MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಸಿನಿಮಾ ಫೋಟೋ: ಹೆಣ್ಣಿನ ಬಗ್ಗೆ ಕಾಂಗ್ರೆಸ್​ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut

ಸಿನಿಮಾ ಫೋಟೋ: ಹೆಣ್ಣಿನ ಬಗ್ಗೆ ಕಾಂಗ್ರೆಸ್​ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut

ಸಂಸದೆಯಾದ ಬಳಿಕ ಕಂಗನಾ ರಣಾವತ್, ತಮ್ಮ ಹಳೆಯ ಫೋಟೋ ಬಳಸಿ ಅಶ್ಲೀಲ ಕಮೆಂಟ್ ಮಾಡಿದ್ದ ಕಾಂಗ್ರೆಸ್ ವಕ್ತಾರರ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ್ದಾರೆ. ನಟಿಯಾಗಿ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ನನ್ನ ಧರ್ಮ ಎಂದ ಅವರು, ಈ ಕೀಳು ಮನಸ್ಥಿತಿಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

1 Min read
Author : Suchethana D
Published : Apr 17 2026, 07:28 PM IST
Share this Photo Gallery
  • FB
  • TW
  • Linkdin
  • Whatsapp
16
ಸಂಸದೆ ಕಂಗನಾ ರಣಾವತ್​
Image Credit : Asianet News

ಸಂಸದೆ ಕಂಗನಾ ರಣಾವತ್​

ನಟಿ ಕಂಗನಾ ರಣಾವತ್​ ಮೊದಲಿನಿಂದಲೂ ಮಾತಿಗೆ ನಿಂತರೆ ಎಂಥವರಿಗೂ ಕೇರೇ ಮಾಡಲ್ಲ. ಈಗ ಸಂಸದೆ. ಮತ್ತೆ ಕೇಳಬೇಕಾ? ಹಿಮಾಚಲ ಪ್ರದೇಶದಿಂದ ಮೊದಲ ಬಾರಿಗೆ ನಿಂತು ಭರ್ಜರಿ ಗೆಲುವು ಸಾಧಿಸಿದವರು ನಟಿ.

26
ಕಾಂಗ್ರೆಸ್​ ವಕ್ತಾರೆ ಪೋಸ್ಟ್​
Image Credit : Social Media

ಕಾಂಗ್ರೆಸ್​ ವಕ್ತಾರೆ ಪೋಸ್ಟ್​

ಕೆಲವೊಮ್ಮೆ ರಾಜಕೀಯದಲ್ಲಿಯಾಗಲೀ, ಬೇರೆ ಜೀವನದಲ್ಲಿ ಆಗಲೀ, ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲದಾಗ, ಅವರನ್ನು ಸೋಲಿಸುವುದು ಸುಲಭ ಅಲ್ಲ ಎಂದು ಎನ್ನಿಸಿದಾಗ ಏನೋ ಒಂದು ವಿಷಯ ಕೆದಕಿ ಕೆಟ್ಟದ್ದಾಗಿ ಮಾತನಾಡಿ ಸಮಾಧಾನ ಪಟ್ಟುಕೊಳ್ಳುವುದು ಮಾಮೂಲು. ಅದೇ ರೀತಿ, ನಟಿ ಕಂಗನಾ ಅವರ ವಿಷಯದಲ್ಲಿಯೂ ಆಗಿದೆ.

Related Articles

Related image1
ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು
Related image2
'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ: Video Viral
36
ಫೋಟೋ ಹಾಕಿ ಕಮೆಂಟ್​
Image Credit : Getty

ಫೋಟೋ ಹಾಕಿ ಕಮೆಂಟ್​

ನಟಿಯಾಗಿರುವ ಕಂಗನಾ, ಟೂ ಪೀಸ್​ನಿಂದ ಹಿಡಿದು ಝಾನ್ಸಿ ರಾಣಿಯವರೆಗೂ ಡ್ರೆಸ್​ ಮಾಡಿಕೊಂಡವರು, ನ್ಯಾಷನಲ್​ ಅವಾರ್ಡ್​ ಗೆದ್ದವರು. ಆದರೆ ಅವರ ತುಂಡುಡುಗೆಯ ಫೋಟೋ ಶೇರ್ ಮಾಡಿಕೊಂಡು ಮಂಡಿಯ (ಕಂಗನಾ ಗೆದ್ದ ಪ್ರದೇಶ) ಜನ ಎಷ್ಟಕ್ಕೆ ಸಿಗುತ್ತಾರೆ ಎಂದು ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನಾಥ್​ (Supriya Srinath) ಪೋಸ್ಟ್​ ಹಾಕಿದ್ದರು.

46
ಸಂಸತ್ತಿನಲ್ಲಿ ಗುಡುಗಿದ ಕಂಗನಾ
Image Credit : instagram

ಸಂಸತ್ತಿನಲ್ಲಿ ಗುಡುಗಿದ ಕಂಗನಾ

ಅದರ ಬಗ್ಗೆ ಸಂಸತ್ತಿನಲ್ಲಿ ಗುಡುಗಿದ್ದಾರೆ ನಟಿ ಕಂಗನಾ. ನಾನು 2014ರಲ್ಲಿ ಚುನಾವಣೆ ನಿಂತಾಗ ಇಂಥದ್ದೊಂದು ಫೋಟೋ ಹಾಕಿ ನನ್ನನ್ನು ಟೀಕಿಸಲಾಗಿತ್ತು. ನಾನೊಬ್ಬ ನಟಿ. ಎಲ್ಲಾ ರೀತಿಯ ಡ್ರೆಸ್​ಗಳನ್ನು ಹಾಕುತ್ತೇನೆ. ಇತಿಹಾಸಕಾರರ ರೋಲ್​ಗಳನ್ನೂ ಮಾಡಿದ್ದೇನೆ, ಸೆ*ಕ್ಸ್ workers, ಫ್ಯಾಷನ್​ ಡ್ರಗ್​ ಎಡಿಕ್ಟ್​ ರೋಲ್​ನಿಂದ ಹಿಡಿದು ಎಲ್ಲಾ ರೀತಿಯ ಪಾತ್ರ ಮಾಡಿದ್ದೇನೆ. ​

56
ನಟಿಯಾಗಿ ಧರ್ಮ ಪಾಲನೆ
Image Credit : instagram

ನಟಿಯಾಗಿ ಧರ್ಮ ಪಾಲನೆ

ಒಂದು ನಟಿಯಾಗಿ ನನ್ನ ಧರ್ಮ ನಾನು ಪಾಲಿಸಿದ್ದೇನೆ. ಆದರೆ ಯಾವುದೋ ಒಂದು ಸಿನಿಮಾದ ಯಾವುದೋ ಒಂದು ರೋಲ್​ನ ಫೋಟೋ ಹಾಕಿಕೊಂಡು ಕಾಂಗ್ರೆಸ್​ನ ವಕ್ತಾರೆ ಈ ಅಶ್ಲೀಲ ಕಮೆಂಟ್​ ಹಾಕಿದ್ದು, ಇಡೀ ಮಂಡಿ ಮಹಿಳೆಯರನ್ನು ಅವಮಾನಿಸಿದ್ದಾರೆ.

66
ಕಾಂಗ್ರೆಸ್ಸಿಗರ ಕೀಳು ಮನಸ್ಥಿತಿ
Image Credit : instagram

ಕಾಂಗ್ರೆಸ್ಸಿಗರ ಕೀಳು ಮನಸ್ಥಿತಿ

ಮಂಡಿ ಎನ್ನುವುದು ಸಾಧಾರಣ ಸ್ಥಳವಲ್ಲ, ಅಲ್ಲಿ ಮಾಂಡವ ಋಷಿ ತಪಸ್ಸು ಮಾಡಿದ್ದರಿಂದ ಮಂಡಿ ಎಂದು ಹೆಸರು ಬಂದಿದೆ. ಇಂಥ ಮಂಡಿ ಕ್ಷೇತ್ರದ ಬಗ್ಗೆ, ಅಲ್ಲಿರುವ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ಅಶ್ಲೀಲವಾಗಿ ಮಾತನಾಡಲಾಗಿದೆ ಎಂದು ನಟಿ ಕಂಗನಾ ಗುಡುಗಿದ್ದಾರೆ. ಕಾಂಗ್ರೆಸ್ಸಿಗರ ಈ ಕೀಳು ಮನಸ್ಥಿತಿಯಿಂದಲೇ ಅಲ್ಲಿ ಅವರು ಸೋತು, ನಾನು ಗೆಲುವು ಸಾಧಿಸಿದೆ ಎಂದಿದ್ದಾರೆ ನಟಿ. ಹಳೆಯ ವಿಡಿಯೋ ಮತ್ತೀಗ ವೈರಲ್​ ಆಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ರಾಜಕೀಯ ಸುದ್ದಿ
ಕಂಗನಾ ರಣಾವತ್
ಬಿಜೆಪಿ
ಬಾಲಿವುಡ್
ನಟಿ
ಕಾಂಗ್ರೆಸ್

Latest Videos
Recommended Stories
Recommended image1
ವಿನಯ್ ಕುಲಕರ್ಣಿ ಶಿಕ್ಷೆ ಹಿಂದಿದೆ ಬಿಜೆಪಿ 'ಒಳಸಂಚು': ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ
Recommended image2
ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು
Recommended image3
'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ: Video Viral
Related Stories
Recommended image1
ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು
Recommended image2
'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ: Video Viral
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved