- Home
- Entertainment
- Sandalwood
- Yash ಪುತ್ರನ ಹುಟ್ಟುಹಬ್ಬಕ್ಕೆ ಜೀವಂತ ಪ್ರಾಣಿ-ಪಕ್ಷಿಗಳೇ ಗೆಸ್ಟ್: ರೋಚಕ ಬರ್ತ್‌ಡೇ ಪಾರ್ಟಿಯ ವಿಡಿಯೋ ರಿಲೀಸ್
Yash ಪುತ್ರನ ಹುಟ್ಟುಹಬ್ಬಕ್ಕೆ ಜೀವಂತ ಪ್ರಾಣಿ-ಪಕ್ಷಿಗಳೇ ಗೆಸ್ಟ್: ರೋಚಕ ಬರ್ತ್‌ಡೇ ಪಾರ್ಟಿಯ ವಿಡಿಯೋ ರಿಲೀಸ್
ನಟ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಯಥರ್ವ್, ತನ್ನ ಆರನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾನೆ. ಬೆಂಗಳೂರಿನ ಹೊರವಲಯದಲ್ಲಿರುವ ಪ್ರಾಣಿ ಅಭಯಾರಣ್ಯದಲ್ಲಿ, ರಕ್ಷಿಸಲ್ಪಟ್ಟ ಪ್ರಾಣಿ-ಪಕ್ಷಿಗಳ ನಡುವೆ ಜಂಗಲ್ ಥೀಮ್‌ನಲ್ಲಿ ಈ ಸಂಭ್ರಮ ನಡೆದಿದೆ. ಇದರ ವಿಡಿಯೋ ರಿಲೀಸ್ ಆಗಿದೆ.

ಯಶ್-ರಾಧಿಕಾ ಮಗನ ಹುಟ್ಟುಹಬ್ಬ
ಸ್ಯಾಂಡಲ್‌ವುಡ್ ನಟ ಯಶ್ (Yash) ಹಾಗೂ ನಟಿ ರಾಧಿಕಾ ಪಂಡಿತ್ (Radhika Pandit) ಮೊದಲ ಮಗ ಯಥರ್ವ್ ಕಳೆದ 30ರಂದು ಆರನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಸೆಲೆಬ್ರಿಟಿಗಳ ಮಕ್ಕಳ ಹುಟ್ಟುಹಬ್ಬವೆಂದರೆ ಅದು ಭರ್ಜರಿಯಾಗಿಯೇ ನಡೆಯುತ್ತದೆ. ಅದ್ಧೂರಿಯಾಗಿರುವ ಕಾರ್ಯಕ್ರಮದ ಮೂಲಕ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಇದರ ನಡುವೆಯೇ ಯಶ್ ಮತ್ತು ರಾಧಿಕಾ ಸ್ವಲ್ಪ ಭಿನ್ನ ಆಗಿರುವಂಥ ಕಾರ್ಯಕ್ರಮ ಮಾಡಿದ್ದಾರೆ.
ಆಮೆ, ಹಾವು, ಓತಿಕ್ಯಾತ, ಕಪ್ಪೆ...
ಪ್ರಾಣಿ-ಪಕ್ಷಿಗಳ ನಡುವೆ ಯಥರ್ವ್ (Yatharv Yash) ಹುಟ್ಟುಹಬ್ಬ ಆಚರಿಸಲಾಗಿದೆ. ಬೆಂಗಳೂರು ಹೊರವಲಯದ ಪ್ರಾಣಿ ದಿ ಪೆಟ್ ಸೆಂಚುರಿಯಲ್ಲಿರುವ ರಕ್ಷಿಸಲ್ಪಟ್ಟ ಮೃಗ-ಖಗಗಳ ನಡುವೆ ಸೆಲೆಬ್ರೇಷನ್ ನಡೆದಿದೆ. ಆಮೆ, ಹಾವು, ಓತಿಕ್ಯಾತ, ಕಪ್ಪೆ, ಗಿಳಿ ಮುಂತಾದ ವನ್ಯ ಜೀವಿಗಳನ್ನು ಈ ಪಾರ್ಟಿಗೆ ಕರೆತರಲಾಗಿತ್ತು.
ತೊಂದರೆ ನೀಡಿಲ್ಲ
ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾವುದೇ ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡಲಾಗಿಲ್ಲ ಎನ್ನುವ ಸೂಚನೆಯ ನಡುವೆಯೇ, ಅರ್ಥಪೂರ್ಣವಾಗಿರುವ ಕುತೂಹಲದ ವಿಡಿಯೋ ಒಂದನ್ನು ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದಾರೆ.
ವಿಭಿನ್ನ ಪ್ರಪಂಚ
ಇಲ್ಲಿ ವಿಭಿನ್ನ ರೀತಿಯ ಪ್ರಪಂಚವನ್ನೇ ಸೃಷ್ಟಿ ಮಾಡಲಾಗಿತ್ತು. ಪ್ರಾಣಿಗಳ ಆಕೃತಿಯನ್ನೇ ಡೆಕೊರೇಷನ್ ಮಾಡಲಾಗಿತ್ತು. ಅಭಯಾರಣ್ಯ ಹೋಲುವ ರೀತಿಯಲ್ಲೇ ಇದರ ಥೀಮ್ ಕೂಡ ಇತ್ತು. ಇಲ್ಲಿರುವ ವಿವಿಧ ಬಗೆಯ ಪ್ರಾಣಿ-ಪಕ್ಷಿಗಳನ್ನು ಮಕ್ಕಳ ಹಿಡಿದು ಕುಣಿದಾಡಿದವರು.
ನಟಿ ಹೇಳಿದ್ದೇನು?
‘ನಮ್ಮ ಪ್ರಕೃತಿ ಪ್ರೇಮಿ ಯಥರ್ವ್‌ಗೆ ಅದ್ಭುತವಾದ ಆರನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು. ಆ ದಿನವೂ ಪ್ರಕೃತಿ ಜೊತೆ ಮನುಷ್ಯನ ಸಹಾನುಭೂತಿ ಮತ್ತು ಸಹಬಾಳ್ವೆಯ ಸುಂದರ ಜ್ಞಾಪನೆಯಾಗಿತ್ತು. ರಕ್ಷಿಸಲ್ಪಟ್ಟ ಸುಂದರ ಪ್ರಾಣಿಗಳನ್ನು ಇಲ್ಲಿಗೆ ಕರೆತಂದಿದ್ದಕ್ಕಾಗಿ ಪ್ರಾಣಿ ದಿ ಪೆಟ್ ಸ್ಯಾಂಕ್ಚ್ಯುರಿಗೆ ವಿಶೇಷ ಧನ್ಯವಾದಗಳು ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
ಜಂಗಲ್ ಥೀಮ್‌ನಲ್ಲಿ ಬರ್ತ್‌ಡೇ ಪಾರ್ಟಿ
ಅಂದಹಾಗೆ ಯಶ್ - ರಾಧಿಕಾ ಪಂಡಿತ್ ದಂಪತಿಯ ಮಗ ಯಥರ್ವ್ ಹುಟ್ಟಿದ್ದು ಅಕ್ಟೋಬರ್ 30, 2019 ರಂದು. ಬೆಂಗಳೂರಿನ ಜೆ.ಡಬ್ಲ್ಯೂ.ಮ್ಯಾರಿಯೆಟ್ ಹೋಟೆಲ್‌ನಲ್ಲಿ ಬರ್ತ್‌ಡೇ ಪಾರ್ಟಿ ಜರುಗಿತ್ತು. ಜಂಗಲ್ ಥೀಮ್‌ನಲ್ಲಿ ಬರ್ತ್‌ಡೇ ಪಾರ್ಟಿ ನಡೆಯಿತು. ಬರ್ತ್‌ಡೇ ಪಾರ್ಟಿಗೆ ಕುಟುಂಬಸ್ಥರು, ಆಪ್ತರು ಹಾಜರಿದ್ದರು.
ಯಶ್ ಪುತ್ರನ ಕುತೂಹಲದ ಹುಟ್ಟುಹಬ್ಬದ ವಿಡಿಯೋ ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

