ನಟ ದರ್ಶನ್ ಬರ್ತ್‌ಡೇ ಆಚರಿಸಲು ಬಂದ ಅಭಿಮಾನಿಗೆ ಕಪಾಳಮೋಕ್ಷ; ಪೊಲೀಸರ ಜೊತೆ ಕಿರಿಕ್
ಜೈಲುಪಾಲಾಗಿರುವನಟ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಈ ವೇಳೆ ದರ್ಶನ್ ನಿವಾಸದ ಬಳಿ ಅಭಿಮಾನಿಯೊಬ್ಬನಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದು, ಪತ್ನಿ ವಿಜಯಲಕ್ಷ್ಮೀ ಇನ್‌ಸ್ಟಾಗ್ರಾಂನಲ್ಲಿ ಪತಿಗಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.

ನಟ ದರ್ಶನ್ ಹುಟ್ಟುಹಬ್ಬ
ಚಂದನವನದ ನಟ ದರ್ಶನ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟನ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ.
ದರ್ಶನ್ ನಿವಾಸ
ಅಭಿಮಾನಿಗಳು ಜಮಾಯಿಸುವ ಹಿನ್ನೆಲೆ ದರ್ಶನ್ ಅವರ ಆರ್‌ಆರ್ ನಗರದ ನಿವಾಸದ ಬಳಿ ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಈ ಹಿಂದೆ ಅಭಿಮಾನಿಗಳ ಗಲಾಟೆಯಿಂದ ದರ್ಶನ್ ನಿವಾಸದ ನೆರೆಹೊರೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರ ಜೊತೆ ಅಭಿಮಾನಿಯ ಕಿರಿಕ್
ಇಂದು ಬೆಳಗ್ಗೆ ದರ್ಶನ್ ನಿವಾಸದ ಬಳಿ ಬಂದ ನಟನ ಅಭಿಮಾನಿ ಮತ್ತು ಸ್ಥಳದಲ್ಲಿದ್ದ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಪೊಲೀಸ್ ಅಧಿಕಾರಿ, ಅಭಿಮಾನಿಯ ಕಪಾಳಕ್ಕೆ ಏಟು ನೀಡಿದ್ದಾರೆ. ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದರ್ಶನ್‌ಗೆ ಪ್ರತಿದಿನ ಹುಟ್ಟುಹಬ್ಬ
ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪತಿ ಕೇಕ್ ಕಟ್ ಮಾಡುವ ಹಳೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್‌ಗೆ ಪ್ರತಿದಿನ ಹುಟ್ಟುಹಬ್ಬ ಎಂದು ಬರೆದುಕೊಂಡಿದ್ದಾರೆ. ಕಳೆದ ವರ್ಷ ಈ ಸಮಯದಲ್ಲಿ ದರ್ಶನ್ ಜಾಮೀನಿನ ಮೇಲೆ ಹೊರ ಬಂದಿದ್ದರು.
ಇದನ್ನೂ ಓದಿ: ಏನ್ ಗೊತ್ತಾ? I LoveYou ಅಷ್ಟೇ...; ನಟಿ ರಚಿತಾ ರಾಮ್ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!
ಸಿಡಿಪಿ ರಿಲೀಸ್
ಒಂದು ವೇಳೆ ದರ್ಶನ್ ಹೊರಗಡೆ ಇರುತ್ತಿದ್ರೆ ಬೆಂಗಳೂರಿನ ಆರ್‌ಆರ್ ನಗರದ ನಿವಾಸದ ಮುಂದೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದರು. ಇನ್ನು ದರ್ಶನ್ ಹುಟ್ಟುಹಬ್ಬದ ಅಭಿಮಾನಿಗಳು ಸಿಡಿಪಿ ರಿಲೀಸ್ ಮಾಡಿದ್ದು, ಫ್ಯಾನ್ಸ್‌ಗೆ ಕೈ ಕುಲುಕುತ್ತಿರುವ ರೀತಿಯ ಫೋಟೋ ಇದೆ.
ಇದನ್ನೂ ಓದಿ: ನಿಮ್ಮ ಸುಖಾಗಮನ ಬಯಸುವ; 'ಹೊಂದಿಸಿ ಬರೆಯಿರಿ' ನಿರ್ದೇಶಕರ ಸಿನಿಮಾದಲ್ಲಿ 'ಗೋಲ್ಡನ್ ಸ್ಟಾರ್' ಗಣೇಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

