- Home
- News
- India News
- ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಜಪಾನ್ ಸೇರಿ ಹಲವು ದೇಶಕ್ಕಿಂತ ಕಡಿಮೆ
ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಜಪಾನ್ ಸೇರಿ ಹಲವು ದೇಶಕ್ಕಿಂತ ಕಡಿಮೆ
ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಹೌದು 2 ರೂಪಾಯಿ 19 ಪೈಸೆ ಮಾತ್ರ. ಜಪಾನ್, ಚೀನಾ, ಫ್ರಾನ್ಸ್ ಸೇರಿದಂತೆ ಹಲವು ದೇಶಕ್ಲೆಕಿಂತ ಅತೀ ಕಡಿಮೆ. ಈ ಕುರಿತು ಸಚಿವರು ಉತ್ತರಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಕ್ರಾಂತಿ
ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ಹೊಸ ರೈಲುಗಳು ಸೇವೆ ನೀಡುತ್ತಿದೆ. ಈ ಮೂಲಕ ಭಾರತದ ರೈಲು ಸಂಪರ್ಕ ಸೇವೆ ಮೇಲ್ದರ್ಜೆಗೆ ಏರಿಸಲಾಗಿದೆ. ದೇಶದ ಮೂಲೆ ಮೂಲೆಗೆ ವಂದೇ ಭಾರತ್ ಸೇರಿದಂತೆ ಹಲವು ರೈಲುಗಳು ಸೇವೆ ನೀಡುತ್ತಿದೆ. ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ರೈಲಿಗೂ ಚಾಲನೆ ಸಿಕ್ಕಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿ ಎಸಿ ಕೋಚ್ ಟಿಕೆಟ್ ದರ ಕುರಿತು ರೈಲ್ವೇ ಸಚಿವ ಅಶ್ವಿನಿ ವೈಷ್ಣನ್ ಲೋಕಸಭೆಗೆ ಉತ್ತರಿಸಿದ್ದಾರೆ.
ಅತೀ ಕಡಿಮೆ ದರ ಕೇವಲ 2.19 ರೂಪಾಯಿ ಮಾತ್ರ
ವಂದೇ ಭಾರತ್ ರೈಲಿನಲ್ಲಿ ಎಸಿ ಚೇರ್ ಟಿಕೆಟ್ ದರ ಕೇವಲ 2.19 ರೂಪಾಯಿ ಮಾತ್ರ ಪ್ರತಿ ಕಿಲೋಮೀಟರ್‌ಗೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 300 ರಿಂದ 400 ಕಿಲೋಮೀಟರ್ ಪ್ರಯಾಣಿಸುವ ಪ್ರಯಾಣಿಕ ವಂದೇ ಭಾರತ್ ಎಸಿ ಚೇರ್ ರೈಲು ಟಿಕೆಟ್ ದರ ಪ್ರತಿ ಕಿಲೋಮೀಟರ್‌ಗೆ ಅತೀ ಕನಿಷ್ಠ 2.19 ರೂಪಾಯಿ ಮಾತ್ರ ನೀಡುತ್ತಾನೆ ಎಂದಿದ್ದಾರೆ.
ಪ್ರಮುಖ ದೇಶಗಳಿಗಿಂತ ಅತೀ ಕಡಿಮೆ
ಭಾರತದ ವಂದೇ ಭಾರತ್ ಎಸಿ ಚೇರ್ ಟಿಕೆಟ್ ದರವನ್ನು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ್, ಚೀನಾ, ಫ್ರಾನ್ಸ್‌ಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ವಂದೇ ಭಾರತ್ ಎಸಿ ಚೇರ್ ಟಿಕೆಟ್ ದರ ಅತೀ ಕಡಿಮೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ದೇಶದಲ್ಲಿ ಪ್ರತಿ ಕಿಲೋಮೀಟರ್‌ಗೆ 2 ರಿಂದ 20 ರೂಪಾಯಿ ಇದೆ ಎಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ.
ಆರ್ಡಿನರಿ ರೈಲಿನ ಸರಾಸರಿ ಬೆಲೆ
ಆರ್ಡನರಿ ಅಥವಾ ಸಾಮಾನ್ಯ ರೈಲು ಬೆಲೆಯೆನ್ನು ಭಾರತದ ನೆರೆ ರಾಷ್ಟ್ರಗಳೊಂದಿಗೆ ಅಥವಾ ಯಾವುದೇ ದೇಶಕ್ಕೆ ಹೋಲಿಸಿದರೂ ಅತೀ ಕಡಿಮೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ಆರ್ಡಿನರಿ ರೈಲಿನ ಪ್ರತಿ ಕಿಲೋಮೀಟರ್ ಸರಾಸರಿ ಬೆಲೆ ಕೇವಲ 20 ಪೈಸೆ ಮಾತ್ರ. ಇದೇ ಬೆಲೆ ಪಾಕಿಸ್ತಾನದಲ್ಲಿ 54 ಪೈಸೆ, ಬಾಂಗ್ಲಾದೇಶದಲ್ಲಿ 37 ಪೈಸೆ, ಶ್ರೀಲಂಕಾದದಲ್ಲಿ 51 ಪೈಸೆಯಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
164 ವಂದೇ ಭಾರತ್ ರೈಲು ಸೇವೆ
ಭಾರತದಲ್ಲಿ 164 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆ ನೀಡುತ್ತಿದೆ. 84 ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ನೀಡಲಾಗುತ್ತಿದೆ. ಹಂತ ಹಂತವಾಗಿ ವಂದೇ ಭಾರತ್ ರೈಲು ಸೇವೆಗಳು ವರ್ಧಿಸುತ್ತಿದೆ. ಸಂಪರ್ಕ ವಿಸ್ತಾರಗೊಳ್ಳುತ್ತಿದೆ. 2019ರಲ್ಲಿ ಆರಂಭಗೊಂಡ ವಂದೇ ಭಾರತ್ ರೈಲು ಇದೀಗ ಅತ್ಯಂತ ಯಶಸ್ವಿ ರೈಲು ಸಂಪರ್ಕ ಸೇವೆಯಾಗಿದೆ ಎಂದು ಅಶ್ವಿನಿ ವೈಷ್ಣನವ್ ಲೋಕಸಭೆಯಲ್ಲಿ ಹೇಳಿದ್ದಾರೆ.
164 ವಂದೇ ಭಾರತ್ ರೈಲು ಸೇವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
