- Home
- Entertainment
- Sandalwood
- ದಿನಕಳೆದಂತೆ ಸ್ಟೈಲ್ ಐಕಾನ್ ಆಗ್ತಿರೋ ನಟ ದರ್ಶನ್‌ರ 'ಮುದ್ದುರಾಕ್ಷಸಿ' ವಿಜಯಲಕ್ಷ್ಮೀ! PHOTOS
ದಿನಕಳೆದಂತೆ ಸ್ಟೈಲ್ ಐಕಾನ್ ಆಗ್ತಿರೋ ನಟ ದರ್ಶನ್‌ರ 'ಮುದ್ದುರಾಕ್ಷಸಿ' ವಿಜಯಲಕ್ಷ್ಮೀ! PHOTOS
ವಿಜಯಲಕ್ಷ್ಮೀ ಅವರು ಈ ಬಾರಿ ಬಂಗಾರ, ತಿಳಿ ಗುಲಾಬಿ ಬಣ್ಣದ ಲಂಗಾ ಧಾವಣಿ ಧರಿಸಿ ಮಿರ ಮಿರ ಮಿಂಚಿದ್ದಾರೆ. ಇನ್ನು ಸುಂದರವಾದ ಜುಮ್ಕಾ, ಸರ ಧರಿಸಿ ನಿಜಕ್ಕೂ ಅಪ್ಸರೆ ಥರ ಕಾಣುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಒಂದಾದ ಮೇಲೆ ಒಂದರಂತೆ ಅವರು ಫೋಟೋಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ವಿಜಯಲಕ್ಷ್ಮೀ ಅವರು ಇತ್ತೀಚೆಗೆ ʼದಿ ಡೆವಿಲ್ʼ ಸಿನಿಮಾ ಶೂಟಿಂಗ್ ಪ್ರಯುಕ್ತ ರಾಜಸ್ಥಾನಕ್ಕೆ ತೆರಳಿದ್ದರು. ಅಲ್ಲಿನ ಸೌಂದರ್ಯವನ್ನು ಸವಿದಿದ್ದರು. ಇನ್ನು ಬಿಳಿ ಸಲ್ವಾರ್‌ನಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.
ವಿಜಯಲಕ್ಷ್ಮೀ ದರ್ಶನ್ ಅವರು ರೆಸ್ಟೋರೆಂಟ್‌ಗೆ ಹೆಚ್ಚಾಗಿ ಹೋಗುತ್ತಾರೆ. ಅಷ್ಟೇ ಅಲ್ಲದೆ ಕಾರ್ಯಕ್ರಮಗಳಿಗೆ ಹಾಜರಿ ಹಾಕುತ್ತಿರುತ್ತಾರೆ. ವಿಜಯಲಕ್ಷ್ಮೀ ದರ್ಶನ್ ಅವರು ಪತಿಯ ಜೊತೆಗೂ ಕೂಡ ಆಗಾಗ ಮದುವೆ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ.
ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. 2000 ಮೇ 14ರಂದು ಇವರಿಬ್ಬರು ಮದುವೆಯಾಗಿದ್ದರು. ಕಳೆದ ವರ್ಷ ದುಬೈನಲ್ಲಿ ಇವರಿಬ್ಬರು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಬಿಳಿ ಥೀಮ್‌ನಲ್ಲಿ ಇಬ್ಬರೂ ರೆಡಿಯಾಗಿದ್ದಲ್ಲದೆ ಉಂಗುರ ಕೂಡ ಬದಲಾಯಿಸಿಕೊಂಡಿದ್ದರು.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು. ಆ ವೇಳೆ ವಿಜಯಲಕ್ಷ್ಮೀ ಅವರು ಪತಿಯನ್ನು ಬಿಡಿಸಲು ಸಾಕಷ್ಟು ಹೋರಾಟವನ್ನೇ ಮಾಡಿದ್ದರು. ಒಂದು ಕಡೆ ಪೊಲೀಸ್ ಠಾಣೆ, ಕೋರ್ಟ್ ಎಂದು ಅಲೆದಾಡಬೇಕಿತ್ತು, ಇನ್ನೊಂದು ಕಡೆ ದೇವಸ್ಥಾನಗಳಿಗೆ ಹೋಗುತ್ತಿದ್ದರು.
ದರ್ಶನ್ ಅವರು ಜೈಲಿನಲ್ಲಿದ್ದಾಗ ವಿಜಯಲಕ್ಷ್ಮೀ ಅವರು ಕೊಲ್ಲೂರು ಮೂಕಾಂಬಿಕಾ ಸ್ಥಳದಲ್ಲಿ ನವಚಂಡಿಯಾಗ ಮಾಡಿಸಿದ್ದರು. ಅಷ್ಟೇ ಅಲ್ಲದೆ ಪರರಾಜ್ಯದ ದೇವಸ್ಥಾನಗಳಿಗೂ ಭೇಟಿ ನೀಡಿದ್ದರು. ಅಂದಹಾಗೆ ದರ್ಶನ್ ಅವರು ಪತ್ನಿಯನ್ನು ಮುದ್ದುರಾಕ್ಷಸಿ ಅಂತಲೇ ಕರೆಯುತ್ತಾರಂತೆ.
ನಟ ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಹೆಚ್ಚಾಗಿ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಾರೆ. ಇನ್ನು ಪತಿ, ಮಗನ ಜೊತೆಗೆ ಆನೆಯ ಜೊತೆಗೂ ಒಂದು ಫೋಟೋ ತೆಗೆಸಿಕೊಂಡಿದ್ದರು.
ವಿಜಯಲಕ್ಷ್ಮೀ ದರ್ಶನ್ ಅವರು ಮಗನ ಬಗ್ಗೆ ತುಂಬ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಪುತ್ರ ವಿನೀಶ್ ಅವರು ಚಿತ್ರರಂಗಕ್ಕೆ ಬರುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.