MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • News
  • ಅಮೆರಿಕದ ಪೌರತ್ವದಿಂದ ಸಂಜಯ್ ಕಪೂರ್ ಪಾರ್ಥೀವ ಶರೀರ ಭಾರತಕ್ಕೆ ತರಲು ಕಾನೂನು ತೊಡಕು!

ಅಮೆರಿಕದ ಪೌರತ್ವದಿಂದ ಸಂಜಯ್ ಕಪೂರ್ ಪಾರ್ಥೀವ ಶರೀರ ಭಾರತಕ್ಕೆ ತರಲು ಕಾನೂನು ತೊಡಕು!

ಉದ್ಯಮಿ ಸಂಜಯ್ ಕಪೂರ್ ಪೋಲೋ ಪಂದ್ಯದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೇನುನೊಣ ನುಂಗಿದ್ದೇ ಸಾವಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಅಮೆರಿಕದ ಪೌರತ್ವ ಹೊಂದಿರುವ ಕಾರಣ ಅಂತ್ಯಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.

2 Min read
Author : Gowthami K
Published : Jun 14 2025, 09:34 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : instagram

ಇಂಗ್ಲೆಂಡ್‌ನಲ್ಲಿ ನಡೆದ ಪೋಲೋ ಪಂದ್ಯಾವಳಿಯ ವೇಳೆ ಉದ್ಯಮಿ ಸಂಜಯ್ ಕಪೂರ್ ಅವರು ಹೃದಯಾಘಾತವಾಗಿ ಮೃತಪಟ್ಟಿದ್ದು, ಉದ್ಯಮ ಕ್ಷೇತ್ರ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ಶಾಕಿಂಗ್ ಸುದ್ದಿಯಾಗಿದೆ. ಇದೀಗ ಅವರು ಅಮೆರಿಕದ ಪೌರತ್ವ ಪಡೆದಿರುವುದರಿಂದ ಅಂತ್ಯಕ್ರಿಯೆಗಳು ವಿಳಂಬವಾಗಬಹುದು ಎನ್ನಲಾಗಿದೆ. ಏಕೆಂದರೆ ಅವರ ಅಂತ್ಯಕ್ರಿಯೆಯನ್ನು ತಾಯಿನಾಡದ ಭಾರತದಲ್ಲಿ ಮಾಡಲು ಕುಟುಂಬ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುತ್ತದೆ ಎಂದು ತಿಳಿದುಬಂದಿದೆ. ಇಂಟರ್ನೆಟ್‌ ದಾಖಲಾಗಿರುವ ಕೆಲವು ಮಾಹಿತಿಗಳ ಪ್ರಕಾರ, ಪ್ರಜ್ಞೆ ತಪ್ಪುವ ಮೊದಲು ಅವರು "ನಾನು ಏನನ್ನೋ ನುಂಗಿದ್ದೇನೆ" ಎಂದು ಹೇಳಿದ್ದು, ಆಕಸ್ಮಿಕವಾಗಿ ಜೇನುನೊಣವನ್ನು ನುಂಗಿರುವ ಶಂಕೆ ವ್ಯಕ್ತವಾಗಿದೆ. ಇದೇ ಅವರು ಹೃದಯಾಘಾತಕ್ಕೀಡಾಗುವ ಅಸಾಮಾನ್ಯ ಕಾರಣವಾಗಿರಬಹುದು ಎನ್ನಲಾಗಿದೆ.

25
Image Credit : instagram

ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಆದರೆ ಅವರು ಅಮೆರಿಕದ ಪೌರತ್ವ ಹೊಂದಿದ್ದ ಕಾರಣ, ಮತ್ತು ಲಂಡನ್‌ನಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ, ಅವರ ಶವವನ್ನು ಭಾರತಕ್ಕೆ ತರುವ ಕಾನೂನು ಪ್ರಕ್ರಿಯೆ ಸ್ವಲ್ಪ ಜಟಿಲವಾಗಿದೆ. ಈ ಕಾರಣದಿಂದ ಅಂತಿಮ ವಿಧಿವಿಧಾನಗಳಲ್ಲಿ ವಿಳಂಬ ಸಂಭವಿಸಬಹುದು ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.  ಸಂಜಯ್ ಕಪೂರ್ ಅವರ ಶಾಕಿಂಗ್ ನಿಧನದ ಸುದ್ದಿ ಅವರು ಸಂಬಂಧ ಹೊಂದಿದ್ದ ವ್ಯಾಪಾರ ಹಾಗೂ ಸಾಮಾಜಿಕ ವಲಯಗಳಲ್ಲಿಂದು ಆಘಾತ ಉಂಟುಮಾಡಿದೆ. ಭಾರತದಲ್ಲಿ ಆಟೋ ಕಾಂಪೊನೆಂಟ್ ತಯಾರಿಕಾ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆವಾದ ಸೋನಾ ಕಾಮ್‌ಸ್ಟಾರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದ ಅವರು, ಪೋಲೋ ಮತ್ತು ಮೋಟಾರ್‌ಸ್ಪೋರ್ಟ್ಸ್‌ಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಪ್ರಸಿದ್ಧ ಕ್ರೀಡಾರ್ಥಿಯಾಗಿ ಹೆಸರಾಗಿದ್ದರು.

Related Articles

Related image1
Sunjay Kapur Death: ಕರೀಷ್ಮಾಳ ಮಾಜಿ ಪತಿ ಸಂಜಯ್ ಜೀವ ತೆಗೆದ ಜೇನುನೊಣ! ಅಷ್ಟಕ್ಕೂ ಪೊಲೋ ಆಡುತ್ತಿದ್ದಾಗ ನಡೆದಿದ್ದೇನು?
Related image2
ಜೇನು ನೊಣದಿಂದ ಮೃತಪಟ್ಟ ಸಂಜಯ್ ಕಪೂರ್‌ಗೆ ಫ್ಯಾಷನ್ ಜಗತ್ತಿನ 3 ಪತ್ನಿಯರು, ಕರೀಷ್ಮಾ ಎರಡನೇ ಪತ್ನಿ!
35
Image Credit : instagram

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಪಂದ್ಯಾವಳಿಯ ಸಂದರ್ಭದಲ್ಲಿ ಹಾಜರಿದ್ದವರು ಸಂಜಯ್ ಕಪೂರ್ ಅವರು ಹೃದಯಾಘಾತಕ್ಕೆ ಒಳಗಾಗುವ ಮೊದಲು "ನಾನು ಏನನ್ನಾದರೂ ನುಂಗಿದ್ದೇನೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ ಎಂಬುದನ್ನು ನೆನಪಿಸಿದ್ದಾರೆ. ಜನಪ್ರಿಯ ವ್ಯಾಪಾರ ತಜ್ಞ ಸುಹೇಲ್ ಸೇಠ್ ಕೂಡ ANI ಗೆ ನೀಡಿದ ಹೇಳಿಕೆಯಲ್ಲಿ, "ಪೋಲೋ ಪಂದ್ಯಾವಳಿಯ ವೇಳೆಯಲ್ಲಿ ಅವರು ಜೇನುನೊಣವನ್ನು ನುಂಗಿದ ನಂತರ ಹೃದಯಾಘಾತದಿಂದ ಮೃತರಾಗಿದ್ದಾರೆ" ಎಂದು ತಿಳಿಸಿದ್ದಾರೆ. ಈ ಮಾಹಿತಿಯಿಂದ, ಅವರು ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ಬಾಯಿಗೆ ಜೇನುನೊಣ ಹಾರಿಹೋಗಿರಬಹುದು ಎಂಬ ಅನೇಕರ ನಂಬಿಕೆ ನಿಜ ಎನಿಸಿದಂತಿದೆ.

45
Image Credit : instagram

ಪ್ರಸ್ತುತ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ದಾಖಲೆಗಳ ಕೆಲಸ ಪೂರ್ಣಗೊಂಡ ನಂತರ, ಅಂತಿಮ ವಿಧಿವಿಧಾನಗಳಿಗಾಗಿ ಶವವನ್ನು ಭಾರತಕ್ಕೆ ತರಲಾಗುವುದು" ಎಂದು ಸುಂಜಯ್ ಅವರ ಮಾವ ಅಶೋಕ್ ಸಚ್‌ದೇವ್ ಹೇಳಿದ್ದಾರೆ. ಅದಾಗಲೇ ಎರಡು ಮದುವೆಯಾಗಿದ್ದ ಸಂಜಯ್ ವಿಚ್ಚೇದನದ ಬಳಿಕ ಮೂರನೇ ಪತ್ನಿಯಾಗಿ ಉದ್ಯಮಿ ಪ್ರಿಯಾ ಸಚ್‌ದೇವ್ ಅವರನ್ನು ಮದುವೆಯಾದರು. ದೆಹಲಿಯಲ್ಲಿ ಇವರ ಮದುವೆ ನಡೆದಿತ್ತು ಇದಕ್ಕೂ ಮುನ್ನ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಈ ದಂಪತಿಗೆ ಅಜಾರಿಯಾಸ್ ಕಪೂರ್ ಎಂಬ ಮಗನಿದ್ದಾನೆ. ಪ್ರಿಯಾಗೆ ಹಿಂದಿನ ಮದುವೆಯಿಂದ ಒಬ್ಬ ಮಗಳೂ ಇದ್ದಾಳೆ.

55
Image Credit : Asianet News

ಕರಿಷ್ಮಾ ಕಪೂರ್ ಅವರನ್ನು ವಿವಾಹವಾಗುವ ಮೊದಲು, ಸಂಜಯ್ ಕಪೂರ್ ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ ಅವರನ್ನು ವಿವಾಹವಾಗಿದ್ದರು. ನಂದಿತಾ ಮಹ್ತಾನಿ ರಣಬೀರ್ ಕಪೂರ್ ಅವರೊಂದಿಗಿನ ಹಿಂದಿನ ಸಂಬಂಧ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಸ್ಟೈಲಿಸ್ಟ್ ಆಗಿ ಹೆಸರುವಾಸಿಯಾಗಿದ್ದಾರೆ. ಕರಿಷ್ಮಾ ಕಪೂರ್ ಎರಡನೇ ಪತ್ನಿಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಹೀಗೆ ಸಂಜಯ್ ಒಟ್ಟು ಮೂರು ಮಕ್ಕಳ ತಂದೆಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್
ಮನರಂಜನಾ ಸುದ್ದಿ
ಸುದ್ದಿ

Latest Videos
Recommended Stories
Recommended image1
ಫ್ರೀ ಆಗಿ ಸಿನಿಮಾ ನೋಡಿ / ಯಾವ ನಾಯಿಗೆ ಬೇಕೋ ನಿನ್ನ ಟಿಕೆಟ್...! ಬೈಕೊಂಡಾದರೂ‌ 'ವಲವಾರ' ನೋಡಿ; ವೀರಕಪುತ್ರ ಶ್ರೀನಿವಾಸ್
Recommended image2
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ 'ಯಾರಿಗೆ ಗೊತ್ತು' ಅನ್ನೋದು ಹೇಳಿದ ಕತ್ರಿನಾ ಕೈಫ್!
Recommended image3
Sa Re Ga Ma Pa Kannada Show 2026: ಮಕ್ಕಳಿಗೋಸ್ಕರ ಸಿಂಗಿಂಗ್‌ ಶೋ ಆಡಿಷನ್‌; ಯಾವಾಗ? ಎಲ್ಲಿ?
Related Stories
Recommended image1
Sunjay Kapur Death: ಕರೀಷ್ಮಾಳ ಮಾಜಿ ಪತಿ ಸಂಜಯ್ ಜೀವ ತೆಗೆದ ಜೇನುನೊಣ! ಅಷ್ಟಕ್ಕೂ ಪೊಲೋ ಆಡುತ್ತಿದ್ದಾಗ ನಡೆದಿದ್ದೇನು?
Recommended image2
ಜೇನು ನೊಣದಿಂದ ಮೃತಪಟ್ಟ ಸಂಜಯ್ ಕಪೂರ್‌ಗೆ ಫ್ಯಾಷನ್ ಜಗತ್ತಿನ 3 ಪತ್ನಿಯರು, ಕರೀಷ್ಮಾ ಎರಡನೇ ಪತ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved