ಬಾತ್‌ರೂಮ್ ಟೈಲ್ಸ್ ಫಳ ಫಳ ಹೊಳೆಯಬೇಕೆ? ಹಾಗಾದ್ರೆ ಈ ರೀತಿ ಮಾಡಿ!
ಮನೆಯೆಲ್ಲಾ ಕ್ಲೀನ್ ಮಾಡೋದು ಒಂದು ಲೆಕ್ಕ ಆದ್ರೆ, ಬಾತ್‌ರೂಮ್ ಕ್ಲೀನ್ ಮಾಡೋದು ಇನ್ನೊಂದು ಲೆಕ್ಕ. ಬಾತ್‌ರೂಮ್ ಟೈಲ್ಸ್ ಮೇಲೆ ಕೂತಿರೋ ಕೊಳಕನ್ನ ಉಜ್ಜಿ ಉಜ್ಜಿ ತೊಳಿಬೇಕು. ಆದ್ರೂ ಒಂದ್ಸಾರಿ ಅದು ಹೋಗೋದೆ ಇಲ್ಲ. ಆದ್ರೆ ಕೆಲವು ವಸ್ತುಗಳನ್ನು ಉಪಯೋಗಿಸಿ ಬಾತ್‌ರೂಮ್‌ನ್ನ ಈಸಿಯಾಗಿ ಕ್ಲೀನ್ ಮಾಡಬಹುದು. ಅವೇನಂತ ಇಲ್ಲಿ ತಿಳ್ಕೊಳ್ಳೋಣ.

ಸಾಮಾನ್ಯವಾಗಿ ಬಾತ್‌ರೂಮ್‌ನ್ನು ಎಷ್ಟು ಉಜ್ಜಿ ತೊಳೆದರೂ ಸ್ವಲ್ಪ ಮಟ್ಟಿಗೆ ಮಾತ್ರ ಕ್ಲೀನ್ ಆಗಿ ಕಾಣುತ್ತದೆ. ವಾಸನೆ ಕೂಡ ಬರುತ್ತದೆ. ಬಾತ್‌ರೂಮ್‌ನಲ್ಲಿ ನೀರನ್ನು ಹೆಚ್ಚಾಗಿ ಬಳಸುವುದರಿಂದ ಟೈಲ್ಸ್ ಸ್ವಚ್ಛ ಮಾಡುವುದು ಕಷ್ಟ. ಸ್ವಲ್ಪ ಉಪ್ಪುನೀರನ್ನು ಬಳಸಿದರೆ ಟೈಲ್ಸ್ ಇನ್ನೂ ಕೊಳೆಯಾಗುತ್ತವೆ. ಹೀಗೆ ಬಾತ್‌ರೂಮ್‌ನಲ್ಲಿ ವರ್ಷಗಳಿಂದ ಶೇಖರಣೆಯಾಗಿರುವ ಕಲೆಗಳನ್ನು ಈಸಿಯಾಗಿ ಹೇಗೆ ತೆಗೆಯುವುದು ಅಂದುಕೊಂಡಿದ್ದೀರಾ? ಹಾಗಾದರೆ ಈ ಟಿಪ್ಸ್ ನಿಮಗೋಸ್ಕರ. ಒಮ್ಮೆ ನೋಡಿ.
ನಿಂಬೆಕಾಯಿ, ಬೇಕಿಂಗ್ ಸೋಡಾ: ಅಡುಗೆ ಸೋಡಾ, ನಿಂಬೆಕಾಯಿ ಎರಡೂ ಟೈಲ್ಸ್ ಮೇಲೆ ಕೂತಿರೋ ಉಪ್ಪಿನ ಕಲೆಗಳನ್ನ ಈಸಿಯಾಗಿ ತೆಗಿಯೋಕೆ ಸಹಾಯ ಮಾಡುತ್ತೆ. ಒಂದು ಕಪ್‌ನಲ್ಲಿ ಬೇಕಿಂಗ್ ಸೋಡಾ, ನಿಂಬೆರಸ ಹಾಕಿ ಟೈಲ್ಸ್ ಮೇಲೆ ಹಚ್ಚಿ 20 ನಿಮಿಷ ಬಿಡಿ. ಆಮೇಲೆ ಸ್ಕ್ರಬ್‌ನಿಂದ ಉಜ್ಜಿ ಕ್ಲೀನ್ ಮಾಡಿ.
ಹರ್ಬಲ್ ಆಯಿಲ್: ಬಾತ್‌ರೂಮ್‌ನಲ್ಲಿ ಹರ್ಬಲ್ ಆಯಿಲ್‌ನಿಂದ ಕ್ಲೀನ್ ಮಾಡಿದ್ರೆ ಒಳ್ಳೆ ವಾಸನೆ ಬರೋದಷ್ಟೇ ಅಲ್ಲ, ಬ್ಯಾಕ್ಟೀರಿಯಾ ಕೂಡ ಕಮ್ಮಿ ಆಗುತ್ತೆ. ಅದಕ್ಕೆ ಕೆಲವು ಡ್ರಾಪ್ಸ್ ಆಯಿಲ್ ಜೊತೆ ಸ್ವಲ್ಪ ವಿನೆಗರ್ ಹಾಕಿ ಬಾತ್‌ರೂಮ್ ಟೈಲ್ಸ್ ಮೇಲೆ ಸ್ಪ್ರೇ ಮಾಡಿ. 20 ನಿಮಿಷ ಆದ್ಮೇಲೆ ಕ್ಲೀನ್ ಮಾಡಿದ್ರೆ ಬಾತ್‌ರೂಮ್ ನೀಟ್ ಆಗಿ ಆಗುತ್ತೆ.
ವಿನೆಗರ್: ವಿನೆಗರ್ ಕೊಳಕನ್ನ ತೆಗಿಯೋಕೆ ಸಹಾಯ ಮಾಡುತ್ತೆ. ಒಂದು ಸ್ಪ್ರೇ ಬಾಟಲಲ್ಲಿ ಸಮಾನವಾಗಿ ವಿನೆಗರ್, ನೀರು ಹಾಕಿ ಮಿಕ್ಸ್ ಮಾಡಿ. ಆಮೇಲೆ ಅದನ್ನ ಬಾತ್‌ರೂಮ್ ಟೈಲ್ಸ್ ಮೇಲೆ ಸ್ಪ್ರೇ ಮಾಡಿ 15 ನಿಮಿಷ ಬಿಡಿ. ನೆಕ್ಸ್ಟ್ ಬ್ರಷ್‌ನಿಂದ ಕ್ಲೀನ್ ಮಾಡಿ. ಸಿಂಪಲ್ ಆಗಿ ಕೊಳಕು ಹೋಗುತ್ತೆ.
ಹೈಡ್ರೋಜನ್ ಪೆರಾಕ್ಸೈಡ್: ಹೈಡ್ರೋಜನ್ ಪೆರಾಕ್ಸೈಡ್ ಬಾತ್‌ರೂಮ್ ಟೈಲ್ಸ್ ಮೇಲೆ ಕೂತಿರೋ ಕೊಳಕನ್ನ ತೆಗಿಯುತ್ತೆ, ಕ್ರಿಮಿಗಳನ್ನ ಸಾಯಿಸುತ್ತೆ. ಇದು ಒಂದು ನ್ಯಾಚುರಲ್ ಬ್ಲೀಚ್. ಒಂದು ಸ್ಪ್ರೇ ಬಾಟಲಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ತುಂಬಿಸಿ ಬಾತ್‌ರೂಮ್ ಟೈಲ್ಸ್ ಮೇಲೆ ಸ್ಪ್ರೇ ಮಾಡಿ 20 ನಿಮಿಷ ಬಿಡಿ. ಆಮೇಲೆ ಬ್ರಷ್‌ನಿಂದ ಕ್ಲೀನ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.