ಕಿರೀಟಿ ಡ್ಯಾನ್ಸ್ ನೋಡಿದಾಗ ಅಪ್ಪು ನೋಡಿದ ಹಾಗಾಗುತ್ತೆ: ಶಿವಣ್ಣ
ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ಈ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್ ನೀಡಿದ್ದಾರೆ.

‘ಜೂನಿಯರ್ ಸಿನಿಮಾ ಹೀರೋ ಕಿರೀಟಿ ಬಹಳ ಸೊಗಸಾಗಿ ನೃತ್ಯ ಮಾಡುತ್ತಾರೆ. ಅವರ ಡ್ಯಾನ್ಸ್ ನೋಡಿದಾಗ ನನಗೆ ಅಪ್ಪೂನೆ ನೋಡಿದ ಹಾಗಾಗುತ್ತೆ’. ಇವು ಶಿವಣ್ಣ ಅವರ ಮಾತುಗಳು.
ಕಿರೀಟಿ, ಶ್ರೀಲೀಲಾ ತಾರಾಗಣದಲ್ಲಿರುವ ‘ಜೂನಿಯರ್’ ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಿನಿಮಾ ಜು.18ಕ್ಕೆ ತೆರೆಗೆ ಬರಲಿದೆ.
ಶ್ರೀಲೀಲಾ ಮಾತನಾಡಿ, ‘ನಿಮ್ ಕನ್ನಡದ ಹುಡುಗೀನ ನೀವು ಬಿಟ್ ಕೊಡಲ್ಲ ಅಂತ ನನಗೊತ್ತು. ನಾನು ಯಾವೆಲ್ಲ ಭಾಷೆಯಲ್ಲಿ ನಟಿಸಿದರೂ ನಿಮ್ಮ ಪ್ರೀತಿ ನನ್ನ ಅನುಭವಕ್ಕೆ ಬರುತ್ತಲೇ ಇದೆ. ಸ್ಯಾಂಡಲ್‌ವುಡ್ ಅಂದರೇನೆ ಸಿಲ್ವರ್ ಸ್ಪೂನಿಂಗ್’ ಎಂದರು.
ಕಿರೀಟಿ, ‘ಅಪ್ಪು ಸರ್ ನನಗೆ ಸ್ಫೂರ್ತಿ. ಶಿವಣ್ಣ ಅವರ ಹೊಡಿ ಮಗ ಹೊಡಿ ಹಾಡಿಗೆ ಸ್ಕೂಲಲ್ಲಿ ಮೊದಲ ಸಲ ಡ್ಯಾನ್ಸ್ ಮಾಡಿದ್ದೆ’ ಎಂದರು.
ರವಿಚಂದ್ರನ್, ಜೆನಿಲಿಯಾ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರವನ್ನು ರಜನಿ ಕೊರ್ರಪಾಟಿ ನಿರ್ಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

