- Home
- Entertainment
- Sandalwood
- ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಅನೀಶ್ ತೇಜೇಶ್ವರ್: ಈ ಸಲ ಕಮರ್ಷಿಯಲ್ ಜೊತೆ ಕಂಟೆಂಟ್ ಆಟ!
ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ಅನೀಶ್ ತೇಜೇಶ್ವರ್: ಈ ಸಲ ಕಮರ್ಷಿಯಲ್ ಜೊತೆ ಕಂಟೆಂಟ್ ಆಟ!
ಈ ಚಿತ್ರದಲ್ಲಿ ನನ್ನನ್ನು ವಿಶಿಷ್ಟ ಪಾತ್ರದಲ್ಲಿ ನೋಡಬಹುದು. ಚಿತ್ರದ ಶೀರ್ಷಿಕೆ, ತಾರಾಗಣ ಸೇರಿದಂತೆ ಉಳಿದ ವಿವರಗಳನ್ನು ಸದ್ಯದಲ್ಲೇ ಬಹಿರಂಗಗೊಳಿಸುತ್ತೇನೆ ಎನ್ನುತ್ತಾರೆ ಅನೀಶ್.

ಅನೀಶ್ ತೇಜೇಶ್ವರ್ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಅವರು ನಟನೆ ಜತೆಗೆ ನಿರ್ದೇಶನಕ್ಕೂ ಇಳಿದಿದ್ದಾರೆ. ಈ ಸಿನಿಮಾ ಕನ್ನಡದ ಜತೆಗೆ ತೆಲುಗಿನಲ್ಲೂ ಬರಲಿದೆ. ವಿಜಯ್ ಎಂ ರೆಡ್ಡಿ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.
ಅನೀಶ್ ತೇಜೇಶ್ವರ್, ರಾಮಾರ್ಜುನ ಚಿತ್ರದ ನಂತರ ಮತ್ತೆ ನಿರ್ದೇಶಕ್ಕಿಳಿಯುತ್ತಿದ್ದೇನೆ. ನಟನೆ ಮತ್ತು ನಿರ್ದೇಶನ ಎರಡೂ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಕಮರ್ಷಿಯಲ್ ಜೊತೆ ಕಂಟೆಂಟ್ ಇರುತ್ತದೆ.
ಈ ಚಿತ್ರದಲ್ಲಿ ನನ್ನನ್ನು ವಿಶಿಷ್ಟ ಪಾತ್ರದಲ್ಲಿ ನೋಡಬಹುದು. ಚಿತ್ರದ ಶೀರ್ಷಿಕೆ, ತಾರಾಗಣ ಸೇರಿದಂತೆ ಉಳಿದ ವಿವರಗಳನ್ನು ಸದ್ಯದಲ್ಲೇ ಬಹಿರಂಗಗೊಳಿಸುತ್ತೇನೆ ಎನ್ನುತ್ತಾರೆ.
ಇನ್ನು 2010ರಲ್ಲಿ ತೆರೆಕಂಡ ನಮ್ಮ ಏರಿಯಾದಲ್ಲೊಂದಿನ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಅನೀಶ್ ತೇಜೇಶ್ವರ್ ಪಾದಾರ್ಪಣೆ ಮಾಡಿದರು.
ನಂತರ ಕಾಫಿ ವಿತ್ ಮೈ ವೈಫ್ ಎಂಬ ಕನ್ನಡ ಮತ್ತು ತೆಲುಗು ಚಿತ್ರ ಮಾಡಿದರು.ಇವರಿಗೆ ಹೆಸರು ತಂದು ಕೊಟ್ಟಿದ್ದು `ಅಕಿರ' ಚಿತ್ರ. ಇದರಲ್ಲಿನ ಡ್ಯಾನ್ಸ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.
2018 ರಲ್ಲಿ ಇವರ ನಿರ್ಮಾಣದ `ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರ ತೆರೆಗೆ ಬಂದಿತು. ಪ್ರಸ್ತುತ `ರಾಮಾರ್ಜುನ'ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.