- Home
- Entertainment
- Sandalwood
- ಮಡೆನೂರು ಮನುಗೆ ಕಿರುತೆರೆ, ಹಿರಿತೆರೆಯಿಂದ ಅಸಹಕಾರ- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಮಡೆನೂರು ಮನುಗೆ ಕಿರುತೆರೆ, ಹಿರಿತೆರೆಯಿಂದ ಅಸಹಕಾರ- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಮಡೆನೂರು ಮನು ಮಾತನಾಡಿರುವುದು ಎನ್ನಲಾದ ವೈರಲ್ ಆಡಿಯೋ ಈಗ ಇನ್ನೊಂದು ಸಂಕಷ್ಟ ತಂದಿದೆ. ಮಡೆನೂರು ಮನು ಅವರು ಸ್ಟಾರ್ ನಟರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಟಾರ್ ನಟರ ಅಭಿಮಾನಿಗಳಿಂದ ಫಿಲ್ಮ್ ಚೇಂಬರ್‌ನಿಂದ ದೂರು ಬಂದ ಹಿನ್ನೆಲೆ, ಫಿಲ್ಮ್ ಚೇಂಬರನಲ್ಲಿ ಸಭೆ ಕರೆಯಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆದಿದೆ. ಮಡೆನೂರು ಮನುರನ್ನ ಬ್ಯಾನ್ ಮಾಡಬೇಕು ಅನ್ನೋ ಒತ್ತಾಯ ಕೇಳಿ ಬಂದಿದೆ. ಕಿರುತೆರೆ ಹಾಗು ಸಿನಿಮಾದಿಂದ ಬ್ಯಾನ್ ಮಾಡಬೇಕು ಅಂತ ದೂರು ನೀಡಲಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಈ ಬಗ್ಗೆ ಮಾತಾಡಿದ್ದಾರೆ.
ಎಲ್ಲಾ ಸಂಸ್ಥೆಗಳನ್ನೂ ಕರೆದು ಸಭೆ ಮಾಡಿದ್ದೇವೆ. ಮನು ಅವರು ದುರಹಂಕಾರಿ ಮಾತನ್ನು ಆಡಿದ್ದಾರೆ. ಮನು ಅವರಿಗೆ ಅಸಹಕಾರ ತೋರಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಮನು ಜೈಲಲ್ಲಿದ್ದಾರೆ. ಎಲ್ಲ ಅಂಗ ಸಂಸ್ಥೆಗಳೂ ಅವರಿಗೆ ಸಹಾಯ ಮಾಡುವುದಿಲ್ಲ. ಅವರು ಯಾವುದೇ ರೀತಿಯಲ್ಲೂ ಚಟುವಟಿಕೆ ಮಾಡುವಂತಿಲ್ಲ.
ಕಿರುತೆರೆ ಹಿರಿತೆರೆಯಿಂದ ಅಸಹಕಾರ ಕೊಡಲಾಗಿದೆ. ಕಾನೂನುನಲ್ಲಿ ಸಮಸ್ಯೆ ಬಗೆ ಹರಿಸಿಕೊಂಡು ಬಂದ ಮೇಲೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ.
“ಕಿರುತೆರೆ ಹಾಗು ಸಿನಿಮಾದಿಂದ ಬ್ಯಾನ್ ಮಾಡಬೇಕು ಅಂತ ದೂರು ನೀಡಲಾಗಿದೆ. ಇಂದಿನಿಂದ ಕಿರುತೆರೆ- ಬೆಳ್ಳಿತೆರೆಯಿಂದ ಸಂಪೂರ್ಣ ಅಸಹಕಾರ ಕೊಡಲಾಗುವುದು. ಮಡೆನೂರು ಮನುಗೆ ಅನಿರ್ಧಿಷ್ಟಾವಧಿ ಅಸಹಕಾರ ಕೊಡಲಾಗುವುದು. ಮಡೆನೂರು ಮನು ವಿರುದ್ಧ ವಾಣಿಜ್ಯ ಮಂಡಳಿಯಿಂದಲೇ ಕೇಸ್ ದಾಖಲಿಸುತ್ತೇವೆ” ಎಂದು ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ ಸಹನಟಿ ಮೇಲೆ ಅ*ತ್ಯಾಚಾರ ಮಾಡಿದ್ದಾರೆ ಎಂದು ಮನು ವಿರುದ್ಧ ದೂರು ದಾಖಲಾಗಿದೆ. ಸದ್ಯ ಮನು ಜೈಲಿನಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

