ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಾತ್ರಿಯ ಭೋಜನಕೂಟದ ವೇಳೆ ಮೋದಿ ಈ ಉಡುಗೊರೆ ನೀಡಿದ್ದಾರೆ. ಮೋದಿ ಗೀತೆಯ ರಾಯಭಾರಿ ಎಂದು ಹಲವರು ಪ್ರಶಂಸಿದ್ದಾರೆ. ಇದೇ ವೇಳೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಔತಣಕೂಟದಲ್ಲಿ ಮೋದಿಗೆ ಉಡುಗೊರೆ
ಎರಡು ದಿನಗಳ ಭೇಟಿಗಾಗಿ ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಆಗಮಸಿದ್ದಾರೆ. ಇಂದು ಪ್ರಧಾನಿ ಮೋದಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ನಿನ್ನೆ (ಡಿ.04) ಸಂಜೆ ಭಾರತಕ್ಕೆ ಬಂದಿಳಿದ ಪುಟಿನ್‌ಗೆ ರಾತ್ರಿ ಪ್ರಧಾನಿ ನಿವಾಸದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಈ ವೇಳೆ ಮೋದಿ ನೀಡಿದ ಉಡುಗೊರೆ ಇದೀಗ ಭಾರಿ ಚರ್ಚೆಯಾಗುತ್ತಿದೆ.
ರಷ್ಯಾ ಅಧ್ಯಕ್ಷ ಪುಟಿನ್‌ಗೆ ಭಗವದ್ಗೀತೆ ಉಡುಗೊರೆ
ನಿನ್ನ ರಾತ್ರಿ ನಡೆದ ಖಾಸಗಿ ಭೋಜನಕೂಟದ ವೇಳೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್‌ಗೆ ಭಗವದ್ಗೀತೆ ಉಡುಗೊರೆ ನೀಡಿದ್ದಾರೆ. ರಷ್ಯಾ ಭಾಷೆಗೆ ತರ್ಜುಮೆ ಮಾಡಿರುವ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉಡುಗೊರೆಗೆ ಭಾರಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ, ಪುಟಿನ್‌ಗೆ ನೀಡಿದ ಭಗವದ್ಗೀತೆ ಉಡುಗೊರಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೋದಿ ಗೀತೆಯ ರಾಯಬಾರಿ ಎಂದು ಹಲವರು ಕರೆದಿದ್ದಾರೆ. ಮೋದಿ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಪಸರಿಸುತ್ತಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಶುರುವಾಗಿದೆ.
ಮೋದಿ-ಪುಟಿನ್ ಭೇಟಿ
ಇಂದು ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಹೈದರಾಬಾದ್ ಹೌಸ್ ನಲ್ಲಿ ಭೇಟಿಯಾಗಿದ್ದಾರೆ. ಈ ದ್ವಿಪಕ್ಷೀಯ ಮಾತುಕತೆ ಬಳಿಕ ಮಧ್ಯಾಹ್ನ 1:50 ಕ್ಕೆ ಜಂಟಿ ಸುದ್ದಿಗೋಷ್ಟಿ ನಡೆಸಲಿದ್ದಾರೆ. ಉಭಯ ನಾಯಕರು ಮಾತುಕತೆ ಹಾಗೂ ಒಪ್ಪಂದ ಕುರಿತು ಮಹತ್ವದ ಘೋಷಣೆ ಮಾಡಲಿದ್ದಾರೆ.
ಇಂಡೋ-ರಷ್ಯನ್ ಬಿಜಿನೆಸ್ ಫೋರಂ ವೇದಿಕೆಯಲ್ಲಿ ಭಾಷಣ
ಉಭಯ ನಾಯಕರ ಮಾತುಕತೆ ಬಳಿಕ 3:40ಕ್ಕೆ ಇಂಡೋ-ರಷ್ಯನ್ ಬಿಜಿನೆಸ್ ಫೋರಂ ವೇದಿಕೆ ಯಲ್ಲಿ ಉಭಯ ನಾಯಕರು ಭಾಷಣ ಮಾಡಲಿದ್ದಾರೆ. ಈಗಾಗಲೇ ಭಾರತದಲ್ಲಿರುವ ರಷ್ಯನ್ ಹಾಗೂ ಭಾರತೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾತ್ರಿ 7;00 ಕ್ಕೆ ಭಾರತದ ರಾಷ್ಟ್ರಪತಿಗಳ ಜೊತೆ ಪುಟಿನ್ ಸಭೆ ನಡೆಸಲಿದ್ದಾರೆ.
ಇಂಡೋ-ರಷ್ಯನ್ ಬಿಜಿನೆಸ್ ಫೋರಂ ವೇದಿಕೆಯಲ್ಲಿ ಭಾಷಣ
ರಾತ್ರಿ 9 ಗಂಟೆಗೆ ಪುಟಿನ್ ವಾಪಾಸ್
ರಾಷ್ಟ್ರಪತಿಗಳ ಭೇಟಿ ಬಳಿಕ ವ್ಲಾದಿಮಿರ್ ಪುಟಿನ್ ರಾತ್ರಿಯ ಭೋಜನ ಆಯೋಜಿಸಲಾಗಿದೆ. ಭೋಜನದ ಬಳಿಕ ರಾತ್ರಿ 9 ಗಂಟೆಗೆ ಪುಟಿನ್ ದೆಹಲಿಯಿಂದ ರಷ್ಯಾದ ಮಾಸ್ಕೋಗೆ ಪ್ರಯಾಣ ಬೆಳೆಸಲಿದ್ದಾರೆ.
ರಾತ್ರಿ 9 ಗಂಟೆಗೆ ಪುಟಿನ್ ವಾಪಾಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

