MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಶಿವಮೊಗ್ಗ ಜೈಲಿನ ಗೋಡೆ ದಾಟಿದ ಕಪ್ಪು ಬಣ್ಣದ ಪೊಟ್ಟಣ! ಇಬ್ಬರು ಕೈದಿಗಳು, ಜೈಲೊಳಗೆ ಡ್ರಗ್ ಎಸೆದ ಹೊರಗಿನ ಮೂವರು ಬಂಧನ

ಶಿವಮೊಗ್ಗ ಜೈಲಿನ ಗೋಡೆ ದಾಟಿದ ಕಪ್ಪು ಬಣ್ಣದ ಪೊಟ್ಟಣ! ಇಬ್ಬರು ಕೈದಿಗಳು, ಜೈಲೊಳಗೆ ಡ್ರಗ್ ಎಸೆದ ಹೊರಗಿನ ಮೂವರು ಬಂಧನ

ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹಕ್ಕೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ವಿಫಲವಾಗಿದೆ. ಜೈಲಿನ ಗೋಡೆಯ ಮೇಲಿಂದ ಎಸೆದ ಗಾಂಜಾ, ಮೊಬೈಲ್ ಫೋನ್‌ಗಳಿದ್ದ ಪೊಟ್ಟಣಗಳನ್ನು ಪಡೆಯಲು ಯತ್ನಿಸಿದ ಇಬ್ಬರು ಕೈದಿಗಳನ್ನು ಹಾಗೂ ಹೊರಗಿನಿಂದ ವಸ್ತುಗಳನ್ನು ಎಸೆದ ಮೂವರು ಯುವಕರನ್ನು ಬಂಧಿಸಲಾಗಿದೆ.

2 Min read
Author : Gowthami K
Published : Feb 03 2026, 05:15 PM IST
Share this Photo Gallery
  • FB
  • TW
  • Linkdin
  • Whatsapp
15
ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹ
Image Credit : Asianet News

ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹ

ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಒಳಗೆ ಸಾಗಿಸಲು ನಡೆದ ಯತ್ನವನ್ನು ಜೈಲು ಸಿಬ್ಬಂದಿ ಮತ್ತು ಪೊಲೀಸರು ವಿಫಲಗೊಳಿಸಿದ್ದಾರೆ. ಕಾರಾಗೃಹದ ಗೋಡೆ ಮೇಲಿಂದ ಕಪ್ಪು ಬಣ್ಣದ ಟೇಪ್‌ನಿಂದ ಸುತ್ತಿದ್ದ ಅನುಮಾನಾಸ್ಪದ ಪೊಟ್ಟಣಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿದ್ದ ಇಬ್ಬರು ವಿಚಾರಣಾಧೀನ ಕೈದಿಗಳನ್ನು ಜೈಲು ಸಿಬ್ಬಂದಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತರನ್ನು ಮೊಹಮದ್ ಖಲಂದರ್ ಮತ್ತು ಅಬ್ದುಲ್ ಆಸೀಫ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಸೋಗಾನೆ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಶಂಕಾಸ್ಪದ ಚಲನವಲನ ಗಮನಿಸಿದ ಜೈಲು ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡರು.

25
ಕೈದಿಗಳಿಂದ ಗಾಂಜಾ, ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಜಪ್ತಿ
Image Credit : Asianet News

ಕೈದಿಗಳಿಂದ ಗಾಂಜಾ, ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಜಪ್ತಿ

ತಪಾಸಣೆಯ ವೇಳೆ ಮೊಹಮದ್ ಖಲಂದರ್‌ನಿಂದ ಒಂದು ಸ್ಮಾರ್ಟ್‌ಫೋನ್, ಸಿಮ್ ಕಾರ್ಡ್, ಎರಡು ಸಿಗರೇಟ್ ಪ್ಯಾಕೆಟ್‌ಗಳು ಹಾಗೂ ಸುಮಾರು 170 ಗ್ರಾಂ ತೂಕದ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಕೈದಿ ಅಬ್ದುಲ್ ಆಸೀಫ್‌ನಿಂದ ಸುಮಾರು 230 ಗ್ರಾಂ ಗಾಂಜಾ ಹಾಗೂ ಒಂದು ಲೈಟರ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಜೈಲು ಆಡಳಿತದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ಕೈದಿಗಳ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

Related Articles

Related image1
ಜೈಲು ಅಕ್ರಮ ತಡೆಯಲು ಸೆಂಟ್ರಲ್ ಕಮಾಂಡ್ ಸೆಂಟರ್, ಬೆಂಗಳೂರಿನಿಂದಲೇ ಕಂಟ್ರೋಲ್!
Related image2
ಮೈಸೂರು: ಡ್ರಗ್ ಉತ್ಪಾದನೆಯ ಎರಡನೇ ರಹಸ್ಯ ಘಟಕ ಪತ್ತೆ ಹಚ್ಚಿದ ಹೊರರಾಜ್ಯ ಪೊಲೀಸ್! 10 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ
35
ಹೊರಗಿನಿಂದ ವಸ್ತು ಎಸೆದ ಪ್ರಕರಣ – ಮೂವರು ಯುವಕರು ಬಂಧನ
Image Credit : Asianet News

ಹೊರಗಿನಿಂದ ವಸ್ತು ಎಸೆದ ಪ್ರಕರಣ – ಮೂವರು ಯುವಕರು ಬಂಧನ

ಇನ್ನೊಂದೆಡೆ, ಕಾರಾಗೃಹದ ಗೋಡೆ ಒಳಗೆ ನಿಷೇಧಿತ ವಸ್ತುಗಳನ್ನು ಹೊರಗಿನಿಂದ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಠಾಣೆಯ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ಶಿವಮೊಗ್ಗ ನಗರದ ಟಿಪ್ಪು ನಗರ ನಿವಾಸಿ ಇಮ್ರಾನ್ ಪಾಷಾ @ ಇಮ್ಮು (25), ಸೈಯ್ಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್ (22) ಹಾಗೂ ಅಂಬೇಡ್ಕರ್ ನಗರದ ಅಲ್ಲಾ ಬಕಶ್ @ ಪೊಟ್ಯಾಟೋ (20) ಎಂದು ಗುರುತಿಸಲಾಗಿದೆ.

45
ಜನವರಿ 30ರಂದು ನಡೆದ ಘಟನೆ
Image Credit : Asianet News

ಜನವರಿ 30ರಂದು ನಡೆದ ಘಟನೆ

ಪೊಲೀಸ್ ಮೂಲಗಳ ಪ್ರಕಾರ, ಜನವರಿ 30ರಂದು ಕಾರಾಗೃಹದ ಆವರಣಕ್ಕೆ ಹೊರಗಿನಿಂದ ಕಪ್ಪು ಟೇಪ್‌ನಿಂದ ಸುತ್ತಿದ್ದ ಪೊಟ್ಟಣಗಳನ್ನು ಎಸೆಯಲಾಗಿತ್ತು. ಜೈಲು ಸಿಬ್ಬಂದಿ ಮತ್ತು ಪೊಲೀಸರು ವಶಪಡಿಸಿಕೊಂಡ ಪೊಟ್ಟಣಗಳಲ್ಲಿ ಒಂದು ಸಣ್ಣ ಕೀಪ್ಯಾಡ್ ಮೊಬೈಲ್ ಫೋನ್, ಅಂದಾಜು 22 ಗ್ರಾಂ ತೂಕದ ಗಾಂಜಾ, ನಾಲ್ಕು ಸಿಗರೇಟ್ ಪ್ಯಾಕೆಟ್‌ಗಳು ಹಾಗೂ ಒಂದು ಕಪ್ಪು ಬಣ್ಣದ ಚಾರ್ಜಿಂಗ್ ಕೇಬಲ್ ಇದ್ದವು. ಈ ಅಕ್ರಮ ಜಾಲದ ಹಿಂದೆ ಇನ್ನಾರು ಇದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಾರಾಗೃಹದಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದ್ದು, ನಿಷೇಧಿತ ವಸ್ತುಗಳ ಸಾಗಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

55
ಕಾರಾಗೃಹ ಸೆಂಟ್ರಲ್‌ ಕಮಾಂಡ್‌ ಸೆಂಟರ್‌
Image Credit : Asianet News

ಕಾರಾಗೃಹ ಸೆಂಟ್ರಲ್‌ ಕಮಾಂಡ್‌ ಸೆಂಟರ್‌

ಇತ್ತೀಚೆಗೆ ರಾಜ್ಯದ ಪ್ರಮುಖ ಕಾರಾಗೃಹಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕಾರಾಗೃಹ ಸೆಂಟ್ರಲ್‌ ಕಮಾಂಡ್‌ ಸೆಂಟರ್‌ ತೆರೆಯಲಾಗಿದೆ. ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಮಾಂಡ್ ಸೆಂಟರ್‌ ಜತೆ ಬೆಂಗಳೂರು, ಬೆಂಗಳೂರು ದಕ್ಷಿಣ(ರಾಮನಗರ), ಶಿವಮೊಗ್ಗ, ಮೈಸೂರು, ಮಂಗಳೂರು, ಕಲಬುರಗಿ, ಧಾರವಾಡ, ಬೆಳಗಾವಿ ಮತ್ತು ಬಳ್ಳಾರಿ ಕಾರಾಗೃಹದಲ್ಲಿ ಅಳವಡಿಸಿರುವ ಎಐ ಆಧಾರಿತ 1076 ಸಿಸಿ ಕ್ಯಾಮೆರಾಗಳನ್ನು ಸಂಪರ್ಕ ಕಲ್ಪಿಸಲಾಗಿದೆ. ಕಮಾಂಡ್‌ ಸೆಂಟರ್‌ನಿಂದ ಜೈಲಿನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಶಿವಮೊಗ್ಗ
ಔಷಧಿ
ಕ್ರೈಮ್ ನ್ಯೂಸ್
ಸುದ್ದಿ
ಪೊಲೀಸ್
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Explainer: ಬೆಂಗಳೂರು ಮೆಟ್ರೋ ದೇಶದಲ್ಲೇ 'ಅತ್ಯಂತ ದುಬಾರಿ' ಅನ್ನೋ ಕುಖ್ಯಾತಿ ಗಳಿಸಿದ್ದು ಯಾರಿಂದ?
Recommended image2
ಶಿವಮೊಗ್ಗದಲ್ಲಿ ವೇಶ್ಯಾವಾಟಿಕೆ ಜಾಲ: ಮೂವರು ಲೋಕಲ್ ಮಹಿಳೆಯರಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್!
Recommended image3
ಫೋರಂ ಮಾಲ್‌ನಲ್ಲಿ ತಮಿಳು ಗಾನ: ಕರವೇ ಕೊಟ್ಟ ಶಾಕ್‌ಗೆ ಹರಿದುಬಂತು ನೋಡಿ ಡಾ.ರಾಜ್ ಕುಮಾರ್ ಗಾಯನ!
Related Stories
Recommended image1
ಜೈಲು ಅಕ್ರಮ ತಡೆಯಲು ಸೆಂಟ್ರಲ್ ಕಮಾಂಡ್ ಸೆಂಟರ್, ಬೆಂಗಳೂರಿನಿಂದಲೇ ಕಂಟ್ರೋಲ್!
Recommended image2
ಮೈಸೂರು: ಡ್ರಗ್ ಉತ್ಪಾದನೆಯ ಎರಡನೇ ರಹಸ್ಯ ಘಟಕ ಪತ್ತೆ ಹಚ್ಚಿದ ಹೊರರಾಜ್ಯ ಪೊಲೀಸ್! 10 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved