- Home
- Entertainment
- Sandalwood
- ಸೀರೆ ಉಟ್ಟು ಅಮೆರಿಕದಲ್ಲಿ ಪದವಿ ಪತ್ರ ಪಡೆದ ಧೃತಿ; ಕಂಗ್ರಾಜ್ಯುಲೇಶನ್ಸ್ ಎಂದು ಕೂಗಿದ Aswhini Puneeth Rajkumar
ಸೀರೆ ಉಟ್ಟು ಅಮೆರಿಕದಲ್ಲಿ ಪದವಿ ಪತ್ರ ಪಡೆದ ಧೃತಿ; ಕಂಗ್ರಾಜ್ಯುಲೇಶನ್ಸ್ ಎಂದು ಕೂಗಿದ Aswhini Puneeth Rajkumar
ನಟ ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳು ಧೃತಿ ಅವರು ಅಮೆರಿಕದ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಅಲ್ಲಿ ಪದವಿ ಪಡೆದಿದ್ದಾರೆ. 2021ರಲ್ಲಿ ಅವರು ಓದಲು ಆರಂಭಿಸಿ, ಈಗ ಪದವಿ ಸಿಕ್ಕಿದೆ.

ಮಗಳು ಪದವಿ ಪಡೆಯುವ ಟೈಮ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ವಂದಿತಾ ಪುನೀತ್ ರಾಜ್‌ಕುಮಾರ್ ಕೂಡ ಇದ್ದರು. ಈ ಮೂಲಕ ಧೃತಿಯ ಸಾಧನೆಗೆ ಸಾಕ್ಷಿಯಾಗಿದ್ದಾರೆ.
ಇನ್ನು ಮಗಳು ಪದವಿ ಪಡೆದು ಹೊರಗಡೆ ಬರುತ್ತಿದ್ದಂತೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕಂಗ್ಯಾಜ್ಯುಲೇಶನ್ಸ್ ಎಂದು ಕೂಗಿದ್ದಾರೆ. ಮಗಳ ಸಾಧನೆ ಬಗ್ಗೆ ಅಶ್ವಿನಿಗೆ ಹೆಮ್ಮೆಯಾದಂತೆ ಕಂಡಿದೆ.
ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್, ನ್ಯೂಯಾರ್ಕ್ ನಗರದ ದಿ ನ್ಯೂ ಸ್ಕೂಲ್‌ನ ಭಾಗವಾಗಿದ್ದು, ಯುನೈಟೆಡ್ ಸ್ಟೇಟ್ಸ್‌ನ ನಂಬರ್ ಒನ್ ಡಿಸೈನ್ ಸ್ಕೂಲ್ ಎಂದು QS ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 2022ರಲ್ಲಿ 5 ವರ್ಷಗಳಿಂದ ಮನ್ನಣೆ ಪಡೆದಿತ್ತು. 1896 ರಲ್ಲಿ ವಿಲಿಯಂ ಮೆರಿಟ್ ಚೇಸ್ ಸ್ಥಾಪಿಸಿದ ಈ ಶಾಲೆ, 1941 ರಲ್ಲಿ ಫ್ರಾಂಕ್ ಅಲ್ವಾ ಪಾರ್ಸನ್ಸ್ ಹೆಸರಿನಲ್ಲಿ ಮರುನಾಮಕರಣ ಆಯ್ತು. ಕಲೆ, ವಿನ್ಯಾಸ, ಸಾಮಾಜಿಕ ನ್ಯಾಯ, ಸಮರ್ಥನೀಯತೆಯ ಮೇಲೆ ಕೇಂದ್ರೀರಣ ಆಗಿತ್ತು.
ಪಾರ್ಸನ್ಸ್ ಐದು ವಿಭಾಗಗಳಲ್ಲಿ ಸ್ನಾತಕೋತ್ತರ, ಸ್ನಾತಕ ಮತ್ತು ಸಹಾಯಕ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ: ಕಲೆ, ಕಮ್ಯುನಿಕೇಷನ್ ಡಿಸೈನ್, ಫೋಟೋಗ್ರಾಫಿ, ವಾಸ್ತುಶಿಲ್ಪ, ಒಳಾಂಗಣ ವಿನ್ಯಾಸ, ವಿನ್ಯಾಸ ತಂತ್ರಗಳಿವೆ.
ನ್ಯೂಯಾರ್ಕ್‌ನ ಗ್ರೀನ್‌ವಿಚ್ ವಿಲೇಜ್‌ನಲ್ಲಿ ಮುಖ್ಯ ಕ್ಯಾಂಪಸ್ ಇದ್ದು, 600 ಕಾರ್ಯಕ್ಷೇತ್ರಗಳ ಮೇಕಿಂಗ್ ಸೆಂಟರ್, 17 ಡ್ರಾಯಿಂಗ್ ಸ್ಟುಡಿಯೋಗಳು, ಮತ್ತು 2,000 ಕಲಾಕೃತಿಗಳ ಸಂಗ್ರಹವನ್ನು ಹೊಂದಿದೆ. ಪಾರ್ಸನ್ಸ್ ಪ್ಯಾರಿಸ್ 1921 ರಲ್ಲಿ ಸ್ಥಾಪನೆಯಾಯಿತು. ಶುಲ್ಕ 39,03,475.24 ಆಗಿದೆ. ಆದರೆ 94% ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಲಭ್ಯವಿದೆ.
ಮಾರ್ಕ್ ಜಾಕೊಬ್ಸ್, ಡೊನ್ನಾ ಕಾರನ್‌ನಂತಹ ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳನ್ನು ಹೊಂದಿರುವ ಪಾರ್ಸನ್ಸ್, ನವೀನ ಪಠ್ಯಕ್ರಮ, NYC ಯ ಉದ್ಯಮ ಸಂಪರ್ಕಗಳಿಂದ ನಂ 1 ಶ್ರೇಯಾಂಕವನ್ನು ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

