- Home
- Entertainment
- News
- Amruthadhaare: ಕಳಚಿಬಿತ್ತು ಮುಖವಾಡ: ರೋಚಕ ತಿರುವಿನಲ್ಲಿ ಸೀರಿಯಲ್; ಅತ್ತೆ-ಸೊಸೆ ವಾರ್ ಶುರು!
Amruthadhaare: ಕಳಚಿಬಿತ್ತು ಮುಖವಾಡ: ರೋಚಕ ತಿರುವಿನಲ್ಲಿ ಸೀರಿಯಲ್; ಅತ್ತೆ-ಸೊಸೆ ವಾರ್ ಶುರು!
ಅಮೃತಧಾರೆ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಶಕುಂತಲಾ ಮುಖವಾಡ ಭೂಮಿಕಾ ಎದುರು ಕಳಚಿಬಿದ್ದಿದೆ. ಇದೀಗ ಅತ್ತೆ ಮತ್ತು ಸೊಸೆ ನಡುವೆ ನೇರಾನೇರ ವಾರ್ ಶುರುವಾಗಿದೆ. ಏನಿದು?

ರೋಚಕ ಹಂತದಲ್ಲಿ ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್ ಇದೀಗ ರೋಚಕ ಹಂತ ತಲುಪಿದೆ. ಶಕುಂತಲಾ ಅಷ್ಟೆಲ್ಲಾ ಕುತಂತ್ರ ಬುದ್ಧಿ ಮಾಡುತ್ತಿದ್ದರೂ ಬಹುತೇಕ ಎಲ್ಲಾ ಸೀರಿಯಲ್ಗಳಂತೆ ಇದರಲ್ಲಿಯೂ ನಾಯಕ ಪೆದ್ದುನೇ ಇದ್ದಾನೆ. ತನ್ನ ಚಿಕ್ಕಮ್ಮನನ್ನು ಬಲವಾಗಿ ನಂಬಿದ್ದಾನೆ. ಸೊಸೆ ಭೂಮಿಕಾಗೆ ಈ ಕುತಂತ್ರ ಬುದ್ಧಿ ಗೊತ್ತಿದ್ದರೂ ಪತಿಯನ್ನು ನಂಬಿಸೋದು ಕಷ್ಟವೇ ಆಗಿದೆ. ಏಕೆಂದರೆ ಏನೂ ಸಾಕ್ಷಿ ಸಿಗದ ರೀತಿಯಲ್ಲಿ ಶಕುಂತಲಾ ವರ್ತಿಸುತ್ತಿದ್ದಾಳೆ. ಭೂಮಿಕಾ ಕೂಡ ಬಲವಾದ ಸಾಕ್ಷಿಗಾಗಿ ಕಾಯುತ್ತಿದ್ದಳು.
ಶಕುಂತಲಾ ಮುಖವಾಡ ಬಯಲು
ಆದರೆ, ಇದೀಗ ಶಕುಂತಲಾ ಮುಖವಾಡ ಭೂಮಿಕಾ ಎದುರು ಬಯಲಾಗಿದೆ. ಭಾಗ್ಯಮ್ಮ ಶಕುಂತಲಾ ವಿಷಯವನ್ನು ಚಿತ್ರ ಬಿಡಿಸುವ ಮೂಲಕ ತೋರಿಸಿದ್ದಾಳೆ. ಮಗುವಿಗೆ ಶಕುಂತಲಾ ತೊಂದರೆ ಮಾಡುತ್ತಿದ್ದಾಳೆ ಎನ್ನುವುದು ಭೂಮಿಕಾಗೆ ಈಗ ತಿಳಿದಿದೆ. ಭಾಗ್ಯಳಿಗೆ ವಿಷಯ ತಿಳಿಯುತ್ತಿದ್ದಂತೆಯೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಕ್ಕೆ ಭೂಮಿಕಾ ತಡೆ ಒಡ್ಡಿದ್ದಳು. ಶಕುಂತಲಾ ಮಾತನ್ನು ಗೌತಮ್ ನಂಬಿಬಿಟ್ಟಿದ್ದ. ಆದರೆ ಅದನ್ನು ಭೂಮಿಕಾ ನಂಬದೇ ಭಾಗ್ಯಮ್ಮ ಪರವಾಗಿ ನಿಂತಿದ್ದಳು.
ಭಾಗ್ಯ ಹೇಳಿದ ಗುಟ್ಟು
ಕೊನೆಗೆ ಏನೋ ಎಡವಟ್ಟಾಗುತ್ತಿದೆ ಎಂದು ತಿಳಿಯುತ್ತಲೇ ಅವಳನ್ನು ತನ್ನ ತವರಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಚಿತ್ರಬಿಡಿಸುವ ಮೂಲಕ ಭಾಗ್ಯ ಶಕುಂತಲಾ ಗುಟ್ಟನ್ನು ರಟ್ಟು ಮಾಡಿದ್ದಾಳೆ. ಅದನ್ನು ಹೋಗಿ ಭೂಮಿಕಾ ಶಕುಂತಲಾಗೆ ಹೇಳಿದ್ದಾಳೆ. ಮೊದಲಿಗೆ ಇದನ್ನು ಶಕುಂತಲಾ ಒಪ್ಪದಿದ್ದರೂ ಕೊನೆಗೆ ಹೌದು ನಾನೇ ಎಲ್ಲಾ ಮಾಡ್ತಿರೋದು, ನಿನ್ನಿಂದ ಏನೂ ಮಾಡಲು ಆಗಲ್ಲ ಎಂದಿದ್ದಾಳೆ.
ಅತ್ತೆ- ಸೊಸೆ ಮಧ್ಯೆ ಅಸಲಿ ಆಟ ಶುರು!
ಈಗ ಅಸಲಿ ಆಟ ಶುರುವಾಯ್ತು, ನೋಡೋಣ ಎಂದು ಶಕುಂತಲಾಗೆ ಭೂಮಿಕಾ ಚಾಲೆಂಜ್ ಹಾಕಿದ್ದಾಳೆ. ಇಲ್ಲಿಯವರೆಗೆ ಅತ್ತೆಯ ಮೇಲೆ ಇದ್ದ ಸಂದೇಹವೆಲ್ಲವೂ ನಿಜವಾಗಿದೆ. ಇದರಿಂದ ಇದೀಗ ಸೀರಿಯಲ್ನಲ್ಲಿ ಮತ್ತಷ್ಟು ರೋಚಕ ಟ್ವಿಸ್ಟ್ ಸಿಗಲಿದೆ.
ಮತ್ತೊಂದು ಮಗುವಿನ ಸುದ್ದಿ ತಿಳಿಯತ್ತಾ?
ಆದರೆ ಇದರ ಮಧ್ಯೆಯೇ, ಶಕುಂತಲಾ ಎಲ್ಲಿ ಇನ್ನೊಂದು ಮಗುವಿನ ಸತ್ಯವನ್ನು ಬಾಯಿ ಬಿಡುತ್ತಾಳೋ ಎನ್ನುವ ಭಯ ವೀಕ್ಷಕರದ್ದು. ಶಕುಂತಲಾಗೆ ಅದು ದೊಡ್ಡ ಅಸ್ತ್ರವಾಗಿದೆ. ಅದನ್ನೇನಾದರೂ ಭೂಮಿಕಾ ಬಳಿ ಹೇಳಿದರೆ ದೊಡ್ಡ ಅವಾಂತರ ಆಗುವುದು ನಿಜವೇ. ಈ ವಿಷಯ ಏನಾದರೂ ಭೂಮಿಕಾಗೆ ಗೊತ್ತಾದರೆ, ಅವಳೂ ಕುಸಿದು ಹೋಗುತ್ತಾಳೆ. ಆ ಹಂತದಲ್ಲಿ ಶಕುಂತಲಾಗೆ ಜಯ ಆಗುವುದು ನಿಜ.
ಮಗುವಿನ ಸುದ್ದಿ ಹೇಳ್ತಾಳಾ ಶಕುಂತಲಾ?
ಆದರೆ, ಅದೇ ವೇಳೆ ಶಕುಂತಲಾನೇ ಈ ಕೆಲಸ ಮಾಡಿಸಿರುವುದು ಭಾಗ್ಯಮ್ಮನಿಗೆ ತಿಳಿದಿರುವುದರಿಂದ, ಸ್ವಲ್ಪ ಭಯ ಪಡುವ ಸಾಧ್ಯತೆಯೂ ಇದೆ. ಇದು ಗೌತಮ್ಗೆ ಶಕುಂತಲಾ ಕುತಂತ್ರ ಬಯಲಾಗಲು ಇರುವ ಕೊನೆಯ ಅಸ್ತ್ರ. ಹೀಗಾದರೆ ಗೌತಮ್ ಕೂಡ ತಿರುಗಿ ಬೀಳುತ್ತಾನೆ. ಆದ್ದರಿಂದ ಶಕುಂತಲಾ ಇದನ್ನು ಇಷ್ಟು ಬೇಗ ಹೇಳಲಾರಳು.
ಅತ್ತೆ- ಸೊಸೆ ಚಾಲೆಂಜ್
ಆದರೂ, ಇದೀಗ ಸೀರಿಯಲ್ಗೆ ಮತ್ತಷ್ಟು ರೋಚಕತೆ ಸಿಕ್ಕಿದೆ. ಇದಾಗಲೇ ಬಹಳಷ್ಟು ವೀಕ್ಷಕರ ಮನಸ್ಸನ್ನು ಗೆದ್ದಿರೋ ಅಮೃತಧಾರೆ, ಇನ್ನಷ್ಟು ಟಿಆರ್ಪಿ ಗಳಿಸುವುದರಲ್ಲಿ ಸಂಶಯವೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಅಷ್ಟಕ್ಕೂ ಇಂಥ ಅತ್ತೆ- ಸೊಸೆ ಚಾಲೆಂಜ್ಗಳು ಸಾಮಾನ್ಯವಾಗಿ ವೀಕ್ಷಕರಿಗೆ ಕುತೂಹಲ ಕೆರಳಿಸುವುದು ಇದ್ದೇ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

