- Home
- Entertainment
- Sandalwood
- ಡೆವಿಲ್ ನಂತರ ಪ್ರೇಮ್ ಜತೆಗೆ ದರ್ಶನ್ ಸಿನಿಮಾ ಪಕ್ಕಾ: ನಟಿ ರಕ್ಷಿತಾ ಪ್ರೇಮ್ ಹೇಳಿದಿಷ್ಟು...
ಡೆವಿಲ್ ನಂತರ ಪ್ರೇಮ್ ಜತೆಗೆ ದರ್ಶನ್ ಸಿನಿಮಾ ಪಕ್ಕಾ: ನಟಿ ರಕ್ಷಿತಾ ಪ್ರೇಮ್ ಹೇಳಿದಿಷ್ಟು...
ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷವೇ ದರ್ಶನ್ ನಟನೆಯಲ್ಲಿ ಪ್ರೇಮ್ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.

ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಚಿತ್ರದ ನಂತರ ನಟ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಈಗ ಅದಕ್ಕೊಂದು ಸ್ಪಷ್ಟನೆ ಸಿಕ್ಕಿದೆ. ‘ಡೆವಿಲ್’ ನಂತರ ಚಾಲೆಂಜಿಂಗ್ ಸ್ಟಾರ್ ಅವರು ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ.
ಸ್ವತಃ ನಟಿ ರಕ್ಷಿತಾ ಅವರೇ ಇದನ್ನು ಸ್ಪಷ್ಟ ಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷವೇ ದರ್ಶನ್ ನಟನೆಯಲ್ಲಿ ಪ್ರೇಮ್ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ. ಕೆವಿಎನ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.
ಡೆವಿಲ್ ಬಳಿಕ ದರ್ಶನ್ ಅವರು ಪ್ರೇಮ್ ನಿರ್ದೇಶನದಲ್ಲಿ ಸಿನಿಮಾ ಮಾಡೋದು ಪಕ್ಕಾ. ಈ ವರ್ಷವೇ ಶುರು ಮಾಡಬೇಕು ಅಂದುಕೊಂಡಿದ್ದೇವೆ. ಈ ಚಿತ್ರಕ್ಕೆ ನಾನೇ ನಿರ್ಮಾಪಕಿ ಅಂತ ಸುದ್ದಿ ಓಡಾಡುತ್ತಿದ್ದರೆ ಅದು ಸುಳ್ಳು. ನಾನಂತೂ ನಿರ್ಮಾಪಕಿ ಅಲ್ಲ ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ಡೆವಿಲ್ ಸಿನಿಮಾ ಶೂಟಿಂಗ್ಗಾಗಿ ಜುಲೈ 11ರಿಂದ 30ರ ವರೆಗೆ ವಿದೇಶಕ್ಕೆ ತೆರಳಲು ದರ್ಶನ್‌ಗೆ 57ನೇ ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ದುಬೈ ಹಾಗೂ ಯುರೋಪ್ ಬದಲು ಥೈಲ್ಯಾಂಡ್ಗೆ ಹೋಗಲು ಕೋರ್ಟ್ ಸಮ್ಮತಿಸಿದೆ.
ಬಾಕಿ ಉಳಿದಿರುವ 2 ಹಾಡುಗಳ ಚಿತ್ರೀಕರಣವನ್ನು ಥೈಲ್ಯಾಂಡ್ನಲ್ಲಿ ನಡೆಸಲು ತಂಡ ಪ್ಲ್ಯಾನ್ ಹಾಕಿಕೊಂಡಿದೆ. ಇದೇ ಜುಲೈ 12ರಂದು ದರ್ಶನ್, ನಿರ್ದೇಶಕ ಪ್ರಕಾಶ್ ವೀರ್, ಕ್ಯಾಮೆರಾಮ್ಯಾನ್ ಸುಧಾಕರ್ ಸೇರಿ ಚಿತ್ರತಂಡದ ಕೆಲವರು ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡಾ ವಿದೇಶಕ್ಕೆ ತೆರಳಲಿದ್ದಾರೆ.
ಇನ್ನು ನಿರ್ದೇಶಕ ಮಿಲನ ಪ್ರಕಾಶ್ ನಿರ್ದೇಶನದ ಜೊತೆಗೆ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ದರ್ಶನ್ ನಾಯಕಿಯಾಗಿ ರಚನಾ ರೈ ಡೆವಿಲ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

