ರಚಿತಾ ರಾಮ್ ದೊಡ್ಡೋರು, ನಾನೇ ಕೆಟ್ಟವನು: ನಿರ್ದೇಶಕ ನಾಗಶೇಖರ್
ಯಾರು ಒಳ್ಳೆಯವರು, ಕೆಟ್ಟವರು ಅಂತ ಭಗವಂತ ನೋಡಿಕೊಳ್ಳಲಿ ಬಿಡಿ. ಅವರು ಅಷ್ಟೆಲ್ಲಾ ಹೇಳಿದ್ದಾರೆ, ಅವರೇ ದೊಡ್ಡೋರು, ನಾನೇ ಕೆಟ್ಟವನು ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.

ಮ್ಯಾಟ್ನಿ ಚಿತ್ರದ ಪ್ರಮೋಷನ್‌ಗೆ ದರ್ಶನ್ ಸರ್ ಬರುತ್ತಾರೆ ಅಂದಾಗ ನಾನು ಇಲ್ಲ ಅಂದಿಲ್ಲ, ಹೋಗಿ ಅಂತ ರಚಿತಾರಾಮ್ ಅವರನ್ನು ಕಳುಹಿಸಿ ಕೊಟ್ಟಿದ್ದೆ. ಅದಕ್ಕೆ ವಿಡಿಯೋ ಸಾಕ್ಷಿಗಳೆಲ್ಲಾ ಇದೆ. ನಾನು ಎಷ್ಟು ಸಪೋರ್ಟ್ ಮಾಡಿದ್ದೆ ಅಂತ ರಚಿತಾ ಅವರಿಗೆ ಗೊತ್ತಿದೆ.
ಯಾರು ಒಳ್ಳೆಯವರು, ಕೆಟ್ಟವರು ಅಂತ ಭಗವಂತ ನೋಡಿಕೊಳ್ಳಲಿ ಬಿಡಿ. ಅವರು ಅಷ್ಟೆಲ್ಲಾ ಹೇಳಿದ್ದಾರೆ, ಅವರೇ ದೊಡ್ಡೋರು, ನಾನೇ ಕೆಟ್ಟವನು ಎಂದು ‘ಸಂಜು ವೆಡ್ಸ್ ಗೀತಾ 2’ ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.
‘ಸಂಜು ವೆಡ್ಸ್ ಗೀತಾ 2’ ಪ್ರಚಾರಕ್ಕೆ ರಚಿತಾ ರಾಮ್ ಬರುತ್ತಿಲ್ಲ ಎಂಬ ನಾಗೇಶೇಖರ್ ಆರೋಪಕ್ಕೆ ರಚಿತಾ ರಾಮ್ ಈ ಚಿತ್ರತಂಡ ಬೇರೆ ಚಿತ್ರದ ಪ್ರಮೋಷನ್‌ಗೆ ನನ್ನನ್ನು ಕಳುಹಿಸಿರಲಿಲ್ಲ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ನಾಗಶೇಖರ್ ಈ ಹೇಳಿಕೆ ನೀಡಿದ್ದಾರೆ.
ನಾನು ತಪ್ಪು ಮಾಡಿಲ್ಲ: ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಚಿಕ್ಕ ಮಕ್ಕಳ ಕಾಲಿಗೆ ಬಿದ್ದು ಕ್ಷಮೆ ಕೇಳಲೂ ಸಿದ್ಧಳಿದ್ದೇನೆ. ತಪ್ಪೇ ಮಾಡಿಲ್ಲ ಅಂದ ಮೇಲೆ ಆ ದೇವರೇ ಬಂದರೂ ನಾನು ಕಾಲಿಗೆ ಬೀಳಲ್ಲ.
‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡ ಹಲವು ಪ್ರೆಸ್‌ಮೀಟ್‌ಗಳಲ್ಲಿ, ಸಂದರ್ಶನಗಳಲ್ಲಿ ನನ್ನ ಬಗ್ಗೆ ಆಡಿರುವ ಮಾತುಗಳು, ಕೊಟ್ಟಿರುವ ಹೇಳಿಕೆಗಳು ನನಗೆ ತುಂಬಾ ನೋವುಂಟು ಮಾಡಿವೆ.
ಈ ಸಿನಿಮಾಕ್ಕಾಗಿ ನಾನು ಒಂದೂ ಮುಕ್ಕಾಲು ವರ್ಷ ಕೆಲಸ ಮಾಡಿದ್ದೇನೆ. ಚಿತ್ರದ ಪ್ರಚಾರದ ಕಾರ್ಯಕ್ರಮಗಳಲ್ಲಿ ನನ್ನ ಕೆಲಸ, ಬದ್ಧತೆ ಬಗ್ಗೆ ಹೊಗಳಿದ್ದಾರೆ. ಈಗ ಅದೇ ಚಿತ್ರತಂಡ ನನ್ನನ್ನು ಸುಳ್ಳುಗಾರ್ತಿ, ನಾಟಕ ಆಡೋಳು ಅಂತಿದ್ದಾರೆ ಎಂದರು ರಚಿತಾ ರಾಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

