ಪಾಲಕ್‌ನ ಒಂದು ಎಲೆಯೂ ಕೊಳೆಯದಂತೆ ಹೆಚ್ಚು ದಿನದವರೆಗೆ ಫ್ರೆಶ್ ಆಗಿರಬೇಕೆಂದ್ರೆ ಹೀಗೆ ಸಂಗ್ರಹಿಸಿ
How to store spinach: ಪಾಲಕ್ ರುಚಿಯಾಗಿರುವುದು ಮಾತ್ರವಲ್ಲದೆ, ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಆದರೆ ಇವುಗಳ ಶೆಲ್ಫ್ ಲೈಫ್ ಕಡಿಮೆ. ಆದ್ದರಿಂದ ಪಾಲಕ್ ಅನ್ನು ದೀರ್ಘಕಾಲದವರೆಗೆ ಹೇಗೆ ಸಂಗ್ರಹಿಸುವುದು ಎಂದು ನಾವಿಲ್ಲಿ ನೋಡೋಣ.

ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯ
ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿಯಂತೂ ಹಸಿರು ಎಲೆ ತರಕಾರಿಗಳು ಹೇರಳವಾಗಿ ಲಭ್ಯ. ಇವುಗಳಲ್ಲಿ ಪಾಲಕ್ ಕೂಡ ಒಂದು. ಇವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.
ದೀರ್ಘಕಾಲದವರೆಗೆ ಸಂಗ್ರಹಿಸುವುದು ಹೇಗೆ?
ಪಾಲಕ್ ರುಚಿಯಾಗಿರುವುದು ಮಾತ್ರವಲ್ಲದೆ, ಪೋಷಕಾಂಶಗಳಿಂದಲೂ ಸಮೃದ್ಧವಾಗಿದೆ. ಆದರೆ ಇವುಗಳ ಶೆಲ್ಫ್ ಲೈಫ್ ಕಡಿಮೆ. ಆದ್ದರಿಂದ ಪಾಲಕ್ ಅನ್ನು ದೀರ್ಘಕಾಲದವರೆಗೆ ಹೇಗೆ ಸಂಗ್ರಹಿಸುವುದು ಎಂದು ನಾವಿಲ್ಲಿ ನೋಡೋಣ.
ಕೊಳೆತ ಎಲೆ ತೆಗೆದುಹಾಕಿ
ಮಾರುಕಟ್ಟೆಯಿಂದ ತಂದಾಗ ಪಾಲಕ್ ಸೊಪ್ಪಿನ ಮಧ್ಯೆ ಹಾಳಾದ ಅಥವಾ ಕೊಳೆತ ಬೇರೆ ಎಲೆಗಳಿವೆ ಎಂದಿಟ್ಟುಕೊಳ್ಳಿ. ಹಾನಿಗೊಳಗಾದ ಎಲೆಯಿಂದಾಗಿ ಇತರ ಎಲೆಯೂ ಬೇಗನೆ ಹಾಳಾಗುತ್ತದೆ. ಆದ್ದರಿಂದ ಪಾಲಕ್ ಸೊಪ್ಪನ್ನು ಖರೀದಿಸಿದ ನಂತರ ಕಾಂಡ ಮತ್ತು ಹಾನಿಗೊಳಗಾದ ಎಲೆ ತೆಗೆದುಹಾಕಿ. ನಂತರ ನೀರನ್ನು ಒಣಗಿಸಿ ಸಂಗ್ರಹಿಸಿ.
ಅಡುಗೆ ಟವಲ್
ಪಾಲಕ್ ಸೊಪ್ಪನ್ನು ಹೆಚ್ಚು ಕಾಲ ತಾಜಾವಾಗಿಡಲು ನೀವು ಅಡುಗೆ ಟವಲ್ ಅನ್ನು ಸಹ ಬಳಸಬಹುದು. ಕಾಂಡಗಳನ್ನು ತೆಗೆದುಹಾಕಿದ ನಂತರ ಅದನ್ನು ಸಂಗ್ರಹಿಸಲು ಟವಲ್‌ನಲ್ಲಿ ಸುತ್ತಿ.
ನ್ಯೂಸ್ ಪೇಪರ್‌ನಲ್ಲಿ ಸುತ್ತಿ
ಅಂದಹಾಗೆ ಪಾಲಕ್ ಅನ್ನು ಟಿಶ್ಯೂ ಪೇಪರ್ ಅಥವಾ ವೃತ್ತಪತ್ರಿಕೆ (ನ್ಯೂಸ್ ಪೇಪರ್)ಯಲ್ಲಿ ಸುತ್ತುವುದರಿಂದಲೂ ಅದರ ಶೆಲ್ಫ್ ಲೈಫ್ ಹೆಚ್ಚಾಗುತ್ತದೆ. ಯಾವುದೇ ಹಾನಿಗೊಳಗಾದ ಕಾಂಡ ಮತ್ತು ಕೊಳೆತ ಎಲೆಗಳನ್ನು ತೆಗೆದುಹಾಕಿ. ನಂತರ ಅವುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ.
ಗಾಳಿಯಾಡದ ಪಾತ್ರೆ ಅಥವಾ ಡಬ್ಬಿ
ಪಾಲಕ್ ಸೊಪ್ಪನ್ನು ಶೇಖರಿಸಿಡಲು ಗಾಳಿಯಾಡದ ಪಾತ್ರೆ ಅಥವಾ ಡಬ್ಬಿ ಬಳಸಬಹುದು. ಪಾತ್ರೆಯ ಮೇಲೆ ಸ್ವಚ್ಛವಾದ ಬಟ್ಟೆಯನ್ನು ಹಾಕಿ ಪಾಲಕ್ ಸೊಪ್ಪನ್ನು ಶೇಖರಿಸಿಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

