- Home
- Entertainment
- Sandalwood
- ಡಿವೋರ್ಸ್ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್: Kantara ನಟನ ಓಪನ್ ಮಾತು ಕೇಳಿ
ಡಿವೋರ್ಸ್ ಆದ್ಮೇಲೆ ಮಾಜಿ ಪತ್ನಿ, ಫಾರಿನ್ ಲೇಡಿ ಜೊತೆ ಪುನಃ ಕ್ರಷ್: Kantara ನಟನ ಓಪನ್ ಮಾತು ಕೇಳಿ
'ಕಾಂತಾರ' ಖ್ಯಾತಿಯ ನಟ ಗುಲ್ಶನ್ ದೇವಯ್ಯಾ ಅವರು ತಮ್ಮ ಗ್ರೀಕ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಆದರೆ, ಬೇರ್ಪಟ್ಟ ಮೂರು ವರ್ಷಗಳ ನಂತರ, ತಮ್ಮ ಪ್ರೀತಿಯನ್ನು ಅರಿತುಕೊಂಡು ಮತ್ತೆ ಒಂದಾಗಿದ್ದಾರೆ. ಈ ಲೇಖನವು ಅವರ ಆಸಕ್ತಿದಾಯಕ ಪ್ರೇಮಕಥೆ ಮತ್ತು ಆರೋಗ್ಯದ ರಹಸ್ಯವನ್ನು ವಿವರಿಸುತ್ತದೆ.

ಕೆಟ್ಟ ಘಳಿಗೆಯಲ್ಲಿ ಕೆಟ್ಟ ನಿರ್ಧಾರ
ಯಾವುದೋ ಸಂದರ್ಭದಲ್ಲಿ, ಯಾವುದೋ ಕೆಟ್ಟ ಘಳಿಗೆಯಲ್ಲಿ, ಯಾವುದೋ ಒಂದು ಕಾರಣಕ್ಕೆ ದಂಪತಿಯ ನಡುವೆ ಬಿರುಕು ಬಿಟ್ಟು ಅದು ಡಿವೋರ್ಸ್ವರೆಗೂ ಹೋಗಬಹುದು. ಅಂಥ ಸಂದರ್ಭದಲ್ಲಿ ಮಾಡಿದ್ದು ತಪ್ಪಾಗಿದೆ ಎಂದು ತಿಳಿದರೂ ಪುನಃ ಒಬ್ಬರ ಬಳಿ ಇನ್ನೊಬ್ಬರು ಹೋಗಲು ಇಗೋ ಅಡ್ಡ ಬರುತ್ತದೆ. ಆದರೆ ಅದನ್ನು ಮರೆತು ಮತ್ತೆ ಒಂದಾಗುವುದು ತುಂಬಾ ಅಪರೂಪ ಎಂದೇ ಹೇಳಬಹುದು. ಆದರೆ ಕಾಂತಾರಾ ಚಾಪ್ಟರ್-1ಸಿನಿಮಾದ ಮೂಲಕ ಸಕತ್ ಫೇಮಸ್ ಆಗಿರೋ ಗುಲ್ಶನ್ ದೇವಯ್ಯಾ. ಈ ಚಿತ್ರದಲ್ಲಿ ಅವರು, ಕುಲಶೇಖರ ಪಾತ್ರವನ್ನು ನಿರ್ವಹಿಸಿದ್ದಾರೆ.
ಮಡಿಕೇರಿಯ ಬಾಲಿವುಡ್ ನಟ
ಅಂದಹಾಗೆ ಗುಲ್ಶನ್ ಅವರು ಬಾಲಿವುಡ್ ನಟ. ಮೂಲ ಮಡಿಕೇರಿ. ಫ್ಯಾಷನ್, ಮಾಡಲಿಂಗ್ ನಂತರ ಬಾಲಿವುಡ್ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಈಗ ಕಾಂತಾರಕ್ಕೆ ಎಂಟ್ರಿ ಕೊಟ್ಟರು.
ಇಂಟರೆಸ್ಟಿಂಗ್ ಲವ್ ಸ್ಟೋರಿ
ಅಂದಹಾಗೆ ಗುಲ್ಶನ್ ಅವರ ಲವ್ ಸ್ಟೋರಿ ಕೂಡ ಚಿತ್ರದಂತೆಯೇ ಇದೆ. ಇವರು ಮದುವೆಯಾಗಿದ್ದ ವಿದೇಶಿ ಯುವತಿಯನ್ನು. ಅವರು ಗ್ರೀಸ್‌ನ ಪ್ರಜೆ. ಅವರ ಕಲಿರೊಯ್ ಜಿಯಫೆಟ್. ಅವರು ಭಾರತದ ಪ್ರವಾಸಕ್ಕೆ ಬಂದಾಗ, ಲವ್ ಶುರುವಾಗಿತ್ತು. 2012ರಲ್ಲಿ ಕೊಡವ ಸಂಪ್ರದಾಯದಂತೆ ವಿವಾಹವಾಗಿದ್ದರು.
ಡಿವೋರ್ಸ್
ಆದರೆ ಎಂಟು ವರ್ಷಗಳ ದಾಂಪತ್ಯದ ನಂತರ ದಂಪತಿ ನಡುವೆ ಬಿರುಕು ಉಂಟಾಗಿ ಡಿವೋರ್ಸ್ ಪಡೆದರು. ಅದು ಕೂಡ ಜೀವನಾಂಶ ಅದೂ ಇದೂ ಎನ್ನುವ ತಕರಾರು ಇಲ್ಲದೇ ಹಾಗೆಯೇ ವಿಚ್ಛೇದನವಾಗಿತ್ತು. ಆದರೆ, ಮದುವೆ ಸ್ವರ್ಗದಲ್ಲಿ ನಡೆದ ಮೇಲೆ ಭೂಮಿಯಲ್ಲಿ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುವ ಮಾತಿನಂತೆ ಮೂರು ವರ್ಷಗಳ ಬಳಿಕ 2023ರಲ್ಲಿ ಗುಲ್ಶನ್ ಮತ್ತು ಕಲ್ಲಿರಾಯ್ಗೆ ತಾವು ಮಾಡಿದ್ದು ತಪ್ಪು ಎನ್ನಿಸಿದೆ. ಕ್ರಷ್ ಶುರುವಾಗಿದೆ. ಈಗ ಮುಂಚೆಗಿಂತಲೂ ನಮ್ಮ ಪ್ರೀತಿ ಹೆಚ್ಚಾಗಿದೆ ಅಂತಾರೆ ಗುಲ್ಶನ್.
ಮಾಜಿ ಪತ್ನಿ ಜೊತೆ ಕ್ರಷ್
ಇವರೀಗ ಡಿವೋರ್ಸ್ ಆದ್ಮೇಲೆ ಮತ್ತೆ ಆಕೆಯ ಜೊತೆಯೇ ಕ್ರಷ್ ಆಗಿರುವ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಮ್ಮ ನಡುವೆ ಏನೋ ಡಿಫರೆನ್ಸ್ ಆಯ್ತು. ಅದಕ್ಕೇ ಡಿವೋರ್ಸ್ ತೆಗೆದುಕೊಂಡ್ವಿ. ಎಲ್ಲಾ ರಿಲೇಷನ್ಷಿಪ್ಗಳಲ್ಲಿಯೂ ಒಂದು ಆತ್ಮ ಎಂದು ಇರುತ್ತದೆ. ಅಲ್ಲಿ ನಾವು ಮಾಡಿರೋದು ತಪ್ಪು ಎಂದು ತಿಳಿಯುತ್ತದೆ. ಇಬ್ಬರ ನಡುವೆ ಪ್ರೀತಿ ಇದ್ದರೆ ರಿಲೇಷನ್ಷಿಪ್ ಮುಂದುವರೆಯುತ್ತದೆ. ಆ ಪ್ರೀತಿ ನಮ್ಮಲ್ಲಿ ಇತ್ತು ಎಂದು ತಿಳಿಯಿತು. ಅದಕ್ಕಾಗಿಯೇ ಮತ್ತೆ ಒಂದಾದ್ವಿ ಎಂದಿದ್ದಾರೆ.
ಹೆಲ್ತ್ ಸೀಕ್ರೇಟ್
ಇದೇ ವೇಳೆ ತಮ್ಮ ಹೆಲ್ತ್ ಸೀಕ್ರೇಟ್ ಕೂಡ ಬಿಚ್ಚಿಟ್ಟಿದ್ದಾರೆ ನಟ. ಒಂದೇ ಹೊತ್ತು ಊಟ. ಮಾಡುವ ಊಟವನ್ನು ಚೆನ್ನಾಗಿ ಅಗಿದರೆ, ಅದರಷ್ಟು ಆರೋಗ್ಯ ಮತ್ತೊಂದಿಲ್ಲ ಎನ್ನುತ್ತದೆ ಆಯುರ್ವೇದ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

