- Home
- Entertainment
- Sandalwood
- ಸಾಹಸ ಸಿಂಹ ಬಿರುದು ಕೊಟ್ರೂ ವಿಷ್ಣು, ಜೋ ಸೈಮನ್ ಒಟ್ಟಿಗೆ ಸಿನಿಮಾ ಮಾಡಬಾರದು; ಧಮ್ಕಿ ಹಾಕಿ ಪತ್ರ ಬರೆದ್ರು!
ಸಾಹಸ ಸಿಂಹ ಬಿರುದು ಕೊಟ್ರೂ ವಿಷ್ಣು, ಜೋ ಸೈಮನ್ ಒಟ್ಟಿಗೆ ಸಿನಿಮಾ ಮಾಡಬಾರದು; ಧಮ್ಕಿ ಹಾಕಿ ಪತ್ರ ಬರೆದ್ರು!
ಡಾ ವಿಷ್ಣುವರ್ಧನ್ರಿಗೆ ಸಾಹಸಿಂಹ ಎಂಬ ಬಿರುದು ಕೊಟ್ಟಿದ್ದ ನಿರ್ದೇಶಕ ಜೋ ಸೈಮನ್ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಆದರೆ ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಅವರು ಸಿನಿಮಾ ಮಾಡಬಾರದು ಎಂದು ಕೆಲವರು ಪಟ್ಟು ಹಿಡಿದಿದ್ದರು.

ಜೋ ಸೈಮನ್ ಮೇಲೆ ಅಷ್ಟು ದ್ವೇಷ ಯಾಕೆ?
ಜೋ ಸೈಮನ್ ಅವರು ಕೇರಳದವರು ಎಂದು ಕೆಲವರು ಭಾವಿಸಿದ್ದರಂತೆ, ಆದರೆ ಮಂಡ್ಯದವರಾದ ಜೋ ಸೈಮನ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಬೆಳೆದರು ಎಂದು ಮನೆ ಮುಂದೆ ಕೂಡ ಕೆಲವರು ರಂಪಾಟ ಮಾಡಿದ್ದರಂತೆ.
ವಿಷ್ಣು, ಸೈಮನ್ ಮನೆ ಮೇಲೆ ಕಲ್ಲು
ಡಾ ವಿಷ್ಣುವರ್ಧನ್ ಅವರ ಪರ-ವಿರೋಧವಾಗಿ ಒಂದಿಷ್ಟು ಘಟನೆಗಳು ನಡೆದಿವೆ. ವಿಷ್ಣು ಮನೆ ಮೇಲೂ ಕೂಡ ಕಲ್ಲು ಬೀಳುತ್ತಿತ್ತು. ಇನ್ನು ಜೋ ಸೈಮನ್ ಮನೆ ಮೇಲೂ ಕೂಡ ಒಂದಿಷ್ಟು ದ್ವೇಷದ ಕಿಡಿಗಳು ಬಂದು ಬಿದ್ದಿದ್ದವು.
ಗೋಕಾಕ್ ಚಳುವಳಿಯಲ್ಲಿ ಸಾಯಬೇಕಿತ್ತು
ಗೋಕಾಕ್ ಚಳುವಳಿಯಲ್ಲಿ ಕೂಡ ಜೋ ಸೈಮನ್ ಅವರನ್ನು ಹೊಡೆಯಲು ನೋಡಿದ್ದರಂತೆ. ನಾನು ಬದುಕಿದ್ದೇ ಹೆಚ್ಚು ಎಂದು ಸೈಮನ್ ಅವರು ಹೇಳಿದ್ದುಂಟು. ವಿಷ್ಣುವರ್ಧನ್ ಹಾಗೂ ಜೋ ಉತ್ತಮ ಗೆಳೆಯರಾಗಿದ್ದರು. ಜೋ ಪ್ರಾಣಕ್ಕೆ ಅಪಾಯ ಬರುತ್ತಿದೆ ಎಂದು ಗೊತ್ತಾಗಿ ವಿಷ್ಣು ಅವರು ಕಣ್ಣೀರು ಹಾಕಿದ್ದರಂತೆ. ಇದನ್ನು ಜೋ ಅವರು ಸಂದರ್ಶನದಲ್ಲಿ ಹೇಳಿದ್ದರು.
ಜೋ ಸೈಮನ್ ಸಿನಿಮಾಗಳು
ಒಂದು ಪ್ರೇಮದ ಕಥೆ, ಸಿಂಹ ಜೋಡಿ, ನನ್ನ ರೋಶ ನೂರು ವರ್ಷ, ಮಹಾ ಪ್ರಚಂಡರು, ಸಾಹಸ ಸಿಂಹ, ಊರಿಗೆ ಉಪಕಾರಿ, ನ್ಯಾಯ ಗೆದ್ದಿತು, ಸಿಡಿದೆದ್ದ ಸಹೋದರ, ಮಹಾ ಪುರುಷ, ಹಾಂಕಾಂಗ್ನಲ್ಲಿ ಏಜೆಂಟ್ ಅಮರ್, ಟೈಮ್ ಬಾಂಬ್ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಒಟ್ಟಿನಲ್ಲಿ ನಟ, ನಿರ್ದೇಶಕ, ಡೈಲಾಗ್ ರೈಟರ್ ಆಗಿಯೂ ಕೂಡ ನೂರು ಸಿನಿಮಾಗಳ ಭಾಗ ಆಗಿದ್ದಾರೆ.
ವಿಷ್ಣು, ಜೋ ಸಿನಿಮಾ ಮಾಡಬಾರದು
ಅಂದಹಾಗೆ ವಿಷ್ಣುವರ್ಧನ್ ಹಾಗೂ ಜೋ ಸೈಮನ್ ಅವರು ಒಟ್ಟಾಗಿ ಸಿನಿಮಾ ಮಾಡಬಾರದು ಎಂದು ಒಂದಿಷ್ಟು ಜನರು ಪತ್ರ ಬರೆದಿದ್ದರಂತೆ. ಹೀಗಾಗಿ ಆಮೇಲೆ ಇವರಿಬ್ಬರು ಒಂದಿಷ್ಟು ಸಮಯ ಒಟ್ಟಿಗೆ ಸಿನಿಮಾ ಮಾಡಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

