ಹುಟ್ಟು ಹಬ್ಬದಂದು ಫ್ಯಾಮಿಲಿ ಫೋಟೋ ರಿವೀಲ್ ಮಾಡಿದ ನಟಿ Amulya!
ವೈರಲ್ ಆಗುತ್ತಿದೆ ನಟಿ ಅಮೂಲ್ಯ ಫ್ಯಾಮಿಲಿ ಫೋಟೋಶೂಟ್. ಮುದ್ದಾದ ಅವಳಿ ಮಕ್ಕಳಿಗೆ ಮೇಲೆ ನೆಟ್ಟಿಗರ ಕಣ್ಣು....

ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಸೆಪ್ಟೆಂಬರ್ 14ರಂದು 29ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಅಮೂಲ್ಯಾ ತಾಯಿಯಾದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾದ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಮೆಸೇಜ್ ಬರೆದುಕೊಂಡಿದ್ದಾರೆ.
'ಈ ವರ್ಷದ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ತಾಯಿಯಾಗಿ ನನ್ನ ಮುದ್ದಾದ ಗಂಡು ಮಕ್ಕಳ ಜೊತೆ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
' ವರ್ಷ ಕಳೆಯುತ್ತಿದ್ದಂತೆ ಸದಾ ಜೊತೆಗಿರುವ ಬೆಸ್ಟ್ ಗಿಫ್ಟ್. ನನ್ನ ಇಬ್ಬರೂ ಮಕ್ಕಳು ಮೋಸ್ಟ್ precious,forever growing, ಗ್ಲೋಯಿಂಗ್ ಗಿಫ್ಟ್‌ಗಳು. ಅವರ ಬೆಳವಣಿಗೆಯನ್ನು ನಾನು ಎಂಜಾಯ್ ಮಾಡುತ್ತಿರುವೆ. ನ್ಯೂ ಮಮ್ಮಿಯಾಗಿ ಇಂದು ನನ್ನ ಹ್ಯಾಪಿ ಬರ್ತಡೇ' ಎಂದಿದ್ದಾರೆ ಅಮೂಲ್ಯ.
ಅಮೂಲ್ಯ, ಪತಿ ಜಗದೀಶ್ ಮತ್ತು ಇಬ್ಬರು ಮುದ್ದು ಮಕ್ಕಳು ವೈಟ್ ಆಂಡ್ ವೈಟ್‌ನಲ್ಲಿ ಮಿಂಚುತ್ತಿದ್ದಾರೆ. ಕ್ಯಾಮೆರಾನ ಮಕ್ಕಳು ತುಂಬಾನೇ ಕ್ಯೂರಿಯಾಸಿಟಿಯಲ್ಲಿ ನೋಡುತ್ತಿದ್ದಾರೆ.
'ಹ್ಯಾಪಿ ಬರ್ತಡೇ ನನ್ನ ಸುಂದರವಾದ ಹೆಂಡತಿ, ನನ್ನ ಇಬ್ಬರು ಸನ್-ಶೈನ್‌ಗಳ ಮಮ್ಮಿ. ನಿನ್ನ ಕನಸು ನನಸಾಗಲಿ' ಎಂದು ಪತಿ ಜಗದೀಶ್ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.