ಮದುವೆ ಆಗುತ್ತಿದ್ದಂತೆ ನಟನೆಗೆ ಗುಡ್ ಬೈ ಹೇಳಿ ವಿದೇಶ ಸೇರಿದ ನಟಿಯರು
Sandalwood Actresses: ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಹಲವಾರು ನಟಿಯರು ಮದುವೆಯಾಗುತ್ತಿದ್ದಂತೆ, ನಟನೆಯಿಂದ ದೂರ ಉಳಿದಿದ್ದಾರೆ. ಸಿನಿಮಾವೇ ಬೇಡವೆಂದು ಅವರಲ್ಲಿ ಕೆಲವರು, ಪತಿ ಜೊತೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಇವತ್ತಿಗೂ ವಿದೇಶದಲ್ಲಿದ್ದುಕೊಂಡು ಅಪ್ ಡೇಟ್ ಕೊಡುತ್ತಲೇ ಇದ್ದಾರೆ.

ಕನ್ನಡ ನಟಿಯರು
ಕನ್ನಡದ ಒಂದು ಕಾಲದಲ್ಲಿ ಮಿಂಚಿದ ನಟಿಯರಲ್ಲಿ ಅನೇಕರು, ಮದುವೆಯಾಗುತ್ತಿದ್ದಂತೆ, ನಟನೆಗೆ ಗುಡ್ ಬೈ ಹೇಳಿದ್ದರು. ಅವರಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹೀರೋಯಿನ್ ಗಳು ಕೂಡ ಇದ್ದಾರೆ. ಇಲ್ಲಿದೆ ನೋಡಿ ಯಾವೆಲ್ಲಾ ನಟಿಯರು ಮದುವೆಯಾಗುತ್ತಿದ್ದಂತೆ, ಸಿನಿಮಾ ಬಿಟ್ಟು ಫಾರಿನ್ ನಲ್ಲಿ ಸೆಟಲ್ ಆದ್ರು ಎನ್ನುವ ಕುರಿತು ಮಾಹಿತಿ.
ರಂಭಾ
ನಟಿ ರಂಭಾ, ಕನ್ನಡ, ತಮಿಳೂ, ತೆಲುಗು, ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲೂ ಮೋಡಿ ಮಾಡಿದ ನಟಿ ರಂಭಾ. ಇವರು ಭಾರತದ ಅತ್ಯಂತ ಸುಂದರ ಹಾಗೂ ಸ್ಟೈಲಿಶ್ ನಟಿ ಕೂಡ ಆಗಿದ್ದು, ಇವರು ಇಂದ್ರ ಎನ್ನುವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ಲಂಡನ್ ನಲ್ಲಿ ನೆಲೆದಿದ್ದಾರೆ.
ಮಾಧವಿ
ಕನ್ನಡದ ಸ್ಟಾರ್ ನಟಿ ಮಾಧವಿ, ಇವರು ತಮಿಳು, ಹಿಂದಿಯಲ್ಲೂ ಫೇಮಸ್. 1997ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಾಧವಿ, ನಂತರ ಪತಿ ರಾಲ್ಫ್ ಶರ್ಮಾ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಸದ್ಯ ನಟಿ ಮೂವರು ಮಕ್ಕಳಿಗೆ ತಾಯಿಯಾಗಿದ್ದಾರೆ.
ಸಿಂಧು ಮೆನನ್
ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ ನಟಿ ಸಿಂಧು ಮೆನನ್, ಖುಷಿ, ನಂದಿ, ಪ್ರೇಮಾ ಪ್ರೇಮಾ ಪ್ರೇಮಾ ಸೀರೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ ಮದುವೆಯ ಬಳಿಕ, ಸಿಂಧು ಮೆನನ್ ನಟನೆಗೆ ಗುಡ್ ಬೈ ಹೇಳಿದ್ರು. ಈಕೆಯ ಪತಿ ಪ್ರಭು. ಇವರು ಸದ್ಯ ಯುಕೆನಲ್ಲಿ ನೆಲೆಸಿದ್ದಾರೆ.
ದೀಪಿಕಾ ಕಾಮಯ್ಯ
ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ಮಿಂಚಿದ ನಟಿ ದೀಪಿಕಾ ಕಾಮಯ್ಯ. ಇವರು ಕನ್ನಡದಲ್ಲಿ ಚಿಂಗಾರಿ, ಆಟೋರಾಜ, ನೀನೆ ಬರಿ ನೀನೆ, ಜಗ್ಗುದಾದ ಸಿನಿಮಾಗಳಲ್ಲಿ ನಟಿಸಿದ್ದರು. ಇವರ ಪತಿ ಸುಮಂತ್ ಗೋಪಿ. ಇವರು ತಮ್ಮ ಪತಿ ಜೊತೆ ಸದ್ಯ ಆಷ್ಟ್ರೇಲಿಯಾದಲ್ಲಿ ನೆನೆಸಿದ್ದಾರೆ,
ಮಾನ್ಯಾ ನಾಯ್ಡು
ಮಾನ್ಯಾ ನಾಯ್ಡು, ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಇವರು ಕನ್ನಡದಲ್ಲಿ ವರ್ಷ, ಶಾಸ್ತ್ರೀ, ಬೆಳ್ಳಿ ಬೆಟ್ಟ, ಶಂಭು, ಅಂಭಿ ಸುಂಟರಗಾಳಿ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಮಾನ್ಯಾ, ಪತಿ ವಿಕಾಸ್ ಭಾಜ್ ಪೈ ಜೊತೆ ಅಮೇರಿಕಾದಲ್ಲಿ ನೆಲೆಸಿದ್ದಾರೆ.
ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ
ಅರ್ಚನಾ ಕನ್ನಡ ಮತ್ತು ತಮಿಳು ಕಿರುತೆರೆಯ ಜನಪ್ರಿಯ ನಟಿ, ಜೊತೆಗೆ ಸಿನಿಮಾಗಳಲ್ಲೂ ಅರ್ಚನಾ ನಟಿಸಿದ್ದಾರೆ. ವಿಘ್ನೇಶ್ ಶರ್ಮಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ನಟಿ ಅಮೇರಿಕಾದಲ್ಲಿ ನೆಲೆಸಿದ್ದು, ಸದ್ಯ ನಟನೆ ಬಿಟ್ಟು ಎಚ್ ಆರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

