- Home
- Sports
- IPL
- Rishabh Pant: ಫೀಲ್ಡ್‌ನಲ್ಲೇ ಹೊಸ ಅವತಾರ ತಾಳಿದ ರಿಷಬ್ ಪಂತ್! ಬೆಚ್ಚಿ ಬೆರಗಾದ ಕ್ರಿಕೆಟ್ ಪ್ರಿಯರು!
Rishabh Pant: ಫೀಲ್ಡ್‌ನಲ್ಲೇ ಹೊಸ ಅವತಾರ ತಾಳಿದ ರಿಷಬ್ ಪಂತ್! ಬೆಚ್ಚಿ ಬೆರಗಾದ ಕ್ರಿಕೆಟ್ ಪ್ರಿಯರು!
IPL 20025 (RCB v/s LSG ) ಮ್ಯಾಚ್ ವೇಳೆ ರಿಷಬ್ ಪಂತ್ ಅವರು ಸಖತ್ ಆಗಿ ಆಟ ಆಡಿದ್ದರು. ಆ ವೇಳೆ ಅವರು ಮೈದಾನದಲ್ಲಿ ಅಚ್ಚರಿಯ ಅವತಾರ ತಾಳಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

2022ರಲ್ಲಿ ಕ್ರಿಕೆಟರ್ ರಿಷಬ್ ಪಂತ್ ಅವರಿಗೆ ಭೀಕರ ಅಪಘಾತ ಆಗಿತ್ತು. ಅವರ ಕಾರ್ ನುಚ್ಚು ನೂರಾಗಿತ್ತು. ಆ ಕಾರ್ ಸುಟ್ಟು ಕರಕಲಾಗಿದ್ದು, ನೋಡಿದ್ದರೆ ರಿಷಬ್ ಪಂತ್‌ಗೆ ಯಾವ ಮಟ್ಟಕ್ಕೆ ಗಾಯಗಳಾಗಿವೆ ಎಂದು ಊಹಿಸಲು ಆಗೋದಿಲ್ಲ.
ಅಷ್ಟು ದೊಡ್ಡ ಅಪಘಾತ ಆಗಿದ್ದಕ್ಕೆ ರಿಷಬ್ ಪಂತ್ ಅವರು ತಿಂಗಳಾನುಗಟ್ಟಲೇ ಬೆಡ್ ರೆಸ್ಟ್ ಪಡೆದಿದ್ದರು. ಕ್ರಿಕೆಟ್ ಲೋಕದಲ್ಲಿ ಎಷ್ಟು ಫಿಟ್ ಆಗಿದ್ದರೂ ಸಾಲದು. ಸಾಕಷ್ಟು ಬಾರಿ ಫಾರ್ಮ್‌ನಲ್ಲಿ ಇರೋಕೆ ಆಗದು. ಹೀಗಿರಬೇಕಾದರೆ ಅಪಘಾತ ಆದರೆ ಏನು ಕಥೆ?
ಇನ್ನು ಕ್ರಿಕೆಟ್‌ನಲ್ಲಿ ಮಿಂಚಲು ಮಾನಸಿಕವಾಗಿ, ದೈಹಿಕವಾಗಿ ಕೂಡ ರಿಷಬ್ ಪಂತ್ ಅವರು ಸ್ಟ್ರಾಂಗ್ ಇರಬೇಕಾಗುತ್ತದೆ.ಈಗ LSG v/s RCB ಮ್ಯಾಚ್ ವೇಳೆ ರಿಷಬ್ ಪಂತ್ ಅವರು 61 ಬಾಲ್‌ಗಳಲ್ಲಿ 118 ರನ್ ಪಡೆದಿದ್ದರು.
ಇನ್ನು ಮ್ಯಾಚ್ ವೇಳೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ರಿಷಬ್ ಪಂತ್ ಅವರು ಜಿಮ್ನಸ್ಟಿಕ್ ಕೂಡ ಮಾಡಿದ್ದರು. ಇದನ್ನು ನೋಡಿ ಅನೇಕರು ಬೆಚ್ಚಿ ಬೆರಗಾಗಿದ್ದಾರೆ. ಅಪಘಾತದ ಬಳಿಕ ರಿಷಬ್ ಪಂತ್ ಎಷ್ಟು ಜಿಮ್ ವರ್ಕೌಟ್ ಮಾಡಿದ್ದರು, ಮೆಂಟಲಿ ಗಟ್ಟಿ ಆಗಿದ್ದರು ಎನ್ನೋದಿಕ್ಕೆ ಇದೇ ಉತ್ತಮ ಉದಾಹರಣೆ.
“ಏರಿಳಿತಗಳಿಂದ ಕೂಡಿದ ಒಂದು ಸೀಸನ್. ಮನೆಗೆ ಹೋಗಲು ಪ್ರಾಕ್ಟೀಸ್. ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್‌ಎಸ್‌ಜಿ ಕುಟುಂಬಕ್ಕೆ ಧನ್ಯವಾದಗಳು. ಶೀಘ್ರದಲ್ಲೇ ಭೇಟಿಯಾಗೋಣ” ಎಂದು ರಿಷಬ್ ಪಂತ್ ಪೋಸ್ಟ್ ಮಾಡಿದ್ದಾರೆ.
ಅಪಘಾತ ಮಾಡಿಕೊಂಡಿದ್ದ ರಿಷಬ್ ಪಂತ್ ಈಗ ಇಷ್ಟು ಚೆನ್ನಾಗಿ ಆಡಿದ್ದು ನೋಡಿ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಅನೇಕರು ಈ ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

