- Home
- Entertainment
- Sandalwood
- Darshan Thoogudeepa Birthday: ನಮ್ಮ ಜೋಡಿಗೆ ದೃಷ್ಟಿ ಹಾಕ್ಬೇಡಿ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ!
Darshan Thoogudeepa Birthday: ನಮ್ಮ ಜೋಡಿಗೆ ದೃಷ್ಟಿ ಹಾಕ್ಬೇಡಿ ಎಂದ ದರ್ಶನ್ ಪತ್ನಿ ವಿಜಯಲಕ್ಷ್ಮೀ!
ಪ್ರತಿ ವರ್ಷ ನಟ ದರ್ಶನ್ ತೂಗುದೀಪ ಅವರ ಜನ್ಮದಿನದಂದು ಮನೆ ಮುಂದೆ ಅಭಿಮಾನಿಗಳ ಸಾಗರ ನೆರದಿರುತ್ತದೆ. ಆದರೆ ಈ ಬಾರಿ ಅನಾರೋಗ್ಯದ ಕಾರಣಕ್ಕೆ ಅವರು ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡಿಕೊಳ್ತಿಲ್ಲ. ಕುಟುಂಬಸ್ಥರು, ಆತ್ಮೀಯರ ಜೊತೆಗೆ ಇರುವ ಅವರಿಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ಅವರು ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಪತಿ ದರ್ಶನ್ ಜೊತೆಗೆ ಅವರು ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ದೃಷ್ಟಿ ತಾಗಬಾರದು ಎಂಬ ಇಮೋಜಿ ಕೂಡ ಹಾಕಿದ್ದಾರೆ.
ಕನ್ನಡ ನಟ ದರ್ಶನ್ ಅವರ ಪುತ್ರ ವಿನೀಶ್ ಕೂಡ ತಂದೆಯ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಶುಭಾಶಯ ತಿಳಿಸಿದ್ದಾರೆ. ವಿನೀಶ್ ಸದ್ಯ ಓದುತ್ತಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ಕೂಡ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಆಳೋಕೆ ರೆಡಿಯಾಗಿ ಎಂದಿದ್ದಾರೆ. ವಿಶೇಷವಾದ ಘೋಷಣೆ ಕೂಡ ಮಾಡಲಿದ್ದಾರಂತೆ. .
ನಟ ಧನ್ವೀರ್ ಗೌಡ ಅವರು “ಸಂತೋಷ ಮತ್ತು ಯಶಸ್ಸು ಸದಾ ನಿಮ್ಮ ಜೊತೆಗಿರಲಿ, ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ, ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್). ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ” ಎಂದು ಹೇಳಿದ್ದಾರೆ.
“ಇಂದು ತುಂಬ ವಿಶೇಷವಾದ ದಿನ. ಯಾಕೆ? ಯಾಕೆಂದರೆ ನನ್ನ ಸ್ನೇಹಿತನ ಜನ್ಮದಿನ. ಅವನು ನನ್ನ ಖುಷಿಯ ದಿನಗಳನ್ನು ವಿಶೇಷವಾಗಿಸಿದ, ಕಷ್ಟದ ದಿನಗಳನ್ನು ಸುಲಭವಾಗಿ ಮಾಡಿದ್ದಾನೆ. ಅವನೊಬ್ಬ ಇದ್ದರೆ ಜೀವನ ಚೆನ್ನಾಗಿರುತ್ತದೆ. ಜನ್ಮದಿನದ ಶುಭಾಶಯಗಳು. ನೀವು ಇಂದು, ಎಂದೆಂದಿಗೂ ವಿಶೇಷವಾಗಿ ಇರುತ್ತೀಯಾ” ಎಂದು ನಟಿ ರಕ್ಷಿತಾ ಪ್ರೇಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಹಾಗೂ ದರ್ಶನ್ ಅವರ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಜೋಡಿಗೆ ದೊಡ್ಡ ನಟ್ಟದ ಅಭಿಮಾನಿಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.