- Home
- Entertainment
- Sandalwood
- ನಾನು ಸೈಲೆಂಟ್ ಇರೋದು ಬಾಯಿ ಇಲ್ಲ ಅಂತಲ್ಲ, ಹೇಗೆ ತಟ್ಟಬೇಕೆನ್ನೋದು ಗೊತ್ತಿದೆ: ಸುದೀಪ್ ಖಡಕ್ ವಾರ್ನಿಂಗ್!
ನಾನು ಸೈಲೆಂಟ್ ಇರೋದು ಬಾಯಿ ಇಲ್ಲ ಅಂತಲ್ಲ, ಹೇಗೆ ತಟ್ಟಬೇಕೆನ್ನೋದು ಗೊತ್ತಿದೆ: ಸುದೀಪ್ ಖಡಕ್ ವಾರ್ನಿಂಗ್!
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಚಿತ್ರವು ಇದೇ 25ಕ್ಕೆ ಬಿಡುಗಡೆಯಾಗುತ್ತಿದ್ದು, ಚಿತ್ರದ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರಕ್ಕೆ ಅವರು ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಮ್ಮ ಮೌನಕ್ಕೆ ಕಾರಣ ಹೇಳಿ ಖಡಕ್ ಆಗಿ ಉತ್ತರಿಸಿದ್ದಾರೆ.

ಮಾರ್ಕ್ ಚಿತ್ರ
ಸದ್ಯ ಕಿಚ್ಚ ಸುದೀಪ್ ಅವರು ಅತ್ತ ಬಿಗ್ಬಾಸ್ ನಡೆಸಿಕೊಡುತ್ತಿದ್ದರೆ, ಇತ್ತ ಅವರ ನಟನೆಯ ‘ಮಾರ್ಕ್’ ಚಿತ್ರ ಇದೇ 25ಕ್ಕೆ ಬಿಡುಗಡೆ ಆಗಲಿದೆ. ಇದಾಗಲೇ ಮುಂಗಡವಾಗಿ ಅಡ್ವಾನ್ಸ್ ಬುಕಿಂಗ್ ಪ್ರಾರಂಭವೂ ಆಗಿದ್ದು, ಹಲವು ಶೋಗಳು ಹೌಸ್ಫುಲ್ ಆಗಿವೆ. ಅದೇ ದಿನ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಸಹ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಟಫ್ ಕಾಂಪಿಟೇಷನ್ ಇರುವ ಕಾರಣದಿಂದ ಎರಡೂ ತಂಡಗಳು ಭಾರಿ ಪ್ರಚಾರದಲ್ಲಿ ತೊಡಗಿದೆ.
ಪ್ರಚಾರ ಕಾರ್ಯದಲ್ಲಿ ಸುದೀಪ್
ಇದೀಗ ಸುದೀಪ್ ಅವರು, ಹಲವೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹುಬ್ಬಳ್ಳಿಗೆ ಹೋಗಿದ್ದ ಸುದೀಪ್ ಅವರು ಅಲ್ಲಿ ಕೆಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕೆಲವು ವಿಷಯಗಳನ್ನು ಒಗಟಾಗಿಯೂ ಮಾತನಾಡಿದ್ದಾರೆ.
ನನಗೆ ಬಾಯಿ ಇಲ್ಲ ಅಂತ ಅರ್ಥವಲ್ಲ
ನಾನು ಸೈಲೆಂಟ್ ಆಗಿದ್ದೇನೆ ಎಂದರೆ ನನಗೆ ಬಾಯಿ ಇಲ್ಲ ಅಂತ ಅರ್ಥವಲ್ಲ. ಕೆಲವೊಮ್ಮೆ ನನಗೆ ಅನಿಸುತ್ತೆ, ಸೈಲೆಂಟ್ ಆಗಿ ಇರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗೋಸ್ಕರ ಹೀಗೆ ಇರೋದು. ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ ಬಾಯಿ ಇದ್ದರೂ ಸೈಲೆಂಟ್ ಆಗಿ ಇದ್ದೇನೆ. ನಾವೆಲ್ಲರೂ ಒಳ್ಳೆಯ ಹೆಸರಲ್ಲಿ ಇರಬೇಕು ಎಂಬ ಕಾರಣಕ್ಕಾಗಿ ಹೀಗೆ ಮಾಡಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ ಸುದೀಪ್.
ನೆಗೆಟಿವ್ ಪ್ರಚಾರ
ತಮ್ಮ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ. ಹೊರಗಡೆ ಯುದ್ಧಕ್ಕೆ ನಾವು ಸಿದ್ಧ, ಯಾಕಂದರೆ ನಾವು ಮಾತಿಗೆ ಬದ್ಧ ಎಂದಿದ್ದಾರೆ. ನಿಮ್ಮ ಮುಂದೆ ಮಾತನಾಡಲು ತುಂಬಾ ಆಸೆ ಇದೆ. ಆದರೆ ಕೆಲವನ್ನು ಕಂಟ್ರೋಲ್ ಮಾಡ್ಕೊಂಡು ಮಾತಾಡ್ತೀನಿ ಎಂದು ಸುದೀಪ್ ಸೂಚ್ಯವಾಗಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ
12 ವರ್ಷಗಳ ಬಳಿಕ ಹುಬ್ಬಳ್ಳಿಯ ಅದೇ ವೇದಿಕೆಯ ಮೇಲೆ ಕಾರ್ಯಕ್ರಮ ನಡೆಸಿಕೊಡುತ್ತಿರುವ ಬಗ್ಗೆ ಮಾತನಾಡಿದ ಸುದೀಪ್ ಅವರು, ಮಾತಾಡೊದಕ್ಕೆ ತುಂಬಾ ಆಸೆ ಇದೆ. ಕೆಲವು ಕಂಟ್ರೋಲ್ ಮಾಡಿಕೊಂಡು ಮಾತಾಡುತ್ತೀನಿ ಎನ್ನುತ್ತಲೇ ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣ ಇದೆ ಎಂದಿದ್ದಾರೆ.
ಎಲ್ಲಿ ತಟ್ಟಬೇಕೋ ತಟ್ಟತ್ತೆ
ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಸಿಕೊಡುವ ಬಗ್ಗೆ ಹೇಳಿದ ಕಿಚ್ಚ, ‘ಕೆಲವು ಮಾತು ಈ ಹುಬ್ಬಳಿಗೆ ಬಂದು ವೇದಿಕೆ ಮೇಲೆ ಮಾತಾಡಿದರೆ ಸಂಪೂರ್ಣ ರಾಜ್ಯಕ್ಕೆ ಎಲ್ಲಿ ತಟ್ಟಬೇಕೋ ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ ಎಂದು ಅಲ್ಲಿಯೂ ಒಗಟಾಗಿ ಮಾತನಾಡಿದ್ದಾರೆ.
ನೆಗೆಟಿವ್ ಕಮೆಂಟ್ಸ್
ಅಷ್ಟಕ್ಕೂ ಸುದೀಪ್ ಹೀಗೆ ಮಾತನಾಡಿರುವುದಕ್ಕೆ ಕಾರಣವೂ ಇದೆ. ಅದೇನೆಂದರೆ, 'ಮಾರ್ಕ್' ಚಿತ್ರಕ್ಕೂ ಪೆಟ್ಟು ಕೊಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಇದರ ವಿರುದ್ಧ ಹಲವರು ಪ್ರಯತ್ನ ಮಾಡುತ್ತಿದ್ದಾರೆ. ಇದು ತಮಿಳು ಕಲಾವಿದರು, ತಂತ್ರಜ್ಞರು ಮಾಡಿರುವ ಸಿನಿಮಾ ಹಾಗಾಗಿ ನೋಡಬಾರದು ಎಂದು ಪೋಸ್ಟ್‌ಗಳು ವೈರಲ್ ಆಗ್ತಿದೆ. ಅದಕ್ಕಾಗಿಯೇ ಇಂಥವರಿಗೆ ಸುದೀಪ್ ಕೌಂಟರ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

