MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಅಂಧ ವಿದ್ಯಾರ್ಥಿನಿ ಬಾಳಲ್ಲಿ ಆಟವಾಡಿದ SSLC ಬೋರ್ಡ್ ಎಡವಟ್ಟುರಾಯರು; 84% ಪರ್ಸೆಂಟೇಜ್ ಅಂಕ ಗಳಿಸಿದರೂ ಫೇಲ್!

ಅಂಧ ವಿದ್ಯಾರ್ಥಿನಿ ಬಾಳಲ್ಲಿ ಆಟವಾಡಿದ SSLC ಬೋರ್ಡ್ ಎಡವಟ್ಟುರಾಯರು; 84% ಪರ್ಸೆಂಟೇಜ್ ಅಂಕ ಗಳಿಸಿದರೂ ಫೇಲ್!

ಶಿರಸಿಯ ಅಂಧ ವಿದ್ಯಾರ್ಥಿನಿ ಲೀಜಾ ಖಾನಮ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 526 ಅಂಕಗಳನ್ನು ಗಳಿಸಿ ಶೇ. 84.16 ಫಲಿತಾಂಶ ಪಡೆದಿದ್ದಾಳೆ. ಆದರೆ, ಪರೀಕ್ಷಾ ಪ್ರಾಧಿಕಾರವು ಸಮಾಜ ವಿಜ್ಞಾನ ವಿಷಯಕ್ಕೆ ಗೈರುಹಾಜರಿ ಎಂದು ತಪ್ಪಾಗಿ ನಮೂದಿಸಿದ್ದರಿಂದ, ಆಕೆಯನ್ನು 'ಫೇಲ್' ಎಂದು ಘೋಷಿಸಲಾಗಿದೆ.

2 Min read
Author : Sathish Kumar KH
Published : Apr 23 2026, 06:10 PM IST
Share this Photo Gallery
  • FB
  • TW
  • Linkdin
  • Whatsapp
15
ಅಂಧ ವಿದ್ಯಾರ್ಥಿ ಬಾಳಲ್ಲಿ ಆಟವಾಡಿದ ಎಸ್‌ಎಸ್‌ಎಲ್‌ಸಿ ಬೋರ್ಡ್
Image Credit : Asianet News

ಅಂಧ ವಿದ್ಯಾರ್ಥಿ ಬಾಳಲ್ಲಿ ಆಟವಾಡಿದ ಎಸ್‌ಎಸ್‌ಎಲ್‌ಸಿ ಬೋರ್ಡ್

ಉತ್ತರ ಕನ್ನಡ (ಏ.23): ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಶಿಕ್ಷಣ ಇಲಾಖೆಯ ಮತ್ತು ಪರೀಕ್ಷಾ ಪ್ರಾಧಿಕಾರದ ಅಚಾತುರ್ಯವೊಂದು ಬೆಳಕಿಗೆ ಬಂದಿದೆ. ಹಗಲಿರುಳು ಶ್ರಮಪಟ್ಟು ಅಭ್ಯಾಸ ಮಾಡಿ, ಅತ್ಯುತ್ತಮ ಅಂಕ ಗಳಿಸಿದರೂ ಸಹ, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯದಿಂದಾಗಿ ಅಂಧ ವಿದ್ಯಾರ್ಥಿನಿಯೊಬ್ಬಳನ್ನು 'ಫೇಲ್' ಎಂದು ಘೋಷಿಸಿರುವುದು ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

25
ಏನಿದು ಘಟನೆ?
Image Credit : Asianet News

ಏನಿದು ಘಟನೆ?

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಜಾ ಖಾನಮ್ ಈ ಅನ್ಯಾಯಕ್ಕೆ ಒಳಗಾದ ಪ್ರತಿಭೆ. ಲೀಜಾ ಹುಟ್ಟಿನಿಂದಲೇ ಅಂಧತ್ವ ಹೊಂದಿದ್ದರೂ, ತನ್ನ ದೈಹಿಕ ಮಿತಿಯನ್ನು ಮೀರಿ ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂಬ ಛಲ ಹೊಂದಿದ್ದವಳು. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಲೀಜಾ ಅತ್ಯಂತ ಅದ್ಭುತವಾಗಿ ಪ್ರದರ್ಶನ ನೀಡಿದ್ದಾಳೆ. ಆದರೆ ಫಲಿತಾಂಶ ಬಂದಾಗ ಆಕೆಗೆ ಹಾಗೂ ಆಕೆಯ ಪೋಷಕರಿಗೆ ಆಘಾತ ಕಾದಿತ್ತು.

Related Articles

Related image1
ಸರ್ಕಾರ ಘೋಷಿಸಿದ SSLC ತೃತೀಯ ಭಾಷೆ ಗ್ರೇಡ್ ಆಸೆಗೆ 'ಹಿಂದಿ'ಯಲ್ಲಿ ಫೇಲಾದ 9,481 ವಿದ್ಯಾರ್ಥಿಗಳು!
Related image2
ಎಸ್‌ಎಸ್‌ಎಲ್‌ಸಿ ಫಲಿತಾಂಶ: 625 ಕ್ಕೆ 625 ಪಡೆದ ವಿದ್ಯಾರ್ಥಿಗಳಿವರು, 620ಕ್ಕಿಂತ ಹೆಚ್ಚು ಪಡೆದವರೆಷ್ಟು?
35
ಅಂಕಗಳ ವಿವರ ಹೀಗಿದೆ:
Image Credit : Asianet News

ಅಂಕಗಳ ವಿವರ ಹೀಗಿದೆ:

ಲೀಜಾ ಖಾನಮ್ ಪಡೆದ ಅಂಕಗಳು ಯಾವುದೇ ಸಾಮಾನ್ಯ ವಿದ್ಯಾರ್ಥಿಗೂ ಮಾದರಿಯಾಗುವಂತಿವೆ:

  • ಉರ್ದು: 124
  • ಕನ್ನಡ: 100
  • ಇಂಗ್ಲಿಷ್: 92
  • ಎಕನಾಮಿಕ್ಸ್: 98
  • ಪೊಲಿಟಿಕಲ್ ಸೈನ್ಸ್: 92

ಒಟ್ಟು 625 ಅಂಕಗಳಿಗೆ ಲೀಜಾ ಬರೋಬ್ಬರಿ 526 ಅಂಕಗಳನ್ನು ಗಳಿಸಿದ್ದಾಳೆ. ಅಂದರೆ ಶೇಕಡಾ 84.16ರಷ್ಟು ಫಲಿತಾಂಶ ಆಕೆಯದ್ದಾಗಿದೆ. ಆದರೆ, ಫಲಿತಾಂಶದ ಪಟ್ಟಿಯಲ್ಲಿ ಆಕೆಯನ್ನು 'FAIL' (NC - Not Completed) ಎಂದು ನಮೂದಿಸಲಾಗಿದೆ.

45
ಪ್ರಾಧಿಕಾರದ ಎಡವಟ್ಟು ಎಲ್ಲಿಯದು?
Image Credit : Asianet News

ಪ್ರಾಧಿಕಾರದ ಎಡವಟ್ಟು ಎಲ್ಲಿಯದು?

ಲೀಜಾ ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದಾಳೆ. ಆದರೆ ಪರೀಕ್ಷಾ ಪ್ರಾಧಿಕಾರವು ಸೋಷಿಯಲ್ ಸೈನ್ಸ್ (ಸಮಾಜ ವಿಜ್ಞಾನ) ವಿಷಯಕ್ಕೆ ವಿದ್ಯಾರ್ಥಿನಿ ಗೈರು ಹಾಜರಾಗಿದ್ದಾಳೆ (NA - Not Available) ಎಂದು ನಮೂದಿಸಿದೆ. ಈ ಒಂದು ಸಣ್ಣ ಎಡವಟ್ಟಿನಿಂದಾಗಿ ಅಷ್ಟೊಂದು ಅಂಕ ಪಡೆದರೂ ಲೀಜಾ ಫಲಿತಾಂಶದಲ್ಲಿ ಫೇಲ್ ಎಂದು ಬಂದಿದೆ.

ದಾಖಲೆ ಇದ್ದರೂ ನಿರ್ಲಕ್ಷ್ಯ:

ತಾನು ಪರೀಕ್ಷೆಗೆ ಹಾಜರಾಗಿರುವ ಬಗ್ಗೆ ಲೀಜಾ ಬಳಿ ಭದ್ರವಾದ ಪುರಾವೆಯಿದೆ. ಪರೀಕ್ಷಾ ಪ್ರವೇಶ ಪತ್ರದ (Hall Ticket) ಮೇಲೆ ಆಯಾ ದಿನದ ಪರೀಕ್ಷಾ ಮೇಲ್ವಿಚಾರಕರು ಸಹಿ ಮಾಡಿದ್ದಾರೆ. ಈ ಪ್ರವೇಶ ಪತ್ರವನ್ನು ಹಿಡಿದು ಲೀಜಾ ಮತ್ತು ಆಕೆಯ ಪೋಷಕರು ಇಂದು ಕಣ್ಣೀರು ಹಾಕುತ್ತಿದ್ದಾರೆ. ‘ನಾನು ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೇನೆ, ನನ್ನ ಬಳಿ ಸಹಿ ಇರುವ ಹಾಲ್ ಟಿಕೆಟ್ ಕೂಡ ಇದೆ. ಹೀಗಿದ್ದರೂ ನನ್ನನ್ನು ಫೇಲ್ ಮಾಡಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ’ ಎಂದು ಲೀಜಾ ಅಳಲು ತೋಡಿಕೊಂಡಿದ್ದಾಳೆ.

55
ನ್ಯಾಯಕ್ಕಾಗಿ ಆಗ್ರಹ:
Image Credit : Asianet News

ನ್ಯಾಯಕ್ಕಾಗಿ ಆಗ್ರಹ:

ಒಬ್ಬ ಅಂಧ ವಿದ್ಯಾರ್ಥಿನಿ ಇಷ್ಟೊಂದು ಸಾಧನೆ ಮಾಡಿದಾಗ ಬೆನ್ನು ತಟ್ಟಬೇಕಾದ ಸರ್ಕಾರಿ ವ್ಯವಸ್ಥೆ, ಆಕೆಯ ಭವಿಷ್ಯದ ಜೊತೆ ಆಟವಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿರಸಿಯ ಯುನಿಯನ್ ಉರ್ದು ಶಾಲೆಯ ಶಿಕ್ಷಕರು ಮತ್ತು ಪೋಷಕರು ಕೂಡಲೇ ಈ ತಪ್ಪು ತಿದ್ದಿ ಲೀಜಾಗೆ ನ್ಯಾಯ ಒದಗಿಸಬೇಕೆಂದು ಪರೀಕ್ಷಾ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ತಾಂತ್ರಿಕ ದೋಷವನ್ನು ಸರಿಪಡಿಸಿ, ಲೀಜಾ ಖಾನಮ್ ಅವರ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಬೇಕಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಎಸ್‌ಎಸ್‌ಎಲ್‌ಸಿ (SSLC)
ಉತ್ತರ ಕನ್ನಡ
ಶಿಕ್ಷಣ

Latest Videos
Recommended Stories
Recommended image1
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಸಮಗ್ರ ಅಭಿವೃದ್ಧಿ ಯೋಜನೆ: 340 ಕೋಟಿ ರೂ ಬದಲು 95 ಕೋಟಿ ರೂಗೆ ಇಳಿಕೆ!
Recommended image2
ಯಾರೋ ಬರುತ್ತಾರೆ ಅಂತ ನೆಚ್ಚಿಕೊಂಡು ಜೆಡಿಎಸ್‌ ಪಕ್ಷ ಉಳಿದಿಲ್ಲ: ನಿಖಿಲ್‌ ಕುಮಾರಸ್ವಾಮಿ
Recommended image3
ಇಂಡಿಯಾ ಕೂಟದ ನಡೆಯಿಂದ ಸಂಸದರ ಸ್ಥಾನ ಕುಸಿಯುವ ಸಾಧ್ಯತೆ: ಸಂಸದ ಡಾ.ಸಿ.ಎನ್.ಮಂಜುನಾಥ್
Related Stories
Recommended image1
ಸರ್ಕಾರ ಘೋಷಿಸಿದ SSLC ತೃತೀಯ ಭಾಷೆ ಗ್ರೇಡ್ ಆಸೆಗೆ 'ಹಿಂದಿ'ಯಲ್ಲಿ ಫೇಲಾದ 9,481 ವಿದ್ಯಾರ್ಥಿಗಳು!
Recommended image2
ಎಸ್‌ಎಸ್‌ಎಲ್‌ಸಿ ಫಲಿತಾಂಶ: 625 ಕ್ಕೆ 625 ಪಡೆದ ವಿದ್ಯಾರ್ಥಿಗಳಿವರು, 620ಕ್ಕಿಂತ ಹೆಚ್ಚು ಪಡೆದವರೆಷ್ಟು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved