಜಿಯನ್ನು ತಮ್ಮ ಸಂಸದ ಅಥವಾ ಶಾಸಕರ ಶಿಫಾರಸಿನೊಂದಿಗೆ ಡಾ. ಅಂಬೇಡ್ಕರ್ ಪ್ರತಿಷ್ಠಾನಕ್ಕೆ ಸಲ್ಲಿಸಬೇಕು. ಆಸಕ್ತ ಅರ್ಜಿದಾರರು ಜಿಲ್ಲಾಡಳಿತ ಅಥವಾ ರಾಜ್ಯ ಸರ್ಕಾರದ ಮೂಲಕವೂ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯ ಬಗ್ಗೆ ಎಲ್ಲಾ ವಿವರಗಳನ್ನು ambedkarfoundation.nic.in ನಲ್ಲಿಯೂ ಕಾಣಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
