MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು: ವೀಡಿಯೋ

ತನ್ನನ್ನು ಅಮ್ಮನಂತೆ ಆರೈಕೆ ಮಾಡಿದ್ದ ಕೆಲಸದಾಕೆಯ ನೋಡಿ ಭಾವುಕಳಾದ ವಧು: ವೀಡಿಯೋ

ತನ್ನ ಮದುವೆಯ ದಿನ, ಬಾಲ್ಯದಿಂದ ತನ್ನನ್ನು ಸಾಕಿ ಬೆಳೆಸಿದ ಆಯಾ ಬಂದಿದ್ದನ್ನು ಕಂಡು ವಧುವೊಬ್ಬಳು ಭಾವುಕಳಾಗುತ್ತಾಳೆ. 'ಅಮ್ಮ' ಎಂದು ಕರೆಯುತ್ತಾ ಆಕೆಯನ್ನು ಅಪ್ಪಿ ಅಳುವ ವಧು ಮತ್ತು ಅವಳನ್ನು ಸಮಾಧಾನಿಸುವ ಆಯಾಳ ಈ ಭಾವನಾತ್ಮಕ ವಿಡಿಯೋ  ವೈರಲ್ ಆಗಿದೆ.

2 Min read
Author : Anusha Kb
Published : Feb 12 2026, 12:22 PM IST
Share this Photo Gallery
  • FB
  • TW
  • Linkdin
  • Whatsapp
15
ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಮದುವೆ
Image Credit : Instagram

ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಮದುವೆ

ಅನೇಕ ಶ್ರೀಮಂತ ಕುಟುಂಬಗಳಲ್ಲಿ ಪುಟ್ಟ ಮಕ್ಕಳು ಅಪ್ಪ ಅಮ್ಮನಿಗಿಂತ ಹೆಚ್ಚು ಆ ಮನೆಯ ಕೆಲಸದಾಳುಗಳ ಮೇಲೆ ಅವಲಂಬಿತರಾಗಿರುತ್ತಾರೆ. ಮಕ್ಕಳ ಪೋಷಕರು ಉದ್ಯೋಗ ಉದ್ಯಮ ಎಂದು ಮಕ್ಕಳನ್ನು ತಮ್ಮ ನಂಬಿಕಸ್ಥ ಕೆಲಸದಾಳುಗಳು ಅಥವಾ ಮಕ್ಕಳ ನೋಡಿಕೊಳ್ಳುವ ಆಯಾಗಳೊಂದಿಗೆ ಬಿಟ್ಟು ಹೊರಟು ಹೋಗುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಿಗೆ ತಮ್ಮನ್ನು ನೋಡಿಕೊಳ್ಳುವ ಆಯಾಗಳೆಂದರೆ ತಮ್ಮನ್ನು ಹೆತ್ತ ತಾಯಿಗಿಂತಲೂ ಹೆಚ್ಚು. ಅವರು ಆ ಮನೆಕೆಲಸದಾಕೆಯೊಂದಿಗೆ ಬಹಳ ತೀವ್ರವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುತ್ತಾರೆ.

25
ತನ್ನ ಆರೈಕೆ ಮಾಡಿದ್ದ ಆಯಾಳನ್ನು ನೋಡಿ ಭಾವುಕಳಾದ ವಧು
Image Credit : Instagram

ತನ್ನ ಆರೈಕೆ ಮಾಡಿದ್ದ ಆಯಾಳನ್ನು ನೋಡಿ ಭಾವುಕಳಾದ ವಧು

ತಮ್ಮ ಭಾವನೆಗಳಿಗೆ ಸದಾ ಸ್ಪಂದಿಸುವ ತಾವು ಕೇಳಿದ್ದನ್ನೆಲ್ಲಾ ಮಾಡಿ ಕೊಡುವ ತಮ್ಮ ಜೊತೆ ಮಾತನಾಡುವ ಆಟವಾಡುವ ಹೀಗೆ ತಮ್ಮ ಆರೈಕೆ ಮಾಡುತ್ತಲೇ ವೃದ್ಧಾಪ್ಯಕ್ಕೆ ಕಾಲಿಡುವ ಆ ಆಯಾಗಳ ಮೇಲೆ ಮಕ್ಕಳಿಗೆ ತಾವು ಬೆಳೆದು ದೊಡ್ಡವರಾದರು ವಿಶೇಷವಾದ ಪ್ರೀತಿ ಇರುತ್ತದೆ. ತಾವು ದೊಡ್ಡವರಾಗುತ್ತಿದ್ದಂತೆ ಅವರು ಮನೆ ಬಿಟ್ಟು ಹೋದರು ಅವರನ್ನು ಕಂಡಾಗ ಮಕ್ಕಳಿಗೆ ಆಗುವ ಭಾವುಕತೆ ಅಷ್ಟಿಷ್ಟಲ್ಲ.

ಇದನ್ನೂ ಓದಿ:  ಹೇಳಿದ್ದಕ್ಕಿಂತ ಜಾಸ್ತಿ ಕೂದಲು ಕತ್ತರಿಸಿದ ಸಲೂನ್ :ಕೋರ್ಟ್ ಮೆಟ್ಟಿಲೇರಿ 25 ಲಕ್ಷ ಪರಿಹಾರ ಪಡೆದ ಯುವತಿ

Related Articles

Related image1
ಫ್ಯಾನ್ಸ್‌ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ! ಆ ಪತ್ರದಲ್ಲೇನಿದೆ? ಎಲ್ಲರ ಚಿತ್ತ ಬಿಲ್ಲ ರಂಗ ಭಾಷ ಚಿತ್ರದತ್ತ!
Related image2
ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ
35
ತಬ್ಬಿ ಹಿಡಿದು ಅತ್ತ ವಧು
Image Credit : Instagram

ತಬ್ಬಿ ಹಿಡಿದು ಅತ್ತ ವಧು

ಅದೇ ರೀತಿ ಇಲ್ಲೊಬ್ಬಳು ಹುಡುಗಿ ತನ್ನ ವಿಶೇಷ ದಿನವಾದ ತನ್ನ ಮದುವೆ ದಿನ ತನ್ನನ್ನು ಬಾಲ್ಯದಿಂದ ಸಾಕಿ ಬೆಳೆಸಿದ ಆಯಾ ತನ್ನ ಮದುವೆ ದಿನ ಬಂದಿದ್ದನ್ನು ನೋಡಿ ತೀವ್ರವಾಗಿ ಭಾವುಕಳಾಗಿದ್ದು, ಈ ಭಾವನಾತ್ಮಕ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗ್ತಿದೆ. ತನ್ನ ಅಜ್ಜಿಯಂತೆ ಪ್ರೀತಿ ಮಾಡುವ ಆ ಮನೆ ಕೆಲಸದಾಕೆಯನ್ನು ನೋಡಿ ಅಕ್ಷರಶಃ ಆ ವಧು ಮಗುವಿನಂತೆ ಅತ್ತೇ ಬಿಟ್ಟಿದ್ದಾಳೆ.

ಇದನ್ನೂ ಓದಿ: 

ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧರಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ

45
ನಿಮಗಾಗಿಯೇ ಕಾಯುತ್ತಿದ್ದೆ
Image Credit : Instagram

ನಿಮಗಾಗಿಯೇ ಕಾಯುತ್ತಿದ್ದೆ

ತನ್ನ ಆಯಾಳನ್ನು ನೋಡಿ ನಿಮಗಾಗಿಯೇ ನಾನು ಕಾಯುತ್ತಿದೆ. ನೀವು ಬರುವುದಿಲ್ಲವೇನೋ ಎಂದು ಭಾವಿಸಿದೆ. ಹೇಗಿದ್ದೀರಿ ನಾನು ಮದುವೆಯಾಗುತ್ತಿದ್ದೀನಿ ನೋಡಿ ಅಮ್ಮ ಎಂದು ವಧು ಆಯಾಳನ್ನು ಅಮ್ಮ ಎಂದು ಸಂಬೋಧಿಸಿಯೇ ಮಾತನಾಡಿಸಿದ್ದಾರೆ. ಈ ವೇಳೆ ಆ ವಯಸ್ಸಾಗಿರುವ ಆಯಾ ಆಕೆಯನ್ನು ಸಮಾಧಾನಿಸುತ್ತಾ ಅಳಬೇಡ ಸದಾ ಖುಷಿಯಾಗಿರು ಎಂದು ಆಕೆಯ ಕಣ್ಣೀರು ಒರೆಸಿದ್ದಾರೆ. ಜೊತೆಗೆ ಆಕೆಯ ಜೊತೆಗೆ ಕುಳಿತು ಆಕೆಗೆ ಸಿಹಿ ತಿನಿಸಿದ್ದಾರೆ.

ಇದನ್ನೂ ಓದಿ: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ: ಹಾಸ್ಯನಟನ ಉದಾರತೆ ತೆರೆದಿಟ್ಟ ಗೆಳೆಯ ನವಾಜುದ್ದೀನ್ ಸಿದ್ಧಿಕಿ

55
ವೀಡಿಯೋ ನೋಡಿ ನೆಟ್ಟಿಗರು ಭಾವುಕ
Image Credit : instagram

ವೀಡಿಯೋ ನೋಡಿ ನೆಟ್ಟಿಗರು ಭಾವುಕ

ಈ ವೀಡಿಯೋ ನೋಡಿ ಅನೇಕರು ಭಾವುಕರಾಗಿದ್ದಾರೆ. ಈಕೆ ನಮ್ಮನ್ನು ಅಳುವಂತೆ ಮಾಡಿದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು ಈ ಹುಡುಗಿಗೆ ಒಳ್ಳೆಯ ಸಂಸ್ಕಾರವಿದೆ ಶುಭವಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನಾವು ಕೂಡ ಭಾವುಕರಾದೆವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Times Now (@timesnow)

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಸಂಬಂಧಗಳು
ಮದುವೆ
ವೈರಲ್ ವಿಡಿಯೋ

Latest Videos
Recommended Stories
Recommended image1
ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ
Recommended image2
ಅಣ್ಣನ ಎದುರೇ ಶ್ರೀದೇವಿ ಬಗ್ಗೆ ಅಷ್ಟೆಲ್ಲಾ ಹೇಳಿದ್ರು ಅನಿಲ್ ಕಪೂರ್; ಪ್ರತಿಬಾರಿ ಸಿಕ್ಕಾಗ ಅತ್ತಿಗೆ ಕಾಲಿಗೆ ನಮಸ್ಕಾರ ಮಾಡಿದ್ದು ಏಕೆ?
Recommended image3
70 ವರ್ಷದ ಗೂಗಲ್‌ ಮಾಜಿ ಸಿಇಒಗೆ 27 ವರ್ಷದ ಮಾಡೆಲ್‌ ಪ್ರೇಯಸಿ!
Related Stories
Recommended image1
ಫ್ಯಾನ್ಸ್‌ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ! ಆ ಪತ್ರದಲ್ಲೇನಿದೆ? ಎಲ್ಲರ ಚಿತ್ತ ಬಿಲ್ಲ ರಂಗ ಭಾಷ ಚಿತ್ರದತ್ತ!
Recommended image2
ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಅಪ್ಪ ಕ್ಯಾಪ್ಟನ್ ಸುಮಿತ್ ಕಪೂರ್ ಸ್ಮರಿಸಿ ಮಗಳ ಭಾವುಕ ಬರಹ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved