- Home
- News
- India News
- ಸುಷ್ಮಾ ಸ್ವರಾಜ್‌ರಿಂದ ಬರೀ 1 ರೂಪಾಯಿ ಶುಲ್ಕ ಕೇಳಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆಗೆ 68ನೇ ವರ್ಷದಲ್ಲಿ 3ನೇ ಮದುವೆ!
ಸುಷ್ಮಾ ಸ್ವರಾಜ್‌ರಿಂದ ಬರೀ 1 ರೂಪಾಯಿ ಶುಲ್ಕ ಕೇಳಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆಗೆ 68ನೇ ವರ್ಷದಲ್ಲಿ 3ನೇ ಮದುವೆ!
ಕುಲಭೂಷಣ್ ಜಾಧವ್ ಕೇಸ್‌ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಾಡುವ ಸಲುವಾಗಿ ಕೇವಲ 1 ರೂಪಾಯಿ ಚಾರ್ಜ್ ಮಾಡಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ತಮ್ಮ 68ನೇ ವರ್ಷದಲ್ಲಿ ಮೂರನೇ ಮದುವೆಯಾಗಿದ್ದಾರೆ.

ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ತಮ್ಮ 68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ಮದುವೆಯ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹರೀಶ್ ಸಾಳ್ವೆ ಇದಕ್ಕೂ ಮುನ್ನ ಮೀನಾಕ್ಷಿ ಹಾಗೂ 2020ರಲ್ಲಿ ಕ್ಯಾರೋಲಿನಾ ಬ್ರೊಸಾರ್ಡ್‌ರನ್ನು ವಿವಾಹವಾಗಿದ್ದರು,
ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಿನಾ ಹೆಸರಿನ ಮಹಿಳೆಯೊಂದಿಗೆ ಮೂರನೇ ಬಾರಿ ಮದುವೆಯಾಗಿದ್ದಾರೆ. ಇದರ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.
ಮದುವೆ ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಭಾರತದಿಂದ ಪಲಾಯನ ಮಾಡಿ ಲಂಡನ್‌ನಲ್ಲಿ ನೆಲೆಯಾಗಿರುವ ಲಲಿತ್ ಮೋದಿ, ಉಜ್ವಲ್ ರಾವುತ್ ಕೂಡ ಉಪಸ್ಥಿತರಿದ್ದರು.
ಮೊದಲ ಪತ್ನಿ ಮೀನಾಕ್ಷಿ ಜೊತೆ ಮೂರು ದಶಕಗಳ ಕಾಲ ಸಂಸಾರ ಮಾಡಿದ್ದ ಹರೀಶ್ ಸಾಳ್ವೆ, 2020ರ ಜೂನ್‌ನಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.
ಮೊದಲ ಪತ್ನಿ ಮೀನಾಕ್ಷಿ ಅವರೊಂದಿಗೆ ಇಬ್ಬರು ಹೆಣ್ಣುಮಕ್ಕಳನ್ನು ಹರೀಶ್ ಸಾಳ್ವೆ ಹೊಂದಿದ್ದಾರೆ. ಸಾಕ್ಷಿ ಹಾಗೂ ಸಾನಿಯಾ ಹೆಸರಿನ ಇಬ್ಬರು ಹೆಣ್ಣುಮಕ್ಕಳು ಇವರಿಗಿದ್ದಾರೆ.
ಅದಾದ ಬಳಿಕ 2020ರಲ್ಲಿಯೇ ಕ್ಯಾರೋಲಿನಾ ಬ್ರೋಸ್‌ವಾರ್ಡ್‌ಅನ್ನು ಹರೀಶ್ ಸಾಳ್ವೆ ವಿವಾಹವಾಗಿದ್ದರು. ಆದರೆ, ಈ ವಿವಾಹ ಹೆಚ್ಚು ದಿನ ಉಳಿಯಲಿಲ್ಲ.
ಗೂಡಚಾರದ ಆರೋಪದಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್‌ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ಕುಲಭೂಷಣ್ ಜಾಧವ್ ಕೇಸ್‌ಅನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರವಾಗಿ ವಾದ ಮಾಡಿದ್ದರು,
ಈ ಕೇಸ್‌ನಲ್ಲಿ ವಾದ ಮಾಡಿದ ಕಾರಣಕ್ಕೆ ಅಂದಿನ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್, ಹರೀಶ್ ಸಾಳ್ವೆ ಅವರಿಗೆ ಶುಲ್ಕ ನೀಡಲು ಬಂದಾಗ ಭಾರತ ಸರ್ಕಾರದಿಂದ ಕೇವಲ 1 ರೂಪಾಯಿ ಶುಲ್ಕವನ್ನು ಇವರು ಪಡೆದಿದ್ದರು.
ಅವರ ಈ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗಿದ್ದವು. ಅಂದಿನಿಂದ ಹರೀಶ್ ಸಾಳ್ವೆ ಹೆಸರು ಸಾಕಷ್ಟು ಜನಪ್ರಿಯವಾಗಿದೆ.
ಟಾಟಾ ಗ್ರೂಪ್, ಐಟಿಸಿ, ರಿಲಯನ್ಸ್ ಸೇರಿದಂತೆ ಇನ್ನೂ ಹಲವು ದೊಡ್ಡ ದೊಡ್ಡ ಕ್ಲೈಂಟ್ಸ್‌ಗಳನ್ನು ಹೊಂದಿರುವ ಹರೀಶ್ ಸಾಳ್ವೆಗೆ 2015ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ