ಗ್ಯಾಸ್ ಬರ್ನರ್ ಸರಿಯಾಗಿ ಉರಿತಾ ಇಲ್ವಾ?, ಈ ಟೆಕ್ನಿಕ್ ಟ್ರೈ ಮಾಡಿದ್ರೆ ತಕ್ಷಣ ಸರಿಹೋಗುತ್ತೆ
How to Clean Gas Stove Burner: ಅನೇಕರು ಬರ್ನರ್ ಬಗ್ಗೆ ಗಮನ ಹರಿಸಲು ಮರಿತಾರೆ. ನಿಮಗೆ ಗೊತ್ತಾ?, ಬರ್ನರ್ ಕೊಳಕಾದರೆ ಕ್ರಮೇಣ ಅದು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತೆ. ಆದರೆ ಬರ್ನರ್ ಅನ್ನು ಸರಿಪಡಿಸಲು ಸಹ ಕೆಲವು ಸುಲಭ ಮಾರ್ಗಗಳು ಇವೆ.

ಬರ್ನರ್ ಕೊಳಕಾದರೆ
ಹೆಚ್ಚು ಕಡಿಮೆ ಎಲ್ಲರೂ ಈಗ ಅಡುಗೆಗೆ ಗ್ಯಾಸ್ ಸ್ಟೌವ್ ಬಳಸುತ್ತಾರೆ. ಅನೇಕ ಹೆಣ್ಮಕ್ಕಳು "ಅಬ್ಬಾ ನಾವಿಂದು ಗ್ಯಾಸ್ ಸ್ಟೌವನ್ನ ನೀಟಾಗಿ ಕ್ಲೀನ್ ಮಾಡಿದೆವು" ಅಂತಾರೆ. ಅದು ಒಳ್ಳೆಯದೇ ಆದರೂ ಅನೇಕರು ಬರ್ನರ್ ಬಗ್ಗೆ ಗಮನ ಹರಿಸಲು ಮರಿತಾರೆ. ನಿಮಗೆ ಗೊತ್ತಾ?, ಬರ್ನರ್ ಕೊಳಕಾದರೆ ಕ್ರಮೇಣ ಅದು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತೆ. ಆದರೆ ಬರ್ನರ್ ಅನ್ನು ಸರಿಪಡಿಸಲು ಸಹ ಕೆಲವು ಸುಲಭ ಮಾರ್ಗಗಳು ಇವೆ.
ಇವೆಲ್ಲವೂ ಕಾರಣ
ಎಲ್ಲರಿಗೂ ಗೊತ್ತಿರುವಂತೆ ಗ್ಯಾಸ್ ಸ್ಟವ್ ಬರ್ನರ್‌ನಲ್ಲಿ ಆಹಾರ, ಎಣ್ಣೆ ಅಥವಾ ಕೊಳಕು ಸಂಗ್ರಹವಾಗುವುದರಿಂದ ಗ್ಯಾಸ್ ಹರಿವು ಕಡಿಮೆಯಾಗಬಹುದು ಅಥವಾ ನಿಲ್ಲಬಹುದು. ಬರ್ನರ್ ಸರಿಯಾಗಿ ಉರಿಯದಿದ್ದಾಗ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸಮಸ್ಯೆಯೂ ಇರಬಹುದು. ಇಗ್ನಿಷನ್ ಸಿಸ್ಟಮ್‌ನಲ್ಲಿ ಸಮಸ್ಯೆಯಾದಾಗಲೂ ಗ್ಯಾಸ್ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸದಿರಲು ಒಂದು ಕಾರಣವಾಗಬಹುದು. ಸರಿಯಾಗಿ ಕಾರ್ಯನಿರ್ವಹಿಸದಿರುವ ಗ್ಯಾಸ್ ರೆಗ್ಯುಲೇಟರ್ ಸಹ ಗ್ಯಾಸ್ ಹರಿವಿನ ಮೇಲೆ ಪರಿಣಾಮ ಬೀರಬಹುದು.
ಗ್ಯಾಸ್ ಬರ್ನರ್ ಸ್ವಚ್ಛಗೊಳಿಸುವುದು ಹೇಗೆ?
ಅಡುಗೆ ಸೋಡಾ ಮತ್ತು ವಿನೆಗರ್ ದ್ರಾವಣವನ್ನು ತಯಾರಿಸಿ. ನಂತರ ಗ್ಯಾಸ್ ಬರ್ನರ್ ಅನ್ನು ಈ ದ್ರಾವಣದಲ್ಲಿ ಸ್ವಲ್ಪ ಸಮಯದವರೆಗೆ ನೆನೆಸಿಡಿ. ನೀವು ಈಗ ಬ್ರಷ್ ಬಳಸಿ ಬರ್ನರ್ ಅನ್ನು ಸ್ವಚ್ಛಗೊಳಿಸಬಹುದು. ಅಲ್ಲದೆ, ಗ್ಯಾಸ್ ಪೈಪ್‌ಲೈನ್ ಏನಾದರೂ ಬಗ್ಗಿದೆಯೇ ಅಥವಾ ಅಲ್ಲಿ ಅಡೆತಡೆಯಾಗಿದೆಯೇ ಪರಿಶೀಲಿಸಿ.
ಉಗುರುಬೆಚ್ಚಗಿನ ನೀರಿನಲ್ಲಿ ಅದ್ದಿ
ಬರ್ನರ್ ಅನ್ನು ಸ್ವಚ್ಛಗೊಳಿಸಲು, ಅದನ್ನು ಉಗುರುಬೆಚ್ಚಗಿನ ನೀರಿನಲ್ಲಿ ತಲೆಕೆಳಗಾಗಿ ಅದ್ದಿ ಮತ್ತು ಸ್ವಲ್ಪ ಸಮಯದ ನಂತರ ಯಾವುದೇ ಕೊಳೆಯಿದ್ದಲ್ಲಿ ಬ್ರಷ್ ಮಾಡಿ ತೆಗೆದುಹಾಕಿ.
ನಾಣ್ಯಗಳ ಬಳಕೆ
ಗ್ಯಾಸ್ ಬರ್ನರ್‌ನ ಹೋಲ್ ಸ್ವಚ್ಛಗೊಳಿಸಲು ನೀವು ನಾಣ್ಯಗಳನ್ನು ಸಹ ಬಳಸಬಹುದು. ನಾಣ್ಯಗಳನ್ನು ನಿಧಾನವಾಗಿ ಉಜ್ಜುವುದರಿಂದ ಗಮನಾರ್ಹ ಪ್ರಮಾಣದ ಕೊಳೆಯನ್ನು ತೆಗೆದುಹಾಕಬಹುದು.
ಏರ್ ಮಿಕ್ಸರ್ ಟ್ರೈ ಮಾಡ್ಬೋದು
ಬರ್ನರ್ ಅನ್ನು ಸ್ವಚ್ಛಗೊಳಿಸಿದ ನಂತರವೂ ಗ್ಯಾಸ್ ಹರಿವು ಸರಾಗವಾಗಿಲ್ಲದಿದ್ದರೆ, ನೀವು ಏರ್ ಮಿಕ್ಸರ್ ಟ್ರೈ ಮಾಡ್ಬೋದು. ಇದು ಗ್ಯಾಸ್ ಮತ್ತು ಗಾಳಿಯ ಸರಿಯಾದ ಅನುಪಾತವನ್ನು ನಿಯಂತ್ರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

