- Home
- News
- India News
- ಜಾನ್ ಸೀನಾ ವಿರುದ್ಧ ಸೆಣಸಾಡಿದ್ದ WWE ಸ್ಟಾರ್ ಈಗ ಪ್ರೇಮಾನಂದ್ ಜಿ ಬಳಿ ನೆಲ ಗುಡಿಸುತ್ತಿರುವುದೇಕೆ?
ಜಾನ್ ಸೀನಾ ವಿರುದ್ಧ ಸೆಣಸಾಡಿದ್ದ WWE ಸ್ಟಾರ್ ಈಗ ಪ್ರೇಮಾನಂದ್ ಜಿ ಬಳಿ ನೆಲ ಗುಡಿಸುತ್ತಿರುವುದೇಕೆ?
ಜಾನ್ ಸೀನಾ ವಿರುದ್ಧ ಸೆಣಸಾಡಿದ್ದ WWE ಸ್ಟಾರ್ ಈಗ ಪ್ರೇಮಾನಂದ್ ಜಿ ಬಳಿ ನೆಲ ಗುಡಿಸುತ್ತಿರುವುದೇಕೆ? ಅಮೇರಿಕನ್ ಬೇಸ್ ಬಾಲ್ ತಂಡದಲ್ಲಿ ಆಡಿದ್ದ ಈ ಸ್ಟಾರ್, ಐಷರಾಮಿ ಬದುಕಿನಿಂದ ಆಶ್ರಮದಲ್ಲಿ ಸನ್ಯಾಸಿಯಾಗಿ ಬದುಕುತ್ತಿರವುದೇಕೆ?

ರಸ್ಲಿಂಗ್ ರಿಂಗ್‌ನಿಂದ ಆಶ್ರಮದತ್ತ
ಜಾನ್ ಸೀನಾ ವಿರುದ್ದ, ದಿ ಗ್ರೇಟ್ ಖಲಿ ಜೊತೆ, ಹಲವು WWE ಸೂಪರ್ ಸ್ಟಾರ್ ಜೊತೆ ಹೋರಾಟ ಮಾಡಿದ್ದ ರಿಂಕ್ ರಜಪೂತ್ ಸಿಂಗ್ ಇದೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಅಮೆರಿಕ ಬೇಸ್ ಬಾಲ್ ತಂಡವನ್ನೂ ಪ್ರತಿನಿಧಿಸಿದ ಈ ಭಾರತೀಯ ಹೆಚ್ಚು ಜನಪ್ರಿಯನಾಗಿದ್ದು WWE ರಸ್ಲಿಂಗ್ ಮೂಲಕ. ಆದರೆ ಇದೀಗ ರಿಂಗ್ ರಜಪೂತ್ ಸಿಂಗ್ ಪ್ರಸಿದ್ಧ ಪ್ರೇಮಾನಂದ್ ಜಿ ಆಶ್ರಮದಲ್ಲಿ ನೆಲ ಒರೆಸುತ್ತಾ, ಭಕ್ತರ ಸೇವೆ ಮಾಡುತ್ತಿದ್ದಾರೆ.
ಆಶ್ರಮ ಗುಡಿಸುತ್ತಾರೆ ರಿಂಕೂ ಸಿಂಗ್
ರಸ್ಲಿಂಗ್ ರಿಂಗ್ ಮೂಲಕ ದೇಶಾದ್ಯಂತ ಜನಪ್ರಿಯವಾಗಿರುವ ರಿಂಕೂ ಸಿಂಗ್ ಇದೀಗ ಪ್ರೇಮಾನಂದ್ ಜಿ ಮಹಾರಾಜ್ ಆಶ್ರಮದಲ್ಲಿ ನೆಲ ಗುಡಿಸುತ್ತಾರೆ, ಒರೆಸುತ್ತಾರೆ. ಭಕ್ತರಿಗೆ ಪ್ರಸಾದ, ಆಹಾರ ವಿತರಿಸುತ್ತಾರೆ. ಸ್ವಾಮೀಜಿ ಹೇಳಿದ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ರಿಂಕೂ ಸಿಂಗ್ ಫೋಟೋ, ವಿಡಿಯೋಗಳು ಬಹಿರಂಗವಾಗಿದ್ದು ಹಲವು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಿಂಗ್ ಸಿಂಗ್‌ನಲ್ಲಿಈ ಬದಲಾವಣೆ ಯಾಕೆ?
ರಸ್ಲಿಂಗ್, ಬೇಸ್ ಬಾಲ್ ಸೇರಿದಂತೆ ಹಲವು ಕ್ರೀಡೆಯಲ್ಲಿ ಸಕ್ರಿಯವಾಗಿದ್ದ ರಿಂಕೂ ಸಿಂಗ್ ಇದೀಗ ಆಶ್ರಮದಲ್ಲಿ ನೆಲ ಒರೆಸುವುದು, ಕೆಲಸ ಮಾಡುತ್ತಿರುವುದೇಕೆ ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ. ರಿಂಕು ಸಿಂಗ್ ಆಶ್ರಮದಲ್ಲಿ ಸೇವೆಯ ರೂಪದಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಮನಶಾಂತಿ, ನೆಮ್ಮದಿ ಹಾಗೂ ಗುರಿಯತ್ತ ಮನಸ್ಸು ಕೇಂದ್ರಿಕರಿಸಲು ರಿಂಕು ಈ ಎಲ್ಲಾ ಸೇವೆ ಮಾಡುತ್ತಿದ್ದಾರೆ.
ರಿಂಕು ಸಿಂಗ್ ಹೇಳುತ್ತಿರುವುದೇನು?
ಆಶ್ರಮದಲ್ಲಿ ಸೇವೆ ಮಾಡಲು ಆರಂಭಿಸಿದ ಬಳಿಕ ಶಿಸ್ತು ಮೈಗೂಡಿಸಿಕೊಂಡಿದ್ದೇನೆ. ಸರಳ ಜೀವನಕ್ಕೆ ಒಗ್ಗಿಕೊಂಡಿದ್ದೇನೆ. ನಂಬಿಕೆ, ಧರ್ಮದ ಕುರಿತು ಅಪಾರ ಗೌರವ ಭಕ್ತಿ ಮೂಡಿದೆ, ಮನಸ್ಸು ಶಾಂತವಾಗಿದೆ. ಉಲ್ಲಾಸದಿಂದ ಕೂಡಿದೆ ಎಂದಿದ್ದಾರೆ. ಪ್ರೇಮಾನಂದ ಜಿ ಮಹಾರಾಜರ ಜೊತೆಗೂ ಮಾತನಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ರಿಂಕು ಸಿಂಗ್ ಹೇಳುತ್ತಿರುವುದೇನು?
WWE ರಿಂಗ್‌ನಲ್ಲಿ ವೀರ್ ಮಾಹನ್ ಆಗಿ ಮಿಂಚಿದ್ದ ರಿಂಕು
2018ರಲ್ಲಿ ರಿಂಕು ಸಿಂಗ್ WWE ರಸ್ಲಿಂಗ್ ಸೇರಿಕೊಂಡರು. ದಿ ಗ್ರೇಟ್ ಖಲಿ ಬಳಿಕ WWE ರಿಂಗ್‌ನಲ್ಲಿ ಹೆಸರು ಮಾಡಿದ ಪ್ರತಿಭೆ ರಿಂಕು ಸಿಂಗ್. ಶಿವ ಭಕ್ತನಾಗಿರುವ ರಿಂಕು ಸಿಂಗ್ WWE ನಲ್ಲಿ ಜಾನ್ ಸೀನಾ ಸೇರಿದಂತೆ ಹಲವು ಸ್ಟಾರ್ ಜೊತೆ ಸೆಣಸಾಡಿದ್ದಾರೆ. ರಸ್ಲಿಂಗ್‌ನಲ್ಲಿ ವೀರ್ ಮಹಾನ್ ಅತ್ಯಂತ ಶಕ್ತಿಯಾಲಿ ರಸ್ಲರ್ ಆಗಿ ಮಿಂಚಿದ್ದಾರೆ.
WWE ರಿಂಗ್‌ನಲ್ಲಿ ವೀರ್ ಮಾಹನ್ ಆಗಿ ಮಿಂಚಿದ್ದ ರಿಂಕು
2008ರಲ್ಲಿ ಮಿಲಿಯನ್ ಡಾಲರ್ ಆರ್ಮ್ ಗೆದ್ದ ರಿಂಕು
ಉತ್ತರ ಪ್ರದೇಶದ ಗೋಪಿಗಂಜ್‌ನಲ್ಲಿ ಹುಟ್ಟಿದ ರಿಂಕು ಸಿಂಗ್, ತಮ್ಮ ಪ್ರತಿಭೆ ಮೂಲಕ ಬೆಳೆದು ಬಂದಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿದ ರಿಂಕು ಸಿಂಗ್, ಕ್ರೀಡೆ ಮೂಲಕ ಹಲವು ಅವಕಾಶಗಳನ್ನು ಸದುಪಯೋಗ ಪಡಿಸಿದ್ದರು. 2008ರಲ್ಲಿ ಅಮೆರಿಕದಲ್ಲಿ 87 ಕಿ.ಮಿ ವೇಗದಲ್ಲಿ ಬೇಸ್ ಬಾಲ್ ಎಸೆದು ಮಿಲಿಯನ್ ಡಾಲರ್ ಆರ್ಮಿ ಪ್ರಶಸ್ತಿ ಗೆದ್ದಿದ್ದು ಮಾತ್ರವಲ್ಲ, ಅಮೆರಿಕ ಕಂಡದಲ್ಲಿ ಭಾರತೀಯನೊಬ್ಬ ಬೇಸ್ ಬಾಲ್ ಆಡಿದ್ದರು.
2008ರಲ್ಲಿ ಮಿಲಿಯನ್ ಡಾಲರ್ ಆರ್ಮ್ ಗೆದ್ದ ರಿಂಕು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

