- Home
- Entertainment
- Sandalwood
- ಬ್ಲ್ಯಾಕ್ ಸೀರೇಲಿ ವೈಟ್ ಬ್ಯೂಟಿ ಆಶಿಕಾ…. ಸೀರೆಲಿ ಹುಡುಗೀರ ನೋಡಲೆಬಾರದು ಅನ್ನೋದು ಇದಕ್ಕೇನೆ…
ಬ್ಲ್ಯಾಕ್ ಸೀರೇಲಿ ವೈಟ್ ಬ್ಯೂಟಿ ಆಶಿಕಾ…. ಸೀರೆಲಿ ಹುಡುಗೀರ ನೋಡಲೆಬಾರದು ಅನ್ನೋದು ಇದಕ್ಕೇನೆ…
ಸದ್ಯ ತೆಲುಗಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ ಸದ್ಯ ನಾ ಸಾಮಿ ರಂಗ ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿದ್ದು, ಪ್ರೀ ರಿಲೀಸ್ ಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡಲ್ಲಿ ಚುಟು ಚುಟು ಅಂತೈತೆ ಎಂದು ಹಾಡಿ ಕುಣಿದು, ಯುವಕರ ನಿದ್ದೆಗೆಡಿಸಿದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ (Ashika Ranganath) ಕನ್ನಡದ ಜೊತೆ ಜೊತೆಗೆ ಸದ್ಯ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ಬ್ಯುಸಿಯಾಗಿದ್ದಾರೆ.
ಅಮಿಗೋ ಎಂಬ ಚಿತ್ರದ ಮೂಲಕ ತೆಲುಗು ಸಿನಿಮಾಕ್ಕೆ ಎಂಟ್ರಿ ಕೊಟ್ಟು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಆಶಿಕಾ, ಈ ಸಿನಿಮಾದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಜೊತೆ ನಟಿಸಿದ್ದರು. ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಹಾಡು (romantic song) ಭಾರಿ ಸದ್ದು ಮಾಡಿದ್ದು, ಇದೀಗ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಸಂಕ್ರಾಂತಿ ಸಂಭ್ರಮಕ್ಕೆ ತೆರೆಕಾಣಲು ಸಿದ್ಧವಾಗಿರುವ ನಾಗಾರ್ಜುನ್ (Akkineni Nagarjun) ಪ್ರಮುಖ ಪಾತ್ರದಲ್ಲಿ ನಟಿಸಿರುವ ನಾ ಸಾಮಿ ರಂಗ ಸಿನಿಮಾದಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಆಶಿಕಾ ನಟಿಸುತ್ತಿದ್ದು, ಈಗಾಗಲೆ ಸಿನಿಮಾದ ಹಾಡು, ಸೀನ್ ಗಳು ವೈರಲ್ ಆಗುತ್ತಿವೆ.
ಇದೀಗ ನಾ ಸಾಮಿ ರಂಗ (Naa Sami Ranga) ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಕಪ್ಪು ಸೀರೆಯುಟ್ಟು ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಕಾರ್ಯಕ್ರಮದಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಕಪ್ಪು ಟ್ರಾನ್ಸ್ಪರೆಂಟ್ ಸೀರೆಯಲ್ಲಿನ ಫೋಟೋಗಳನ್ನು ತಮ್ಮ ಸೊಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ಲಂಗ, ಅದಕ್ಕೆ ಮ್ಯಾಚ್ ಆಗುವ ಕಪ್ಪು ಬಣ್ಣದ ಡಿಸೈನರ್ ಸ್ಲೀವ್ ಲೆಸ್ ಬ್ಲೌಸ್ ಜೊತೆಗೆ, ಟ್ರಾನ್ಸ್ಪರೆಂಟ್ ದುಪಟ್ಟಾ ಧರಿಸಿದ್ದು, ಇವರನ್ನು ನೋಡಿಯೇ ಸೀರೆಲಿ ಹುಡುಗಿರ ನೋಡಲೆ ಬಾರದು, ನಿಲ್ಲಲ್ಲ ಟೆಂಪ್ರೇಚರ್ ಎಂಬ ಹಾಡು ಬರದಂತೆ ಕಾಣಿಸುತ್ತೆ.
ಇನ್ನು ನಾ ಸಾಮಿ ರಂಗ ಸಿನಿಮಾ ಈಗಾಗಲೇ ಬಹಳಷ್ಟು ಹೈಪ್ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಅಲ್ಲರಿ ನರೇಶ್, ರಾಜ್ ತರುಣ್, ಮಿರ್ನ ಮೆನನ್, ರುಕ್ಸಾರ್ ದಿಲ್ಲಾನ್ ಕೂಡ ನಟಿಸಿದ್ದಾರೆ. ಜನರು ಸಿನಿಮಾ ರಿಲೀಸ್‌ಗೆ ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಕನ್ನಡದಲ್ಲಿ ಎರಡು ಸಿನಿಮಾಗಳಲ್ಲೂ ಆಶಿಕಾ ನಟಿಸಲಿದ್ದು, ಎರಡೂ ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. O2 ಮತ್ತು ಗತವೈಭವ ಸಿನಿಮಾದಲ್ಲಿ ಆಶಿಕಾ ನಟಿಸಲಿದ್ದಾರೆ. ಗತವೈಭವ ಸಿನಿಮಾವನ್ನು ಸಿಂಪಲ್ ಸುನಿ (Simple suni) ನಿರ್ದೇಶನ ಮಾಡಲಿದ್ದಾರೆ. ಒಟ್ಟಲ್ಲಿ ಆಶಿಕಾ ಈ ವರ್ಷವೂ ಬ್ಯುಸಿಯಾಗಿರಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.