- Home
- Entertainment
- Sandalwood
- New Parents of Sandalwood: 2025ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಕನ್ನಡ ಹಿರಿತೆರೆ-ಕಿರುತೆರೆ ನಟರು
New Parents of Sandalwood: 2025ರಲ್ಲಿ ಪೋಷಕರಾಗಿ ಬಡ್ತಿ ಪಡೆದ ಕನ್ನಡ ಹಿರಿತೆರೆ-ಕಿರುತೆರೆ ನಟರು
New Parents of Sandalwood: ಕನ್ನಡ ಕಿರುತೆರೆಯ ಹಾಗೂ ಹಿರಿತೆರೆಯ ಅದೆಷ್ಟೋ ನಟ ನಟಿಯರಿಗೆ ಈ ವರ್ಷ ಹೊಸ ಪಟ್ಟವನ್ನು ನೀಡಿದ ವರ್ಷವಾಗಿ ಬದಲಾಗಿದೆ. ಹೌದು, ಹಲವು ನಟ ನಟಿಯರು ಈ ವರ್ಷ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಯಾರೆಲ್ಲಾ ಈ ವರ್ಷ ಪೋಷಕರಾದ್ರು ನೋಡೋಣ.

ಪೋಷಕರಾಗಿ ಬಡ್ತಿ ಪಡೆದ ನಟರು
ಕನ್ನಡ ಚಿತ್ರರಂಗದ ಹಲವಾರು ನಟ ನಟಿಯರಿಗೆ ಈ ವರ್ಷ ಜೀವನದ ಬಹುದೊಡ್ಡ ಉಡುಗೊರೆಯನ್ನು ನೀಡಿರುವ ವರ್ಷವಾಗಿದೆ. ಈ ವರ್ಷ ಚಂದನವನದ ಹಾಗೂ ಕನ್ನಡ ಕಿರುತೆರೆಯ ಹಲವು ನಟ ನಟಿಯರು ಪೋಷಕರಾಗಿ ಬಡ್ತಿ ಪಡೆದಿದ್ದಾರೆ.
ವಸಿಷ್ಠ ಸಿಂಹ - ಹರಿಪ್ರಿಯಾ
2025ರ ಆರಂಭದಲ್ಲಿ ತಮ್ಮ ಆನಿವರ್ಸರಿ ದಿನವೇ ಅಂದರೆ ಜನವರಿ ತಿಂಗಳಲ್ಲಿ ನಟ ಚಂದನವನದ ತಾರಾ ಜೋಡಿಗಳಾದ ವಸಿಷ್ಠ ಸಿಂಹ - ಹರಿಪ್ರಿಯಾ ಗಂಡು ಮಗುವಿಗೆ ಪೋಷಕರಾಗಿ ಬಡ್ತಿ ಪಡೆದಿದ್ದರು.
ರಶ್ಮಿ ಪ್ರಭಾಕರ್
‘ಲಕ್ಷ್ಮೀ ಬಾರಮ್ಮ’, ‘ಮಹಾಭಾರತ’, ‘ಪೌರ್ಣಮಿ’, ಕೃಷ್ಣ ಮುಕುಂದ ಮುರಾರಿ ಸೇರಿ ಹಲವಾರು ಕನ್ನಡ, ತಮಿಳು, ತೆಲುಗು ಸೀರಿಯಲ್’ಗಳಲ್ಲಿ ನಟಿಸಿದ್ದ ನಟಿ ರಶ್ಮಿ ಪ್ರಭಾಕರ್ ಮತ್ತು ನಿಖಿಲ್ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ರಿಷಿ-ಸ್ವಾತಿ
‘ಕವಲು ದಾರಿ’, ‘ಆಪರೇಶನ್ ಅಲಮೇಲಮ್ಮ’ ಸೇರಿ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ನಟ ರಿಷಿ ಮತ್ತು ಸ್ವಾತಿ ದಂಪತಿಗಳು ಜನವರಿಯಲ್ಲಿ ಹೆಣ್ಣುಮಗುವಿಗೆ ಪೋಷಕರಾಗಿದ್ದಾರೆ.
ಭಾವನಾ ರಾಮಣ್ಣ
ಕನ್ನಡದ ನಟಿ, ಭರತನಾಟ್ಯ ಕಲಾವಿದೆಯಾಗಿರುವ ಭಾವನಾ ರಾಮಣ್ಣ, ಮದುವೆಯಾಗದೆಯೇ ಐವಿಎಫ್ ಮೂಲಕ ಗರ್ಭ ಧರಿಸಿದ್ದರು. ಹೆಣ್ಣು ಮಗುವಿಗೆ ಭಾವನಾ ಜನ್ಮ ನೀಡಿದ್ದರು.
ವಾಸುಕಿ ವೈಭವ್-ಬೃಂದಾ
ಚಂದನವನದ ಜನಪ್ರಿಯ ಗಾಯಕ, ಸಂಗೀತ ನಿರ್ದೇಶಕರಾಗಿರುವ ವಾಸುಕಿ ವೈಭವ್ - ಬೃಂದಾ ದಂಪತಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಗಂಡು ಮಗುವಿಗೆ ಪೋಷಕರಾಗಿ ಬಡ್ತಿ ಪಡೆದರು. ಆದರೆ ಮಗು ಹುಟ್ಟಿ ಮೂರು ತಿಂಗಳ ಬಳಿಕ ಈ ವಿಷಯವನ್ನು ವಾಸುಕಿ ತಿಳಿಸಿದ್ದರು.
ರಿತ್ವಿಕ್ ಮಠದ್
‘ನಿನಗಾಗಿ’, ‘ಗಿಣಿರಾಮ’ ಸೀರಿಯಲ್ ನಟ ರಿತ್ವಿಕ್ ಮಠದ್ - ಸುಮನ್ ದಂಪತಿ ಹೆಣ್ಣು ಮಗುವಿಗೆ ತಂದೆ - ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ರಿತ್ವಿಕ್ ಇದೀಗ ಮಾರ್ನಮಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.
ಐಶ್ವರ್ಯಾ ವಿನಯ್
‘ರಾಮಾಚಾರಿ’ ‘ಸೇವಂತಿ’ ಸೇರಿ ಹಲವಾರು ಸೀರಿಯಲ್’ಗಳಲ್ಲಿ ವಿಲನ್ ಆಗಿ ನಟಿಸಿದ್ದ ನಟಿ ಐಶ್ವರ್ಯಾ ಹಾಗೂ ಸಿನಿಮಾ ಸೀರಿಯಲ್ ನಟ ವಿನಯ್ ದಂಪತಿ ಇತ್ತೀಚೆಗಷ್ಟೇ ತಾವು ಅವಳಿ ಮಕ್ಕಳಿಗೆ ಪೋಷಕರಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದರು.
ಹರ್ಷಿತಾ ವೆಂಕಟೇಶ್- ವಿನಯ್
ರಾಜಾರಾಣಿ ರಿಯಾಲಿಟಿ ಶೋ, ತ್ರಿಪುರ ಸುಂದರಿ, ಮೇಘ ಮಯೂರಿ ಸೀರಿಯಲ್ ನಟಿ ಹರ್ಷಿತಾ ವೆಂಕಟೇಶ್ ಮತ್ತು ವಿನಯ್ ದಂಪತಿಗಳು ಸಹ ಇತ್ತೀಚೆಗೆ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಈ ಜೋಡಿ ಕೂಡ ರೀಲ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಕೌಸ್ತುಭ ಮಣಿ
‘ನನ್ನರಸಿ ರಾಧೆ’, ‘ಗೌರಿ ಶಂಕರ’ ಸೀರಿಯಲ್‌ನಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಕೌಸ್ತುಭ ಮಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ನಟಿ ಮಗುವಿನ ಜೊತೆ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ.
ಅಜಯ್ ರಾಜ್-ಪದ್ಮಿನಿ
‘ಲಕ್ಷ್ಮೀ ನಿವಾಸ’ ಸೀರಿಯಲ್ ನಟ ಅಜಯ್ ರಾಜ್ ಹಾಗೂ ಹಿಟ್ಲರ್ ಕಲ್ಯಾಣ ನಟಿ ಪದ್ಮಿನಿ ದೇವನಹಳ್ಳಿ ದಂಪತಿಗೆ ಗಂಡು ಮಗುವಾಗಿದ್ದು, ಈ ಜೋಡಿ ಮಗನಿಗೆ ತಸ್ಮೈ ವಿಷ್ಣು ಎಂದು ನಾಮಕರಣ ಮಾಡಿದ್ದಾರೆ.
ಹರ್ಷಿತಾ
‘ಲಕ್ಷ್ಮೀ ಬಾರಮ್ಮ’, ‘ಶ್ರಾವಣಿ ಸುಬ್ರಹ್ಮಣ್ಯ’ ಸೀರಿಯಲ್’ಗಳಲ್ಲಿ ನಟಿಸಿ, ತಮ್ಮ ಪಾತ್ರದ ಮೂಲಕವೇ ಜನರನ್ನು ನಕ್ಕು ನಗಿಸಿದ್ದ ನಟಿ ಹರ್ಷಿತಾ ಹಾಗೂ ಸಂದೀಪ್ ಆಚಾರ್ ದಂಪತಿ ಹೆಣ್ಣುವಿಗೆ ಅಪ್ಪ ಅಮ್ಮನಾಗಿ ಬಡ್ತಿ ಪಡೆದಿದ್ದಾರೆ.
ಸುಷ್ಮಿತಾ ಗೌಡ
‘ಲವ್ ಮಾಕ್ಟೇಲ್ 2’ ಸಿನಿಮಾ ನಟಿ ಸುಶ್ಮಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇವರು ವಿದೇಶದಲ್ಲಿ ನೆಲೆಸಿದ್ದು, ಮಗುವಾದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಮನರಂಜನೆ ನೀಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

