- Home
- Entertainment
- Sandalwood
- ಮಿಡಲ್ ಕ್ಲಾಸ್ ಮಹಿಳೆಯಾದ ಉಪ್ಪಿ ಹೆಂಡ್ತಿ.. 'ಸೆಪ್ಟೆಂಬರ್ 21'ರ ಹಿಂದೆ ಬಿದ್ದಿದ್ಯಾಕೆ ಪ್ರಿಯಾಂಕ ಉಪೇಂದ್ರ
ಮಿಡಲ್ ಕ್ಲಾಸ್ ಮಹಿಳೆಯಾದ ಉಪ್ಪಿ ಹೆಂಡ್ತಿ.. 'ಸೆಪ್ಟೆಂಬರ್ 21'ರ ಹಿಂದೆ ಬಿದ್ದಿದ್ಯಾಕೆ ಪ್ರಿಯಾಂಕ ಉಪೇಂದ್ರ
ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಿಯಾಂಕ ಉಪೇಂದ್ರ ನಟಿಸಿರುವ 'ಸೆಪ್ಟೆಂಬರ್ 21' ಚಿತ್ರತಂಡ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.

ಪ್ರಿಯಾಂಕಾ ಲುಕ್ ವೈರಲ್
ಪ್ರಿಯಾಂಕ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಸಿನಿಮಾದಲ್ಲಿನ ಪ್ರಿಯಾಂಕಾ ಉಪೇಂದ್ರ ಲುಕ್ ಬಿಡುಗಡೆಯಾಗಿದೆ. ಮಧ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಗೋವಾ ಚಿತ್ರೋತ್ಸವಕ್ಕೆ ಪ್ರವೇಶ
ಕರೆನ್ ಕ್ರಿಷ್ಠಿ ಸುವರ್ಣ ಈ ಸಿನಿಮಾದ ನಿರ್ದೇಶಕಿ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ತಯಾರಾಗಿರುವ ಈ ಸಿನಿಮಾ 56ನೇ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಸವಾಲಿನ ಪಾತ್ರ
‘ನನ್ನ ವೃತ್ತಿ ಜೀವನದ ಅತ್ಯಂತ ಸವಾಲಿನ ಪಾತ್ರ ಇದಾಗಿದ್ದು, ಅಷ್ಟೇ ಸೊಗಸಾಗಿ ಯುವ ನಿರ್ದೇಶಕಿ ಚಿತ್ರೀಕರಿಸಿದ್ದಾರೆ’ ಎಂದು ಪ್ರಿಯಾಂಕ ಉಪೇಂದ್ರ ಹೇಳಿದ್ದಾರೆ.
ಆಲ್ಝೈಮರ್ ಕುರಿತ ಕಥೆ
ಆಲ್ಝೈಮರ್ ಕಾಯಿಲೆ ಸುತ್ತ ನಡೆಯುವ ಕಥೆ ಇದಾಗಿದ್ದು, ರೋಗಿಗಿಂತ ಅವನ ಪಾಲನೆ ಮಾಡುವವರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯ ಎಂಬುದು ಚಿತ್ರದ ಅಡಿಬರಹವಾಗಿದೆ.
ಬಾಲಿವುಡ್ ನಟ ನಟಿಯರ ದಂಡು
ಬಾಲಿವುಡ್ ಕಲಾವಿದರಾದ ಪ್ರವೀಣ್ ಸಿಂಗ್ ಸಿಸೋಡಿಯ, ಝರಿನಾ ವಾಹಬ್, ಅಮಿತ್ ಬೇಲ್, ಅಜಿತ್ ಶಿದಾಯೆ, ಸಚಿನ್ ಪಾಟೇಕರ್ ಇದರಲ್ಲಿ ನಟಿಸಿದ್ದಾರೆ. ಬಾಲಿವುಡ್ ನಿರ್ದೇಶಕ ಇಮ್ತಿಯಾಜ್ ಆಲಿ ಪತ್ನಿ ಪ್ರೀತಿ ಆಲಿ ನಿರ್ಮಾಪಕರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

