ಒಂದು ಪ್ರದರ್ಶನಕ್ಕೆ ಒದ್ದಾಡಿದ ದಿನದಿಂದ 5000 ಹೌಸ್‌ಫುಲ್ ಶೋವರೆಗೆ: ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಉಲ್ಲೇಖಿಸಿರುವ 2016ರ ಪೋಸ್ಟ್ ಸಹ ಈಗ ಟ್ರೆಂಡಿಂಗ್‌ನಲ್ಲಿದೆ. ಇದು ರಿಷಬ್ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ‘ರಿಕ್ಕಿ’ ಸಿನಿಮಾದ ಕುರಿತಾದ ಪೋಸ್ಟ್ ಆಗಿದೆ.

ನಾನು ನಿಮಗೆ ಸದಾ ಋಣಿ
‘2016ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000ಕ್ಕೂ ಹೆಚ್ಚು ಹೌಸ್‌ಫುಲ್ ಶೋಗಳವರೆಗಿನ ಈ ಪಯಣ ಅದ್ಭುತ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ನಿಮಗೆ ಸದಾ ಋಣಿ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಟ್ರೆಂಡಿಂಗ್‌ನಲ್ಲಿದೆ 2016ರ ಪೋಸ್ಟ್
ರಿಷಬ್ ಶೆಟ್ಟಿ ಉಲ್ಲೇಖಿಸಿರುವ 2016ರ ಪೋಸ್ಟ್ ಸಹ ಈಗ ಟ್ರೆಂಡಿಂಗ್‌ನಲ್ಲಿದೆ. ಅಂತೂ ಇಂತೂ ಅವರಿವರ ಕೈಕಾಲು ಹಿಡಿದು ಮಂಗಳೂರಿನ ಬಿಗ್ ಸಿನಿಮಾನಲ್ಲಿ ನಾಳೆಯಿಂದ ಸಂಜೆ 7ಗಂಟೆ ಶೋ ಸಿಕ್ಕಿದೆ.
ಟಿಕೆಟ್ ಬುಕ್ ಮಾಡಿ
ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್ ಬುಕ್ ಮಾಡಿ ಎಂದು ರಿಷಬ್ ಈ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು, ಇದು ರಿಷಬ್ ಚೊಚ್ಚಲ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ‘ರಿಕ್ಕಿ’ ಸಿನಿಮಾದ ಕುರಿತಾದ ಪೋಸ್ಟ್ ಆಗಿದೆ.
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾ
ರಿಷಬ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1 ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಕರ್ನಾಟಕ, ದೇಶ-ವಿದೇಶದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡು ಸಿನಿಮಾ ಹವಾ ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ.
ಸಿನಿಮಾಗೆ ಮೆಗಾ ಓಪನಿಂಗ್
2022ರಲ್ಲಿ ಬಂದ ಕಾಂತಾರ ವಿಶ್ವದಾದ್ಯಂತ ಪ್ರಶಂಸೆ ಪಡೆದ ಮೇಲೆ, ಅದರ ಪ್ರೀಕ್ವೆಲ್ ಮಾಡೋ ಸಾಹಸಕ್ಕೆ ಕೈ ಹಾಕಿದ್ರು. ನಿರಂತರ 3 ವರ್ಷಗಳ ಸಾಹಸ ಬಳಿಕ ಕಾಂತಾರ ಚಾಪ್ಟರ್-1 ಸಿದ್ದಗೊಂಡಿದೆ. ಸದ್ಯ ವಿಶ್ವದಾದ್ಯಂತ ಸಿನಿಮಾಗೆ ಮೆಗಾ ಓಪನಿಂಗ್ ಸಿಕ್ಕಿದ್ದು ರಿಷಬ್ ಪ್ರತಿಭೆಯನ್ನ ಎಲ್ಲರೂ ಕೊಂಡಾಡ್ತಾ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

