Kitchen Tips: ಮೊಸರಿನ ಹುಳಿ ಕ್ಷಣಾರ್ಧದಲ್ಲಿ ಮಾಯವಾಗುತ್ತೆ, ಇಷ್ಟು ಮಾಡಿ ಸಾಕು
ಇನ್ಮುಂದೆ ನಿಮ್ಮ ಮನೆಯಲ್ಲಿರುವ ಮೊಸರು ಯಾವಾಗಲೂ ಸಿಹಿ ಮತ್ತು ರುಚಿಕರವಾಗಿರಬೇಕೆಂದು ನೀವು ಬಯಸಿದರೆ ಕೆಲವು ಸುಲಭ ಸಲಹೆ ಅಳವಡಿಸಿಕೊಳ್ಳುವ ಮೂಲಕ ಅದರ ಹುಳಿಯನ್ನು ತಕ್ಷಣವೇ ತೆಗೆದುಹಾಕಬಹುದು.

ಸಿಹಿ ಮತ್ತು ರುಚಿಕರವಾಗಿರಲು
ರಾಯಿತಾ, ಲಸ್ಸಿ ಅಥವಾ ಯಾವುದೇ ಗ್ರೇವಿ ಖಾದ್ಯವಾಗಿರಲಿ ಮೊಸರು ಪ್ರತಿಯೊಂದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ಮೊಸರು ಹುಳಿ ಬಂದುಬಿಡುತ್ತೆ. ಆಗ ಅದರ ರುಚಿ ಹಾಳಾಗುತ್ತೆ. ಹುಳಿ ಮೊಸರು ತಿನ್ನುವ ಆನಂದವನ್ನೇ ಹಾಳುಮಾಡುವುದಲ್ಲದೆ, ಕುಟುಂಬ ಸದಸ್ಯರು ಸಹ ಅದನ್ನು ತಿಂದ ನಂತರ ಮುಖ ಕಿವುಚಲು ಪ್ರಾರಂಭಿಸುತ್ತಾರೆ. ಇನ್ಮುಂದೆ ನಿಮ್ಮ ಮನೆಯಲ್ಲಿರುವ ಮೊಸರು ಯಾವಾಗಲೂ ಸಿಹಿ ಮತ್ತು ರುಚಿಕರವಾಗಿರಬೇಕೆಂದು ನೀವು ಬಯಸಿದರೆ ಕೆಲವು ಸುಲಭ ಸಲಹೆ ಅಳವಡಿಸಿಕೊಳ್ಳುವ ಮೂಲಕ ಅದರ ಹುಳಿಯನ್ನು ತಕ್ಷಣವೇ ತೆಗೆದುಹಾಕಬಹುದು.
ಉಗುರು ಬೆಚ್ಚಗಿನ ಹಾಲಿನಲ್ಲಿ ಹಾಕಿ
ಹಾಲು ಹೆಪ್ಪು ಹಾಕಬೇಕಾದ್ರೆ ಯಾವಾಗಲೂ ಉಗುರು ಬೆಚ್ಚಗಿನ ಹಾಲಿನಲ್ಲಿಯೇ ಹಾಕಿ. ಹಾಲು ತುಂಬಾ ಬಿಸಿಯಾಗಿದ್ದರೆ ಮೊಸರು ಬೇಗನೆ ಹುಳಿಯಾಗುತ್ತದೆ. ಇನ್ನು ತಣ್ಣನೆಯ ಹಾಲನ್ನು ಬಳಸಿದ್ರೆ ಮೊಸರು ಸರಿಯಾಗಿ ಗಟ್ಟಿಯಾಗುವುದಿಲ್ಲ.
ನಿಂಬೆಹಣ್ಣಿನ ಬಳಕೆ
ಮೊಸರು ಹುಳಿಯಾಗಿ ಮಾರ್ಪಟ್ಟಿದ್ದರೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ನಿಂಬೆ ಹುಳಿಯನ್ನು ಸಮತೋಲನಗೊಳಿಸುತ್ತದೆ ಮತ್ತು ಮೊಸರಿನ ರುಚಿಯನ್ನು ತಕ್ಷಣವೇ ಬದಲಾಯಿಸುತ್ತದೆ.
ಹಾಲು ಸೇರಿಸಿ ಬ್ಯಾಲೆನ್ಸ್ ಮಾಡಿ
ಹಾಲು ಹೆಪ್ಪು ಹಾಕಬೇಕಾದ್ರೆ ಅದಕ್ಕೆ ಸ್ವಲ್ಪ ತಾಜಾ ಹಾಲನ್ನು ಸೇರಿಸಿ. ಇದು ಮೊಸರಿನ ರುಚಿಯನ್ನು ಲೈಟಾಗಿಡುತ್ತೆ ಮತ್ತು ಅದರ ಹುಳಿಯನ್ನು ಕಡಿಮೆ ಮಾಡುತ್ತದೆ.
ಸಕ್ಕರೆಯ ಮ್ಯಾಜಿಕ್
ನೀವು ರಾಯಿತಾ ಅಥವಾ ಲಸ್ಸಿಗೆ ಮೊಸರು ಬಳಸುತ್ತಿದ್ದರೆ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ತಿರುಗಿಸಿ. ಇದು ಹುಳಿಯನ್ನು ನಿವಾರಿಸುತ್ತದೆ ಮತ್ತು ರುಚಿ ಸಿಹಿಯಾಗಿರುತ್ತದೆ.
ಮೊಸರನ್ನು ತಂಪಾದ ಸ್ಥಳದಲ್ಲಿ ಇರಿಸಿ
ಮೊಸರು ಗಟ್ಟಿಯಾದ ನಂತರ ಅದನ್ನು ಫ್ರಿಡ್ಜ್‌ನಲ್ಲಿ ಇರಿಸಿ. ಹೊರಗೆ ದೀರ್ಘಕಾಲ ಇಡುವುದರಿಂದ ಮೊಸರು ಹುಳಿಯಾಗುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಮೊಸರನ್ನು ತಂಪಾದ ಸ್ಥಳದಲ್ಲಿ ಸಂಗ್ರಹಿಸಿ.
ನೀರಿನಿಂದ ತೊಳೆಯಿರಿ
ಮೊಸರು ತುಂಬಾ ಹುಳಿಯಾಗಿದ್ದರೆ ಅದನ್ನು ಸ್ವಚ್ಛವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ನೀರಿನಿಂದ ತೊಳೆಯಿರಿ. ನಂತರ ಅದನ್ನು ಮಜ್ಜಿಗೆ ಅಥವಾ ರಾಯಿತಾಗೆ ಬಳಸಬಹುದು.
ಮೊಸರು ಪ್ರತಿ ಋತುವಿನಲ್ಲಿಯೂ ಆಹಾರದ ರುಚಿ ಮತ್ತು ಆರೋಗ್ಯ ಎರಡನ್ನೂ ಹೆಚ್ಚಿಸುತ್ತದೆ. ಅದು ಹುಳಿಯಾದರೆ, ತಿನ್ನುವ ರುಚಿ ಹಾಳಾಗುತ್ತದೆ. ಮೇಲೆ ತಿಳಿಸಲಾದ ಈ ಮನೆಮದ್ದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸುಲಭವಾಗಿ ಹುಳಿಯನ್ನು ತೆಗೆದುಹಾಕಿ ಮೊಸರಿನ ರುಚಿಯನ್ನು ಮತ್ತೆ ಉತ್ತಮಗೊಳಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

