MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!

ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!

Actor Shine Shetty Movie: ರಂಗಸ್ಥಳ ಸ್ಟುಡಿಯೋಸ್ ನಿರ್ಮಾಣದ ಹೊಸ ಕನ್ನಡ ಸಿನಿಮಾ ಶಂಕರಾಭರಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶೈನ್‌ ಶೆಟ್ಟಿ, ದಿವಾಕರ್‌ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. 

1 Min read
Author : Padmashree Bhat
Published : Feb 17 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
14
ಈ ಸಿನಿಮಾದ ಕಥೆ ಏನು?
Image Credit : shine shetty instagram

ಈ ಸಿನಿಮಾದ ಕಥೆ ಏನು?

ಕರಾವಳಿ ಕರ್ನಾಟಕದ ಬದುಕಿನ ನೈಜತೆ ಮತ್ತು ಮಣ್ಣಿನ ಸುವಾಸನೆಯನ್ನು ಹೊತ್ತಿರುವ ಈ ಕಥೆಯ ಮಧ್ಯದಲ್ಲಿ ಒಂದು ಬಸ್ ಚಾಲಕ ಮತ್ತು ಅವನ ಬಸ್ “ಶಂಕರಾಭರಣ.” ದೂರದ ಹಳ್ಳಿಗೆ ಹೊಸ ಮಾರ್ಗ ನೀಡಲ್ಪಟ್ಟಾಗ, ಅದು ಕೇವಲ ಕೆಲಸದ ಬದಲಾವಣೆ ಅಲ್ಲ; ಅದು ಬದುಕಿನ ಪ್ರಯಾಣವಾಗುತ್ತದೆ. ಮಾರ್ಗದಲ್ಲಿ ಎದುರಾಗುವ ಸವಾಲುಗಳು, ಮೌನ ಹೊಣೆಗಾರಿಕೆಗಳು ಮತ್ತು ಸಿಕ್ಕುವ ಮಾನವೀಯ ಸಂಬಂಧಗಳು ಅವನ ಜೀವನವನ್ನು ರೂಪಿಸುತ್ತವೆ. 

ಉಡುಪಿ-ಮಂಗಳೂರು ಭಾಗದ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯ ಹಾಸ್ಯವನ್ನು ಪ್ರಾಮಾಣಿಕವಾಗಿ ತೆರೆಗೆ ತರುವ ಪ್ರಯತ್ನ ಈ ಚಿತ್ರದಲ್ಲಿದೆ. ಜೋರಾಗಿ ಮಾತನಾಡದರೂ ಜಗತ್ತನ್ನೇ ಹೊತ್ತು ನಡೆಯುವ ಮನುಷ್ಯರ ಕಥೆ ಇದು.

24
ದೇಶ-ವಿದೇಶಗಳಲ್ಲಿ ಮೆಚ್ಚುಗೆ
Image Credit : Instagram

ದೇಶ-ವಿದೇಶಗಳಲ್ಲಿ ಮೆಚ್ಚುಗೆ

ಒಂದು ಮೊಟ್ಟೆಯ ಕಥೆ, ಜೇಮ್ಸ್ ಮತ್ತು‌ ಕಾಂತಾರ ಸಿನಿಮಾಗಳ ಮೂಲಕ ತಮ್ಮದೇ ಆದ ಗುರುತು ಮೂಡಿಸಿರುವ ಶೈನ್, ಈ ಸಿನಿಮಾದಲ್ಲಿ ಭಾವನಾತ್ಮಕ ಗಾಢತೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸುಮಂತ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅವರ ಮೊದಲ ಸಿನಿಮಾ ಮಿಥ್ಯ ದೇಶ-ವಿದೇಶದ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರದಲ್ಲಿ ಅವರು ನೈಜ ಮತ್ತು ಪಾತ್ರಕೇಂದ್ರಿತ ಕಥನವನ್ನು ಮುಂದಿಟ್ಟಿದ್ದಾರೆ.

Related Articles

Related image1
ಬಿಗ್ ಬಾಸ್‌ ಮುಗಿದು ಒಂದು ವರ್ಷದ ನಂತರ ಕಾರು ಪಡೆದ ಶೈನ್‌ ಶೆಟ್ಟಿ!
Related image2
ಶೈನ್‌ ಶೆಟ್ಟಿ, ಅಂಕಿತಾ ಅಮರ್‌ 'Just Married'‌ ಸಿನಿಮಾ ರಿಲೀಸ್‌ ದಿನಾಂಕ ರಿವೀಲ್
34
ಚರಣ್‌ ರಾಜ್‌ ಸಂಗೀತ
Image Credit : social media

ಚರಣ್‌ ರಾಜ್‌ ಸಂಗೀತ

ಚರಣ್‌ ರಾಜ್‌ ಸಂಗೀತವನ್ನು ನೀಡಿದ್ದಾರೆ. ಬಹು ಪ್ರಶಸ್ತಿ ವಿಜೇತರಾದ ಅವರ ಸಂಗೀತ ಈ ಕಥೆಯ ಭಾವನಾತ್ಮಕ ಅಂತರಾಳವನ್ನು ಮತ್ತಷ್ಟು ಗಾಢಗೊಳಿಸುವ ನಿರೀಕ್ಷೆ ಇದೆ. ಉದಿತ್‌ ಖುರಾನಾ ಛಾಯಾಗ್ರಹಣವನ್ನು ನಿರ್ವಹಿಸಿದ್ದು, ಕರಾವಳಿಯ ಸೌಂದರ್ಯವನ್ನು ಜೀವಂತವಾಗಿ ತೆರೆಗೆ ತರಲು ವಿಶೇಷ ಗಮನ ಹರಿಸಲಾಗಿದೆ.

44
ಶೈನ್‌ ಶೆಟ್ಟಿ ಏನಂತಾರೆ?
Image Credit : our own

ಶೈನ್‌ ಶೆಟ್ಟಿ ಏನಂತಾರೆ?

ಶಂಕರಾಭರಣ – ಇದು ವೇಗದ ಕಥೆ ಅಲ್ಲ. ಇದು ಬದುಕಿನ ದಾರಿಯ ಕಥೆ. “ರಂಗಸ್ಥಳ ಸ್ಟುಡಿಯೋಸ್ ಮೂಲಕ ನಮ್ಮ ಉದ್ದೇಶ ನೈಜ ಹಾಗೂ ಹೃದಯಸ್ಪರ್ಶಿ ಕಥೆಗಳನ್ನು ಹೇಳುವುದು,” ಎಂದು ನಿರ್ಮಾಪಕರಾದ ಶೈನ್ ಶೆಟ್ಟಿ ಮತ್ತು ದಿವಾಕರ್ ಶೆಟ್ಟಿ ತಿಳಿಸಿದ್ದಾರೆ. 'ಶಂಕರಾಭರಣ' ನಮ್ಮ ಮಣ್ಣಿನಿಂದ ಬಂದ ಕಥೆ. ಮೌನವಾಗಿ ಬದುಕನ್ನೇ ಹೊತ್ತು ನಡೆಯುವ ಸಾಮಾನ್ಯ ಮನುಷ್ಯರಿಗೆ ಇದು ಗೌರವ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಜೈಲಿನಲ್ಲಿ ದಚ್ಚು ಬರ್ತ್‌ಡೇ; ಅತ್ತ ಮನೆ ಬಾಗಿಲಿಗೆ ಕೈಮುಗಿದು ಅಭಿಮಾನ ತೋರಿದ ಆಂಟಿ, ಪೊಲೀಸರಿಗೆ ಆವಾಜ್‌!
Recommended image2
ವಿದೇಶದಲ್ಲಿದ್ರೂ ಸಂಪ್ರದಾಯಬದ್ಧವಾಗಿ 30ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಅಣ್ಣಾವ್ರ ನಾಯಕಿ
Recommended image3
'ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ' ವೇಳೆ ನೀಚರಿಂದ ಶೌಚಾಲಯದಲ್ಲಿದ್ದ ನಟಿಯ ವಿಡಿಯೋ ರೆಕಾರ್ಡ್
Related Stories
Recommended image1
ಬಿಗ್ ಬಾಸ್‌ ಮುಗಿದು ಒಂದು ವರ್ಷದ ನಂತರ ಕಾರು ಪಡೆದ ಶೈನ್‌ ಶೆಟ್ಟಿ!
Recommended image2
ಶೈನ್‌ ಶೆಟ್ಟಿ, ಅಂಕಿತಾ ಅಮರ್‌ 'Just Married'‌ ಸಿನಿಮಾ ರಿಲೀಸ್‌ ದಿನಾಂಕ ರಿವೀಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved