- Home
- Entertainment
- Sandalwood
- ಶೂಟಿಂಗ್ನಲ್ಲಿ Darshan ನನ್ನ ಎತ್ತಿದಾಗ ಸುಸ್ತಾಗಿ ಮಲಗಿಬಿಟ್ಟರು! ಶಾಕಿಂಗ್ ಘಟನೆ ನೆನೆದ Devil ನಾಯಕಿ Rachana Rai
ಶೂಟಿಂಗ್ನಲ್ಲಿ Darshan ನನ್ನ ಎತ್ತಿದಾಗ ಸುಸ್ತಾಗಿ ಮಲಗಿಬಿಟ್ಟರು! ಶಾಕಿಂಗ್ ಘಟನೆ ನೆನೆದ Devil ನಾಯಕಿ Rachana Rai
ನಟ ದರ್ಶನ್ ಅವರ ಬೆನ್ನುನೋವಿನ ಬಗ್ಗೆ ಇದ್ದ ಅನುಮಾನಗಳಿಗೆ 'ಡೆವಿಲ್' ಚಿತ್ರದ ನಾಯಕಿ ರಚನಾ ರೈ ತೆರೆ ಎಳೆದಿದ್ದಾರೆ. ಶೂಟಿಂಗ್ ವೇಳೆ ತೀವ್ರ ನೋವಿದ್ದರೂ ತಮ್ಮನ್ನು ಎತ್ತಿಕೊಂಡ ದೃಶ್ಯದ ನಂತರ ದರ್ಶನ್ ಅವರು ನೋವಿನಿಂದ ನೆಲದ ಮೇಲೆ ಮಲಗಿ ಬಿಟ್ಟರು ಎಂದು ರಚನಾ ಆ ದಿನದ ಘಟನೆಯನ್ನು ವಿವರಿಸಿದ್ದಾರೆ.

ದರ್ಶನ್ರ ಡೆವಿಲ್ಗೆ ಫ್ಯಾನ್ಸ್ ಕಾತರ
ನಟ ದರ್ಶನ್ ಮತ್ತು ನಟಿ ರಚನಾ ರೈ ಅಭಿನಯದ ಡೆವಿಲ್ ಚಿತ್ರದ (Devil Movie) ಬಿಡುಗಡೆಯಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದಾಗಲೇ ಇದರ ಪ್ರಚಾರ ಕೂಡ ಶುರುವಾಗಿದೆ. ಇದಾಗಲೇ ರಚನಾ ಅವರು ಈ ವಿಷಯದ ಬಗ್ಗೆ ಹಲವು ಅನುಭವಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರ ನೋಡಿದವರಿಗೆ ಸಿಕ್ಕಾಪಟ್ಟೆ ಅಚ್ಚರಿ ಇದೆ. ಇದೊಂದು ರೀತಿಯಲ್ಲಿ ಔಟ್ ಆಫ್ ದಿ ಬಾಕ್ಸ್ ಚಿತ್ರವಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಬೆನ್ನು ನೋವಿನ ಬಗ್ಗೆ ಚರ್ಚೆ
ಇದರ ನಡುವೆಯೇ, ದರ್ಶನ್ ಅವರ ಬೆನ್ನುನೋವಿನ ಬಗ್ಗೆ ತುಂಬಾ ಚರ್ಚೆಯಾಗುತ್ತಲೇ ಇದೆ. ಇದೇ ಕಾರಣಕ್ಕೆ, ದರ್ಶನ್ ಅವರು ಈ ಹಿಂದೆ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಬೆನ್ನು ನೋವಿನ ಆಪರೇಷನ್ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಲವರು ಇವೆಲ್ಲಾ ಕುಂಟುನೆಪವಷ್ಟೇ ಎಂದು ಕೂಡ ಹೇಳಿದ್ದರು.
ನಾಯಕಿಯನ್ನು ಎತ್ತಿಕೊಂಡಿದ್ದ ದರ್ಶನ್
ಆದರೆ ಡೆವಿಲ್ ಚಿತ್ರದಲ್ಲಿ, ನಾಯಕಿ ರಚನಾ ರೈ ಅವರನ್ನು ದರ್ಶನ್ ಅವರು ಸಲೀಸಾಗಿ ಎತ್ತುಕೊಂಡಿದ್ದಾರೆ. ಇದನ್ನು ನೋಡಿದ ಮೇಲೆ ದರ್ಶನ್ ವಿರುದ್ಧ ಕೆಲವರು ಟೀಕೆಗಳನ್ನೂ ಮಾಡಿದ್ದರು. ಇದರ ಅಸಲಿಯತ್ತನ್ನು ತೆರೆದಿಟ್ಟಿದ್ದಾರೆ ನಟಿ ರಚನಾ.
ರಚನಾ ಹೇಳಿದ್ದೇನು?
ದರ್ಶನ್ ಅವರು ಏನೂ ನೆಪ ಹೇಳಲಿಲ್ಲ. ಅವರಿಗೆ ಬೆನ್ನು ನೋವು ಇದ್ದಿದ್ದು ಸತ್ಯ. ಅವರು ಶೂಟಿಂಗ್ನಲ್ಲಿ ನನ್ನನ್ನು ಎತ್ತಿಕೊಳ್ಳುವ ದೃಶ್ಯ ಇದ್ದರೂ, ಆ ಸಮಯದಲ್ಲಿ ಅದನ್ನು ನಿಭಾಯಿಸಿದರು. ಆದರೆ ಆಗಲೂ ಅವರಿಗೆ ಬೆನ್ನುನೋವುಕಾಡುತ್ತಿತ್ತು ಎಂದಿದ್ದಾರೆ.
ಮಲಗಿಬಿಟ್ರು
ನನ್ನನ್ನು ಎತ್ತಿಕೊಳ್ಳುವ ದೃಶ್ಯ ಮಾಡುವಾಗ ನೆಲದ ಮೇಲೆ ಬಿದ್ದು ಮಲಗಿಬಿಟ್ಟಿದ್ರು. ಅಷ್ಟು ನೋವು ಅವರಿಗೆ ಕಾಡುತ್ತಿತ್ತು ಎಂದಿದ್ದಾರೆ. ಆ ದೃಶ್ಯದ ಶೂಟಿಂಗ್ ವೇಳೆ, ನಿರ್ದೇಶಕರು ತೊಂದರೆ ತೆಗೆದುಕೊಳ್ಳಬೇಡಿ ಎಂದರೂ ಎತ್ತಿಕೊಳ್ಳುವೆ ಎಂದರು. ಆ ದೃಶ್ಯ ಮುಗಿದಾಗ ಕಟ್ ಹೇಳಿದ ಬಳಿಕ ನನ್ನನ್ನ ಹಾಗೆ ಕೆಳಕ್ಕಿಳಿಸಿ ಬೆನ್ನುನೋವಾಗಿ ಹಾಗೇ ನೆಲದ ಮೇಲೆ ಬಿದ್ದು ಮಲಗಿಬಿಟ್ಟರು ಎಂದಿದ್ದಾರೆ.
ಬೆನ್ನು ನೋವು ಕಾಡುತ್ತಿತ್ತು
ಸರ್ಗೆ ಶೂಟಿಂಗ್ ಸಮಯದಲ್ಲಿಯೂ ಬೆನ್ನುನೋವು ಕಾಣಿಸಿಕೊಳ್ತಿತ್ತು. ತುಂಬಾ ಸಲ ನಾನು ನೋಡಿದ್ದೇನೆ. ಮಾತ್ರೆಗಳನ್ನು ತೆಗೆದುಕೊಳ್ತಾ ಇದ್ದರು. ಅವರೇನೂ ನಾಟಕ ಮಾಡಿಲ್ಲ ಎಂದು ನಟಿ ರಚನಾ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

