ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, ಟ್ರಯಾಂಗಲ್ ಲವ್ ತಂದ ಆಪತ್ತು
ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, 19ರ ಯುವತಿ ಶಿವಾಜಿ ನಗರದಲ್ಲಿ ಹಾಡ ಹಗಲೇ ಬಲಿಯಾಗಿದ್ದಾಳೆ. ಇದರ ಹಿಂದೆ ಟ್ರಯಾಂಗಲ್ ಲವ್ ಸ್ಟೋರಿ ಕತೆಯೊಂದು ಅನಾವರಣಗೊಂಡಿದೆ.

19ರ ಯುವತಿ ಪ್ರೀತಿಗೆ ಬಲಿ
ಪ್ರೀತ್ಸೆ ಪ್ರೀತ್ಸೆ ಅಂತಾ ಹಿಂದೆ ಬಿದ್ದಿದ್ದ. ಆತನ ಪ್ರೀತಿಗೆ ಮನಸೋತು ಮನಸ್ಸು, ಹೃದಯ ಎಲ್ಲವನ್ನೂ ನೀಡಿದ್ದಳು. ಈ 19ರ ಯುವತಿಗೆ ತನ್ನ ಪ್ರೀತಿಸುತ್ತಿರುವ ಬಾಯ್‌ಫ್ರೆಂಡ್‌ಗೆ ಮತ್ತೊಬ್ಬಳ ಜೊತೆ ರಿಲೇಶನ್‌ಶಿಪ್ ಇದೆ ಅನ್ನೋದೇ ಗೊತ್ತಿಲ್ಲ. ಈ ಲವ್ ಸ್ಟೋರಿ ಮೊದಲ ಪ್ರೇಯಸಿಗೆ ತಿಳಿಯುತ್ತಿದ್ದಂತೆ ಪರಿಸ್ಥಿತಿ ಗಂಭೀರವಾಗಿದೆ. ಬಾಯ್‌ಫ್ರೆಂಡ್ ಹಾಗೂ ಮೊದಲ ಪ್ರೇಯಸಿ ಇಬ್ಬರು ಸೇರಿ 19ರ ಯುವತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಮುಂಬೈನಲ್ಲ ನಡೆದಿದೆ.
ಮುಂಬೈನ ಗೋವಂಡಿಯ ಶಿವಾಜಿ ನಗರದಲ್ಲಿ 19 ವರ್ಷದ ಯುವತಿ ಶಿಫಾಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಫೆಬ್ರವರಿ 10ರ ಮಧ್ಯಾಹ್ನ ಯುವತಿ ತನ್ನ ಮನೆಯ ಸಮೀಪದಲ್ಲಿದ್ದಾಗ ಈ ಘಟನೆ ನಡೆದಿದೆ. ಗುಂಡೇಟು ತಗುಲುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಬದುಕುಳಿಯಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯ 23 ವರ್ಷದ ಬಾಯ್‌ಫ್ರೆಂಡ್ ಮತ್ತು ಆತನೊಂದಿಗೆ ಸಂಪರ್ಕದಲ್ಲಿದ್ದ 25 ವರ್ಷದ ಇನ್ನೊಬ್ಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಕೆನ್ನೆ, ಕುತ್ತಿಗೆಗೆ ತಗುಲಿದ ಗುಂಡು
ಮಧ್ಯಾಹ್ನ ನಡೆದ ಘಟನೆ
ಲವ್ ಟ್ರಯಾಂಗಲ್
ಪೊಲೀಸರು ಈ ಪ್ರಕರಣವನ್ನು ಲವ್ ಟ್ರಯಾಂಗಲ್ ದೃಷ್ಟಿಕೋನದಿಂದ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಮೊದಲ ಪ್ರೇಯಸಿ ಇವರ ಲವ್ ಸ್ಟೋರಿ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದ್ದಾಳೆ. ಈ ವೇಳೆ ಬಾಯ್‌ಫ್ರೆಂಡ್ ಶಿಫಾ ತನ್ನ ಬೆನ್ನ ಹಿಂದೆ ಬಿದ್ದಿದ್ದಾಳೆ. ಆಕೆಗೆ ಬುದ್ಧಿ ಹೇಳಿದರೂ ಕೇಳುತ್ತಿಲ್ಲ ಎಂದೆಲ್ಲಾ ಕತೆ ಕಟ್ಟಿದ್ದಾನೆ. ಆಕ್ರೋಶಗೊಂಡ ಮೊದಲ ಪ್ರೇಯಸಿ ಖೆಡ್ಡಾ ತೋಡಿದ್ದಾಳೆ. ಆಕೆಯ ಮುಗಿಸಲು ಸೂಚಿಸಿದ್ದಾಳೆ. ಮೊದಲ ಪ್ರೇಯಸಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಬಾಯ್‌ಫ್ರೆಂಡ್ ಪ್ಲಾನ್ ಜಾರಿಗೊಳಿಸಲು ಮುಂದಾಗಿದ್ದಾನೆ. ಇದರಂತೆ ಇಬ್ಬರು ಸೇರಿ ಶಿಫಾಳನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿ, ಸಂತ್ರಸ್ತೆಯ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದು, ಆಕೆಯ ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಆರೋಪಿಗಳ ವಿಚಾರಣೆ
ಮೃತ ಶಿಫಾ ಮತ್ತು ಆರೋಪಿಗಳ ನಡುವೆ ಬಹಳ ದಿನಗಳಿಂದ ಮನಸ್ತಾಪವಿತ್ತು. ಇದೇ ಮುಂದೆ ಕೊಲೆ ಸಂಚಿಗೆ ಕಾರಣವಾಯಿತು. ಪೊಲೀಸರ ಪ್ರಕಾರ, ಮಹಿಳಾ ಆರೋಪಿ ತನ್ನ ಪುರುಷ ಸಂಗಾತಿಯೊಂದಿಗೆ ಸೇರಿ ಈ ಕೃತ್ಯಕ್ಕೆ ಯೋಜನೆ ರೂಪಿಸಿದ್ದಾಳೆ. ವಲಯ ಡಿಸಿಪಿ ಸಮೀರ್ ಶೇಖ್ ಅವರು ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಕೊಲೆಗೆ ಬಳಸಿದ ಆಯುಧದ ಮೂಲ, ಡಿಜಿಟಲ್ ಸಾಕ್ಷ್ಯ, ಕಾಲ್ ರೆಕಾರ್ಡ್ ಮತ್ತು ಲೊಕೇಶನ್ ಡೇಟಾವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, 19 ವರ್ಷದ ಮಗಳನ್ನು ಕಳೆದುಕೊಂಡ ಕುಟುಂಬ ತೀವ್ರ ದುಃಖದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

