- Home
- Entertainment
- Sandalwood
- ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ 25 ವರ್ಷ: ಸ್ಟಾರ್ ಜೋಡಿಗಳ Love Story ಸೂಪರ್
ಕನ್ನಡ ಚಿತ್ರರಂಗದ ತಾರಾ ಜೋಡಿಗಳಾದ ಪ್ರಿಯಾಂಕಾ ಮತ್ತು ಉಪೇಂದ್ರ ದಂಪತಿಗಳ ದಾಂಪತ್ಯ ಜೀವನಕ್ಕೆ 25 ವರ್ಷ ತುಂಬಿದ್ದು. ಈ ಸಂಭ್ರಮದಲ್ಲಿ ಜೋಡಿ ಅದ್ಧೂರಿಯಾಗಿ ಪಾರ್ಟಿ ಮಾಡಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ್ದಾರೆ. ಇಲ್ಲಿದೆ ಈ ಜೋಡಿಯ ಮುದ್ದಾದ ಲವ್ ಸ್ಟೋರಿ.

ಪ್ರಿಯಾಂಕಾ- ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ತ್ರಿವೇದಿ ಕನ್ನಡ ಚಿತ್ರರಂಗದ ಸ್ಟಾರ್ ಜೋಡಿಗಳು. ತಮ್ಮ ಎವರ್ ಗ್ರೀನ್ ಲವ್ ಸ್ಟೋರಿಯ ಮೂಲಕ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ ಈ ಜೋಡಿ. ಕನ್ನಡ ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿಗಳಲ್ಲಿ ಇವರೂ ಒಬ್ಬರು.
25ನೇ ವಿವಾಹ ವಾರ್ಷಿಕೋತ್ಸವ
ಪ್ರಿಯಾಂಕಾ- ಉಪೇಂದ್ರ ಜೋಡಿ ಇತ್ತೀಚೆಗೆ ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಪ್ರಿಯಾಂಕ ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಾರ್ಟಿ ಭಾರಿ ಜೋರಾಗಿಯೇ ನಡೆದಿದೆ.
ಫ್ಯಾಮಿಲಿ ಜೊತೆ ಸೆಲೆಬ್ರೇಶನ್
ಉಪೇಂದ್ರ - ಪ್ರಿಯಾಂಕಾ ದಂಪತಿ ಡಿಸೆಂಬರ್ 14 ರಂದು ಆಚರಿಸಿಕೊಂಡಿದ್ದಾರೆ. ಫ್ಯಾಮಿಲಿ ಹಾಗೂ ಅಭಿಮಾನಿಗಳ ಜೊತೆಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನ ಸೆಲೆಬ್ರೇಟ್ ಮಾಡಿದ್ದಾರೆ.
ಸ್ಟೈಲಿಶ್ ಲುಕ್ ನಲ್ಲಿ ಜೋಡಿಗಳು
ಆನಿವರ್ಸರಿ ಪಾರ್ಟಿಯಲ್ಲಿ ಉಪೇಂದ್ರ ಕಪ್ಪು ಬಣ್ಣದ ಲೆದರ್ ಜಾಕೆಟ್ ನಲ್ಲಿ ಮಿಂಚಿದ್ರೆ ಪ್ರಿಯಾಂಕಾ, ಹಸಿರು ಬಣ್ಣದ ಸ್ಲೀವ್ ಲೆಸ್ ಗೌನ್ ಧರಿಸಿ, ಸಖತ್ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ.
ಮಗಳು ಹಾಜರ್, ಮಗ ಗೈರು
ವೆಡ್ಡಿಂಗ್ ಆನಿವರ್ಸರಿ ಸೆಲೆಬ್ರೇಶನ್ ನಲ್ಲಿ ಮಗಳು ಐಶ್ವರ್ಯ, ಪ್ರಿಯಾಂಕಾ ತಾಯಿ ಹಾಗೂ ಸಹೋದರ ಹಾಜರಿದ್ದರು. ಆದರೆ ಮಗ ಆಯುಷ್ ಮಾತ್ರ ಮಿಸ್ಸಿಂಗ್ ಆಗಿದ್ದರು.
ಥ್ಯಾಂಕ್ಯೂ ಹೇಳಿದ ಪ್ರಿಯಾಂಕ
ನಮಗಾಗಿ ನೀವು ನೀಡಿದ ಪ್ರೀತಿ ಮತ್ತು ಆಶೀರ್ವಾದಗಳಿಗೆ ಎಲ್ಲರಿಗೂ ಧನ್ಯವಾದಗಳು.. ನಿಜಕ್ಕೂ ಕೃತಜ್ಞರಾಗಿರುತ್ತೇವೆ. ಪ್ರೀತಿ ಮತ್ತು ಸಂಬಂಧಗಳನ್ನು ಆಚರಿಸುವುದು ಜೀವನವನ್ನು ವಿಶೇಷವಾಗಿಸುತ್ತದೆ ಮತ್ತು ನಾವು ತುಂಬಾ ಸವಲತ್ತು ಮತ್ತು ವಿನಮ್ರತೆಯನ್ನು ಅನುಭವಿಸುತ್ತೇವೆ! ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
ಪ್ರಿಯಾಂಕಾ- ಉಪೆಂದ್ರ ಮೊದಲ ಭೇಟಿ
ಕನ್ನಡ ಸ್ಟಾರ್ ನಟ ಉಪೇಂದ್ರ ಹಾಗೂ ಬೆಂಗಾಲಿ ಬ್ಯೂಟಿ ಹಾಗೂ ನಟಿ ಪ್ರಿಯಾಂಕಾ ತ್ರಿವೇದಿ ಮೊದಲು ತೆರೆಹಂಚಿಕೊಂಡಿದ್ದು ತೆಲುಗಿನ ‘ರಾ’ ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಹಿಟ್ ಸಿನಿಮಾವಾಗಿತ್ತು.
H2O ಮೂಲಕ ಮತ್ತೆ ಜೋಡಿ
‘ರಾ’ ಬಳಿಕ ಉಪೇಂದ್ರ ನಿರ್ದೇಶನದ ‘ಎಚ್2ಒ’ ಚಿತ್ರದಲ್ಲಿ ಪ್ರಿಯಾಂಕಾ ತ್ರಿವೇದಿ ನಾಯಕಿಯಾಗಿ ಅಭಿನಯಿಸಿದರು. ಈ ಸಿನಿಮಾ ಹೊತ್ತಲ್ಲೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತು. ಸುಮಾರು ಒಂದು ವರ್ಷ ಪ್ರೀತಿಸಿದ ಜೋಡಿ 2003ರಲ್ಲಿ ಮನೆಯವರನ್ನು ಒಪ್ಪಿಸಿ ಬೆಂಗಾಳಿ ಸಂಪ್ರದಾಯದಂತೆ ಮದುವೆಯಾದರು.
ಇಬ್ಬರು ಮಕ್ಕಳು
ಇದೀಗ ಉಪೇಂದ್ರಾ ಮತ್ತು ಪ್ರಿಯಾಂಕಾ ದಂಪತಿಗಳ ದಾಂಪತ್ಯ ಜೀವನಕ್ಕೆ 25 ವರ್ಷ ತುಂಬಿದ್ದು, ಈ ಜೋಡಿಗೆ ಆಯುಷ್ ಮತ್ತು ಐಶ್ವರ್ಯ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಆಯುಷ್ ಸಿನಿಮಾಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

