ಬರೀ 37 ಸಾವಿರಕ್ಕೆ ಸಿಗುತ್ತಿದೆ 65 ಇಂಚಿನ ಸ್ಮಾರ್ಟ್ ಟಿವಿ, ಶೇ. 50ರಷ್ಟು ಡಿಸ್ಕೌಂಟ್
ಈ ಕಾಮರ್ಸ್ ಕಂಪನಿಗಳ ನಡುವೆ ದಿನೇ ದಿನೇ ಪೈಪೋಟಿ ಹೆಚ್ಚಾಗ್ತಿದೆ. ಇದರಿಂದಾಗಿ ಸಮಯದ ಪರಿವಿಲ್ಲದೆ ಆಫರ್‌ಗಳ ಸುರಿಮಳೆ ಆಗ್ತಿದೆ. ಈ ನಡುವೆ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗ್ತಿದೆ. ಈ ಡೀಲ್‌ನ ಸಂಪೂರ್ಣ ವಿವರಗಳನ್ನ ತಿಳಿಯಿರಿ..

ದೊಡ್ಡ ಸ್ಕ್ರೀನ್ ಇರುವ ಸ್ಮಾರ್ಟ್ ಟಿವಿಗಳನ್ನ ಕೊಳ್ಳೋಕೆ ಜನ ಮುಗಿಬೀಳ್ತಿದ್ದಾರೆ. ಆದ್ರೆ ದೊಡ್ಡ ಸ್ಕ್ರೀನ್ ಟಿವಿ ಕೊಳ್ಳೋಕೆ ದುಬಾರಿ ಬೆಲೆ ತೆರಬೇಕಾಗುತ್ತೆ. 65 ಇಂಚಿನ ಟಿವಿ ಕೊಳ್ಳಬೇಕಂದ್ರೆ ಕನಿಷ್ಠ ಅಂದ್ರು ರೂ. ಲಕ್ಷ ರೂಪಾಯಿ ಕೊಡಬೇಕು. ಆದ್ರೆ ಫ್ಲಿಪ್‌ಕಾರ್ಟ್‌ನಲ್ಲಿ ಒಂದು ಸ್ಮಾರ್ಟ್ ಟಿವಿ ಮೇಲೆ 50% ಡಿಸ್ಕೌಂಟ್ ಸಿಗ್ತಿದೆ.
ಥಾಮ್ಸನ್ 65 ಇಂಚಿನ ಕ್ಯೂಎಲ್ಇಡಿ ಸ್ಮಾರ್ಟ್ ಟಿವಿಯ ಅಸಲಿ ಬೆಲೆ ರೂ. 84,999 ರೂಪಾಯಿ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ 48% ಡಿಸ್ಕೌಂಟ್ ಇದೆ. ಅಂದ್ರೆ ಈ ಟಿವಿನ ಕೇವಲ ರೂ. 43,999ಕ್ಕೆ ನಿಮ್ಮದಾಗಿಸಬಹುದು. ಆಫರ್ ಇಷ್ಟಕ್ಕೆ ಮುಗಿಯಲ್ಲ. ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ನಿಂದ ಖರೀದಿ ಮಾಡಿದರೆ ಹೆಚ್ಚುವರಿಯಾಗಿ ರೂ. 1250 ಡಿಸ್ಕೌಂಟ್ ಸಿಗುತ್ತೆ. ಅಂದ್ರೆ ಈ ಟಿವಿ ಸುಮಾರು ರೂ. 42 ಸಾವಿರಕ್ಕೆ ಸಿಗುತ್ತೆ. ನಿಮ್ಮ ಹಳೆ ಟಿವಿನ ಎಕ್ಸ್ಚೇಂಜ್ ಮಾಡಿದ್ರೆ ಗರಿಷ್ಠ ರೂ. 5,400 ಡಿಸ್ಕೌಂಟ್ ಸಿಗುತ್ತೆ. ಉದಾಹರಣೆಗೆ ನಿಮ್ಮ ಹಳೆ ಟಿವಿಗೆ ರೂ. 5 ಸಾವಿರ ಎಕ್ಸ್ಚೇಂಜ್ ಸಿಕ್ಕಿದ್ರೆ 65 ಇಂಚಿನ ಟಿವಿನ ಕೇವಲ ರೂ. 37 ಸಾವಿರಕ್ಕೆ ಕೊಂಡುಕೊಳ್ಳಬಹುದು.
ಫೀಚರ್‌ಗಳ ಬಗ್ಗೆ ಹೇಳೋದಾದರೆ, ಈ ಟಿವಿಯಲ್ಲಿ 65 ಇಂಚಿನ ಕ್ಯೂಎಲ್ಇಡಿ ಅಲ್ಟ್ರಾ ಎಚ್‌ಡಿ 4ಕೆ ಸ್ಕ್ರೀನ್ ಇದೆ. ಈ ಸ್ಮಾರ್ಟ್ ಗೂಗಲ್ ಟಿವಿಯಲ್ಲಿ ಡಾಲ್ಟಿ ಆಟಮ್ಸ್ ಸೌಂಡ್ ಸಿಸ್ಟಮ್ ಇದೆ. 40 ವ್ಯಾಟ್ಸ್ ಸೌಂಡ್ ಔಟ್ಪುಟ್, ಡಿಟಿಎಸ್ ಸರೌಂಡ್, ಗೂಗಲ್ ಅಸಿಸ್ಟೆಂಟ್, ಡ್ಯುಯಲ್ ಬ್ಯಾಂಡ್ ವೈಫೈ ಫೀಚರ್‌ಗಳಿವೆ. ಈ ಟಿವಿ ನೆಟ್ಫ್ಲಿಕ್ಸ್, ಪ್ರೈಮ್, ಡಿಸ್ನಿ+ಹಾಟ್ಸ್ಟಾರ್, ಯೂಟ್ಯೂಬ್ ಆಪ್‌ಗಳಿಗೆ ಸಪೋರ್ಟ್ ಮಾಡುತ್ತೆ. 60 ಹೆಚ್ಜೆಡ್ ರಿಫ್ರೆಶ್ ರೇಟ್ ಈ ಸ್ಕ್ರೀನ್ಗಿದೆ.
ಸ್ಮಾರ್ಟ್ ಟಿವಿ ಆಫರ್
ಈ ಟಿವಿಯಲ್ಲಿ 2ಜಿಬಿ ರ್ಯಾಮ್, 16 ಜಿಬಿ ಸ್ಟೋರೇಜ್ ಇದೆ. ಈ ಟಿವಿ ಮೀಡಿಯಾಟೆಕ್ ಎಂಟಿ9602 ಪ್ರೊಸೆಸರ್ನಲ್ಲಿ ಕೆಲಸ ಮಾಡುತ್ತೆ. ಕನೆಕ್ಟಿವಿಟಿ ಬಗ್ಗೆ ಹೇಳೋದಾದ್ರೆ ಇದರಲ್ಲಿ ಈಥರ್ನೆಟ್, ಹೆಚ್ಡಿಎಂಐ, ಬ್ಲೂಟೂತ್ 5.0, ಆಪಲ್ ಏರ್ಪ್ಲೇ ಫೀಚರ್ಗಳಿವೆ. 600 ನಿಟ್ಸ್ ಬ್ರೈಟ್ನೆಸ್ ಈ ಸ್ಕ್ರೀನ್ಗಿದೆ. 1.1 ಬಿಲಿಯನ್ ಕಲರ್ಸ್ಗೆ ಈ ಸ್ಕ್ರೀನ್ ಸಪೋರ್ಟ್ ಮಾಡುತ್ತೆ. ಕಂಪನಿ ಒಂದು ವರ್ಷದ ವಾರಂಟಿ ಕೊಡ್ತಿದೆ.
ಗಮನಿಸಿ: ಈ ಮಾಹಿತಿಯನ್ನ ಪ್ರಾಥಮಿಕವಾಗಿ ಮಾತ್ರ ಪರಿಗಣಿಸಿ. ಆನ್ಲೈನ್ನಲ್ಲಿ ಯಾವುದೇ ಪ್ರಾಡಕ್ಟ್ ಕೊಳ್ಳೋ ಮುನ್ನ ಬೇರೆ ಯೂಸರ್ಗಳ ರಿವ್ಯೂ, ರೇಟಿಂಗ್ ಪರಿಗಣಿಸಿ ಕೊಳ್ಳೋದು ಉತ್ತಮ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.