ಪುಟ್ಟ ಕಂದಮ್ಮನ ಜೊತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಟಿ ರಶ್ಮಿ ಪ್ರಭಾಕರ್
Rashmi Prabhakar: ಕನ್ನಡ ಕಿರುತೆರೆಯ ಜನಪ್ರಿಯ ನಟಿ ರಶ್ಮಿ ಪ್ರಭಾಕರ್, ಕೆಲವು ತಿಂಗಳ ಹಿಂದೆ ಗಂಡು ಮಗುವಿಗೆ ತಾಯಿಯಾಗಿದ್ದು, ಇದೀಗ ಎರಡು ತಿಂಗಳ ಬಳಿಕ ಮಗುವಿನೊಂದಿಗೆ ಮೊದಲ ಬಾರಿಗೆ ಮೈಸೂರಿನ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಬಂದಿದ್ದಾರೆ.

ರಶ್ಮಿ ಪ್ರಭಾಕರ್
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಲಚ್ಚಿಯಾಗಿ ನಟಿಸುವ ಮೂಲಕ ಕನ್ನಡಿಗರ ಮನೆಮಗಳಾದ ರಶ್ಮಿ ಪ್ರಭಾಕರ್ ಇತ್ತೀಚೆಗೆ ಗಂಡು ಮಗುವಿಗೆ ತಾಯಿಯಾಗಿದ್ದರು. ಸದ್ಯ ನಟಿ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಮಗುವಿನ ಜೊತೆ ಔಟಿಂಗ್ ತೆರಳಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಮೈಸೂರು ಚಾಮುಂಡೇಶ್ವರಿ ದರ್ಶನ
ರಶ್ಮಿ ಪ್ರಭಾಕರ್ ತಮ್ಮ ಪತಿ ನಿಖಿಲ್ ಭಾರ್ಗವ್, ಎರಡು ತಿಂಗಳ ಹಸುಗೂಸು ಹಾಗೂ ಕುಟುಂಬಸ್ಥರ ಜೊತೆಗೆ ಮೈಸೂರಿಗೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಬಂದಿದ್ದಾರೆ. ಮಗು ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ಮಗುವಿನ ಜೊತೆಗೆ ನಟಿ ಔಟಿಂಗ್ ಮಾಡಿದ್ದಾರೆ. ಇನ್’ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡು KSIC ಸೀರೆ + My baby's first outing to ದೇವಸ್ಥಾನ +Mysuru's Favorite ಕಾಫಿ destination + ಕುಟುಂಬ = Bliss ಎಂದು ಬರೆದುಕೊಂಡಿದ್ದಾರೆ.
ಅಕ್ಟೋಬರ್ 3ರಂದು ಮಗು ಜನನ
ರಶ್ಮಿ ಪ್ರಭಾಕರ್ ಅವರ ಸೀಮಂತ ಕಾರ್ಯಕ್ರಮ ಮೂರು ಬಾರಿ ಅದ್ಧೂರಿಯಾಗಿ ನಡೆದಿತ್ತು. ನಟಿ ಮೆಟರ್ನಿಟಿ ಫೋಟೊ ಶೂಟ್ ಮಾಡಿ ಸಹ ಹಂಚಿಕೊಂಡಿದ್ದರು. ಅಕ್ಟೋಬರ್ 3ರಂದು ರಶ್ಮಿಗೆ ಗಂಡು ಮಗುವಿನ ಜನನವಾಗಿತ್ತು. ಬಳಿಕ ಮಗುವಿನ ಫೋಟೋ ಶೂಟ್ ಮಾಡಿ ಹಂಚಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ರಶ್ಮಿ ಪ್ರಭಾಕರ್ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಮಗುವಿಗೆ ಸಂಬಂಧಿಸಿದ ಸಾಮಾಗ್ರಿಗಳ ಜಾಹೀರಾತುಗಳನ್ನು ತಮ್ಮದೇ ರೀತಿಯಲ್ಲಿ ರ್ಪಸ್ತುತ ಪಡಿಸಿ, ರೀಲ್ಸ್ ಶೇರ್ ಮಾಡುತ್ತಿರುತ್ತಾರೆ. ಮಗುವಿನ ಜೊತೆಗಿನ ಮುದ್ದಾ ಮೂಮೆಂಟ್’ಗಳನ್ನು ಶೇರ್ ಮಾಡುತ್ತಿರುತ್ತಾರೆ.
ರಶ್ಮಿ ನಟಿಸಿದ ಕನ್ನಡ ಸೀರಿಯಲ್ ಗಳು
ರಶ್ಮಿ ಪ್ರಭಾಕರ್ ‘ಶುಭ ವಿವಾಹ’ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ನಂತರ ‘ಮಹಾಭಾರತದ’ಲ್ಲಿ ದುಶಾಲ ಮತ್ತು ಅಂಬೆಯಾಗಿ ನಟಿಸಿದರು. ‘ಜೀವನಚೈತ್ರ’ ದಲ್ಲಿ ದೊಡ್ಡಮಲ್ಲಿಯಾಗಿ ಗಮನ ಸೆಳೆದರು. ನಂತರ ಇವರಿಗೆ ಹೆಸರು, ಜನಪ್ರಿಯತೆ ತಂದುಕೊಟ್ಟದ್ದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಚಿನ್ನು ಪಾತ್ರ. ಬಳಿಕ ಕನ್ನಡ ಮನಸೆಲ್ಲಾ ನೀನೆ ಧಾರಾವಾಹಿಯಲ್ಲೂ ಹಾಗೂ ಸೂಪರ್ ಕ್ವೀನ್ ರಿಯಾಲಿಟಿ ಶೋದಲ್ಲೂ ನಟಿಸಿದ್ದರು.
ತೆಲುಗು-ತಮಿಳಿನಲ್ಲೂ ಫೇಮಸ್
ರಶ್ಮಿ ಪ್ರಭಾಕರ್ ಕನ್ನಡ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಕಿರುತೆರೆಯಲ್ಲೂ ಸಹ ಜನಪ್ರಿಯತೆ ಪಡೆದಿದ್ದಾರೆ. ಇವರು ತಮಿಳಿನಲ್ಲಿ ‘ಅರುಂಧತಿ’, ‘ಕಣ್ಣೆ ಕಲೈಮಾನೆ’ ಹಾಗೂ ತೆಲುಗಿನಲ್ಲಿ ‘ಪೌರ್ಣಮಿ’, ‘ಕಾವ್ಯಾಂಜಲಿ’ ಮತ್ತು ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್ ಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ಬಿಬಿ5 ಹಾಗೂ ಮಹಾಕಾವ್ಯ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

