- Home
- Entertainment
- Sandalwood
- Chaithra Achar New Look: ಚೈತ್ರಾ ಆಚಾರ್ ಹೊಸ ಲುಕ್… ರುಕ್ಮಿಣಿ ವಸಂತ್ ಸೇರಿ… ನಟಿಯರೆಲ್ಲಾ ಶಾಕ್ !
Chaithra Achar New Look: ಚೈತ್ರಾ ಆಚಾರ್ ಹೊಸ ಲುಕ್… ರುಕ್ಮಿಣಿ ವಸಂತ್ ಸೇರಿ… ನಟಿಯರೆಲ್ಲಾ ಶಾಕ್ !
ಚಂದನವನದ ಸುಂದರಿ ಚೈತ್ರಾ ಆಚಾರ್ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿ, ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಶಾಕ್ ನೀಡಿದ್ದಾರೆ. ಹೇಗಿದೆ ಅವರ ಸ್ಟೈಲ್ ನೀವೇ ನೋಡಿ.

ಸ್ಯಾಂಡಲ್‌ವುಡ್ ಮುದ್ದು ಸುಂದರಿ ಚೈತ್ರಾ ಆಚಾರ್ (Chaithra Achar) ಯಾವಾಗ್ಲೂ ತಮ್ಮ ಬೋಲ್ಡ್ ಪಾತ್ರ, ಬೋಲ್ಡ್ ನಟನೆ, ಅಷ್ಟೇ ಬೋಲ್ಡ್ ಮತ್ತು ಬಿಂದಾಸ್ ಆಗಿರುವ ಮಾತುಗಳು ಹಾಗೂ ಬೋಲ್ಡ್ ಲುಕ್ ನಿಂದಲೇ ಜನಪ್ರಿಯತೆ ಪಡೆದಿದ್ದಾರೆ.
ಚೈತ್ರಾ ಆಚಾರ್ ಗೆ ಯಾವುದೇ ಲುಕ್ ಚೆನ್ನಾಗಿ ಕಾಣಿಸುತ್ತೆ ಅನ್ನೋದು ಸುಳ್ಳಲ್ಲ, ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಬೆಡಗಿ ಹೆಚ್ಚಾಗಿ ತಮ್ಮ ಉದ್ದ ಕೂದಲನ್ನು ಹೆಣೆದು ಜಡೆ ಹಾಕಿ, ತಮ್ಮ ಮಾಡರ್ನ್ ಜೊತೆಗೆ ಟ್ರೆಡಿಶನಲ್ ಲುಕ್ ಗೆ ಮೆರುಗು ನೀಡುತ್ತಿದುದನ್ನು ನೀವು ನೋಡಿರುತ್ತೀರಿ.
ಚೈತ್ರಾ ಹೇರ್ ಸ್ಟೈಲ್ (hair style) ಮಾಡಿಸಿಕೊಳ್ಳೊದೆ ಕಡಿಮೆ, ಒಮ್ಮೊಮ್ಮೆ ಜಡೆ ಹೆಣೆದು ಹಾಕಿದ್ದರೆ, ಮತ್ತೊಮ್ಮೆ ಕೂದಲು ಲೂಸ್ ಬಿಡುತ್ತಿದ್ದರು. ಆದರೆ ಇದೀಗ ನಟಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಲುಕ್ ನೋಡಿ, ಅಭಿಮಾನಿಗಳು ಬಿಡಿ, ಅವರೆ ಸ್ನೇಹಿತರೆ ಶಾಕ್ ಆಗಿದ್ದು, ಇದು ನಿಜಾನ ಎಂದು ಕೇಳಿದ್ದಾರೆ.
ಹೌದು, ಚೈತ್ರಾ ತಮ್ಮ್ ಇನ್’ಸ್ಟಾಗ್ರಾಂನಲ್ಲಿ (instagram photos) ಹೊಸ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದು, ನಟಿ ಇದರಲ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿರುವುದು ಕಂಡು ಬಂದಿದೆ. ಕೂದಲನ್ನು ಶೋಲ್ಡರ್ ವರೆಗೆ ಕತ್ತರಿಸಿದ್ದು, ಫ್ರಂಟ್ ಕೂಡ ಕೂದಲನ್ನು ಸಣ್ಣದಾಗಿ ಕತ್ತರಿಸಿ, ಕೊರಿಯನ್ ಹುಡುಗಿಯ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ನೋಡಿ, ಸಪ್ತ ಸಾಗರದಾಚೆ ಕೋ ಸ್ಟಾರ್ ರುಕ್ಮಿಣಿ ವಸಂತ್ (Rukmini Vasanth) ಇದು ನಿಜಾನ? ಪ್ಲೀನ್ ಹೌದು ಹೇಳು ಎಂದು ಥ್ರಿಲ್ ಆಗಿ ಕಾಮೆಂಟ್ ಮಾಡಿದ್ರೆ, ನಟಿ ಶ್ರುತಿ ಹರಿಹರನ್ ಈ ಲುಕ್ ನಿನಗೆ ತುಂಬಾನೆ ಚೆನ್ನಾಗಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ನಟಿ ನಿಧಿ ಹೆಗ್ಡೆ ಆರ್ ಯು ಸೀರಿಯಸ್ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ರೆ, ಮತ್ತೊಬ್ಬರು ನೀವು ತುಂಬಾನೆ ಚೆನ್ನಾಗಿ ಕಾಣಿಸ್ತಿದ್ದೀರಿ ಎಂದಿದ್ದಾರೆ. ಇನ್ನೊಬ್ಬರು ನೀವು ಕೊರಿಯಲ್ ಡ್ರಾಮಾ (Korean Drama) ಏನಾದ್ರು ಸೈನ್ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಒಟ್ಟಲ್ಲಿ ಚೈತ್ರಾ ಅವರ ಈ ಲುಕ್ ಮಾತ್ರ ಎಲ್ಲರಿಗೂ ಇಷ್ಟವಾಗಿದೆ. ಆದರೆ ನಿಜವಾಗಿಯೂ ಚೈತ್ರಾ ಹೇರ್ ಕಟ್ ಮಾಡಿಸಿದ್ದಾರ ಅನ್ನೋದು ಮಾತ್ರ ತಿಳಿದು ಬಂದಿಲ್ಲ.
ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಚೈತ್ರಾ ಸದ್ಯದ ಬ್ಯುಸಿ ನಟಿ ಎನ್ನಬಹುದು. ತಮಿಳಿನ 3BHK, ಓ ಮೈ ಲಾರ್ಡ್, ಕನ್ನಡದಲ್ಲಿ ಉತ್ತರಾಕಾಂಡ, ಮಾರ್ನಮಿ, ಸ್ಟ್ರಾಬೆರ್ರಿ ಸಿನಿಮಾಗಳು ಚೈತ್ರಾ ಆಚಾರ್ ಕೈಯಲ್ಲಿದೆ. ಈ ವರ್ಷ ಮೂರು ಸಿನಿಮಾ ರಿಲೀಸ್ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

