MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಡಿವೋರ್ಸ್‌ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ

ಡಿವೋರ್ಸ್‌ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ

ಭೋಪಾಲ್‌ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಗಂಡನ ಪ್ರೇಯಸಿಯಿಂದ 1.5 ಕೋಟಿ ಮೌಲ್ಯದ ಪರಿಹಾರ ಪಡೆದು ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದಾರೆ. ನಿರಂತರ ಕೌಟುಂಬಿಕ ಕಲಹದ ನಂತರ, ಮಕ್ಕಳ ಭವಿಷ್ಯಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಈ ವಿಚಿತ್ರ ಪ್ರಕರಣ 90ರ ದಶಕದ ಜುದಾಯಿ ಸಿನಿಮಾವನ್ನು ಹೋಲುತ್ತಿದೆ.

2 Min read
Author : Anusha Kb
Published : Feb 16 2026, 07:24 PM IST
Share this Photo Gallery
  • FB
  • TW
  • Linkdin
  • Whatsapp
16
ಹಿಂದಿಯ ಜುದಾಯಿ ಸಿನಿಮಾ ಕತೆ ಹೋಲುವ ಡಿವೋರ್ಸ್‌ ಪ್ರಕರಣ
Image Credit : instagram

ಹಿಂದಿಯ ಜುದಾಯಿ ಸಿನಿಮಾ ಕತೆ ಹೋಲುವ ಡಿವೋರ್ಸ್‌ ಪ್ರಕರಣ

ಭೋಪಾಲ್: ಶ್ರೀ ದೇವಿ, ಅನಿಲ್ ಕಪೂರ್ ಮತ್ತು ಊರ್ಮಿಳಾ ಮಾತೋಂಡ್ಕರ್ ಅಭಿನಯದ 90 ರ ದಶಕದ ಪ್ರಸಿದ್ಧ ಚಲನಚಿತ್ರ ಜುದಾಯಿ ಸಿನಿಮಾವನ್ನು ನೀವು ನೋಡಿದ್ದೀರಾ? ಇದೇ ಸಿನಿಮಾದ ಕತೆಯನ್ನೇ ಹೋಲುವ ಘಟನೆಯೊಂದು ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಹೌದು ಇಲ್ಲಿ ನಿರಂತರ ಕೌಟುಂಬಿಕ ಕಲಹದ ನಂತರ ಇಬ್ಬರು ಹೆಣ್ಣು ಮಕ್ಕಳ ತಾಯಿ, ತನ್ನ ಗಂಡನ ಪ್ರೇಯಸಿಯಿಂದ 1.5 ಕೋಟಿ ಹಣ ಪಡೆದು ಗಂಡನನ್ನು ಆಕೆಗೆ ಒಪ್ಪಿಸಿದ ಘಟನೆ ನಡೆಯಿತು. ಈ ಸಿನಿಮಾದ ಕನ್ನಡ ರಿಮೇಕ್‌ನಲ್ಲಿ ಶಿವರಾಜ್‌ಕುಮಾರ್ ಮಾಲಾಶ್ರೀ, ರವೀಂದರ್ ಮನ್ ನಟಿಸಿದ್ದಾರೆ. ಮೂಲತಃ ಈ ಸಿನಿಮಾವೂ ತೆಲುಗಿನ 1994ರ ಶುಭಲಗ್ನಂ ಸಿನಿಮಾದಾಗಿದ್ದು, ಇದು ಮುಂದೆ ಭಾರತದ ಹಲವು ಭಾಷೆಗಳಿಗೆ ರಿಮೇಕ್ ಆಯ್ತು.

26
54 ವರ್ಷದ ಮಹಿಳೆಗೆ 42 ವರ್ಷದ ವಿವಾಹಿತನ ಮೇಲೆ ಪ್ರೀತಿ
Image Credit : our own

54 ವರ್ಷದ ಮಹಿಳೆಗೆ 42 ವರ್ಷದ ವಿವಾಹಿತನ ಮೇಲೆ ಪ್ರೀತಿ

ಹೌದು ಭೋಪಾಲ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಿತ್ರ ಡಿವೋರ್ಸ್ ಪ್ರಕರಣವೊಂದು ನಡೆದಿದೆ. ಹಾಗಿದ್ರೆ ಏನಿದು ಪ್ರಕರಣ ನೋಡೋಣ ಬನ್ನಿ 54 ವರ್ಷದ ಕೇಂದ್ರ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರು ಅದೇ ಇಲಾಖೆಯಲ್ಲಿದ್ದ ತಮಗಿಂತ ಕಿರಿಯ 42 ವರ್ಷದ ವಿವಾಹಿತ ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದರು. ಕಾಲಾನಂತರದಲ್ಲಿ, ಅವರ ಸಂಬಂಧವು ಮತ್ತಷ್ಟು ಆತ್ಮೀಯತೆಗೆ ತಿರುಗಿದ್ದು, ಇದು ಈಗಾಗಲೇ ಮದುವೆಯಾಗಿದ್ದ 42 ವರ್ಷದ ವ್ಯಕ್ತಿಯ ದಾಂಪತ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು.

Related Articles

Related image1
ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ: ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ
Related image2
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಉದ್ಯೋಗಿ ಇಮೇಲ್‌ಗೆ ಮ್ಯಾನೇಜರ್ ಮಾಡಿದ್ದೇನು?
36
ನ್ಯಾಯಾಲಯದ ಮೆಟ್ಟಿಲೇರಿದ್ದ ಪುತ್ರಿ
Image Credit : ChatGPT

ನ್ಯಾಯಾಲಯದ ಮೆಟ್ಟಿಲೇರಿದ್ದ ಪುತ್ರಿ

ಆ 42 ವರ್ಷದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, 16 ಹಾಗೂ 12 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದರು. ಅಪ್ಪನ ಈ ಪ್ರೇಮ ಸಂಬಂಧದಿಂದ ಪೋಷಕರ ದಾಂಪತ್ಯದಲ್ಲಿ ಉಂಟಾಗುತ್ತಿದ್ದ ಕಲಹದಿಂದ ಆ ಮಕ್ಕಳ ಮೇಲೂ ಅದು ತೀವ್ರ ಪರಿಣಾಮ ಬೀರಲು ಪ್ರಾರಂಭಿಸಿತು. ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಹಿರಿಯ ಮಗಳು ಬಗ್ಗೆ ಯಾವುದಾದರು ಒಂದು ನಿರ್ಧಾರಕ್ಕೆ ಬರುವುದಕ್ಕೆ ಒತ್ತಾಯಿಸಿ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದಳು. ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಭೋಪಾಲ್ ಕುಟುಂಬ ನ್ಯಾಯಾಲಯವೂ ಕೌನ್ಸೆಲಿಂಗ್ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ.

46
ಗೆಳತಿ ಜೊತೆ ವಾಸಿಸುವುದಾಗಿ ಹೇಳಿದ ವ್ಯಕ್ತಿ
Image Credit : Getty

ಗೆಳತಿ ಜೊತೆ ವಾಸಿಸುವುದಾಗಿ ಹೇಳಿದ ವ್ಯಕ್ತಿ

ವಿಚಾರಣೆಯ ಸಮಯದಲ್ಲಿ, ತಾನು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಿದ್ದೇನೆ. ಆದರೂ ತಾನು ಇನ್ನು ಮುಂದೆ ತನ್ನ ಗೆಳತಿಯೊಂದಿಗೆ ವಾಸಿಸಲು ಬಯಸುವುದಾಗಿ ಮತ್ತು ತನ್ನ ಹೆಂಡತಿಯೊಂದಿಗೆ ದಾಂಪತ್ಯ ಮುಂದುವರಿಸಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿದನು. ವರ್ಷಗಳ ಭಿನ್ನಾಭಿಪ್ರಾಯ ಮತ್ತು ವಿಫಲವಾದ ಮಾತುಕತೆಯಿಂದಾಗಿ 42 ವರ್ಷದ ವ್ಯಕ್ತಿಯ ಸಂಸಾರ ಅಂತಿಮವಾಗಿ ವಿಚ್ಛೇದನದತ್ತ ಸಾಗಿತು.

56
ಗಂಡನ ಬದಲು ಗರ್ಲ್‌ಫ್ರೆಂಡ್ ನೀಡಿದಳು ಪರಿಹಾರ
Image Credit : Gemini AI

ಗಂಡನ ಬದಲು ಗರ್ಲ್‌ಫ್ರೆಂಡ್ ನೀಡಿದಳು ಪರಿಹಾರ

ವಿಚ್ಛೇದನದ ವೇಳೆ ಹೆಂಡತಿ ತನ್ನ ಮಕ್ಕಳ ಸುರಕ್ಷತೆಗಾಗಿ ಡ್ಯೂಪ್ಲೆಕ್ಸ್ ಫ್ಲಾಟ್ ಮತ್ತು 27 ಲಕ್ಷ ನಗದು ಬೇಡಿದಳು. ಆದರೆ ಪತಿಯ ಗೆಳತಿ ತಕ್ಷಣ ಈ ಇಡೀ ಬೇಡಿಕೆಗೆ ಒಪ್ಪಿಕೊಂಡರು ಮತ್ತು ಫ್ಲಾಟ್ ಮತ್ತು ನಗದು ನೀಡಲು ಒಪ್ಪಿಕೊಂಡರು. ಅದರ ಒಟ್ಟು ಮೊತ್ತ ₹1.5 ಕೋಟಿಯಷ್ಟಿತ್ತು. ನಿಜವಾಗಿ 42 ವರ್ಷದ ವ್ಯಕ್ತಿಯ ಪತ್ನಿ ತನ್ನ ಪತಿಯಿಂದ ವಿಚ್ಛೇದನದ ವೇಳೆ ಈ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಪತಿಯ ಗೆಳತಿಯೇ ಈ ಮೊತ್ತವನ್ನು ಪಾವತಿಸಲು ಒಪ್ಪಿದ್ದರಿಂದ ಪ್ರಕರಣ ಸುಖಾಂತ್ಯವಾಯ್ತು. ಎಲ್ಲರೂ ಕಾಗದಪತ್ರಗಳಿಗೆ ಸಹಿ ಹಾಕಿ ಇಬ್ಬರು ಇಷ್ಟದಂತೆ ದೂರಾದರು.

66
ಇಂತಹ ಗರ್ಲ್‌ಫ್ರೆಂಡ್ ಎಲ್ಲರಿಗೂ ಸಿಗಲಿ ಎಂದ ನೆಟ್ಟಿಗರು
Image Credit : Google

ಇಂತಹ ಗರ್ಲ್‌ಫ್ರೆಂಡ್ ಎಲ್ಲರಿಗೂ ಸಿಗಲಿ ಎಂದ ನೆಟ್ಟಿಗರು

ಈ ದುಬಾರಿ ವಿಚ್ಛೇದನ ಪ್ರಕರಣವೂ ಈಗ ಊರಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, 1997 ರ ಬಾಲಿವುಡ್ ಚಿತ್ರ ಜುದಾಯಿಗೆ ಹೋಲಿಸಲಾಗುತ್ತಿದೆ. ಈ ಚಿತ್ರದಲ್ಲಿ ಶ್ರೀ ದೇವಿ ತನ್ನ ಪತಿ ಅನಿಲ್ ಕಪೂರ್ ರನ್ನು ಮತ್ತೊಬ್ಬ ಮಹಿಳೆ ಊರ್ಮಿಳಾ ಮಾತೋಂಡ್ಕರ್‌ಗೆ ಹಣ ತುಂಬಿದ ದೊಡ್ಡ ಸೂಟ್‌ಕೇಸ್‌ಗಾಗಿ ನೀಡುವ ದೃಶ್ಯವಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಅನೇಕರು ಇಂಥಾ ಗರ್ಲ್‌ಫ್ರೆಂಡ್ ಎಲ್ಲರಿಗೂ ಸಿಗಲಿ ಎಂದು ಕಾಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ: ಶಿವನ ದರ್ಶನಕ್ಕಾಗಿ ಜನ ಕ್ಯೂ ನಿಂತಿರುವ ಈ ನೆಲ ಭಾರತದಲ್ಲ: ಶಿವನ ಆರಾಧಕರಿರುವ ಆ ವಿದೇಶಿ ನೆಲ ಯಾವುದು?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಮಧ್ಯಪ್ರದೇಶ
ವಿಚ್ಛೇದನ

Latest Videos
Recommended Stories
Recommended image1
ಇಷ್ಟು ದಿನ ಬಚ್ಚಿಟ್ಟಿದ್ದ ಫ್ಯಾಮಲಿ, ಮಕ್ಕಳ ಸೀಕ್ರೆಟ್ ವಿಷ್ಯ ಕೊನೆಗೂ ಬಿಚ್ಚಿಟ್ಟ ಶಾರುಖ್ ಖಾನ್!
Recommended image2
ವಿಜಯ್‌ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆ ಆಹ್ವಾನ ಪತ್ರಿಕೆ ಕೈಸೇರಿತು! ಇನ್ನೇನಿದ್ರೂ ಓಲಗ ಊದೋದಷ್ಟೇ!
Recommended image3
ಪ್ರೇಮಿಗಳಿಗೆ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಿದು: ಭಾರತದಲ್ಲಿದೆ ಈ ಬಜೆಟ್ ಫ್ರೆಂಡ್ಲಿ ನಗರಿ
Related Stories
Recommended image1
ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ: ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ
Recommended image2
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಉದ್ಯೋಗಿ ಇಮೇಲ್‌ಗೆ ಮ್ಯಾನೇಜರ್ ಮಾಡಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved